ಮುಂಬೈ ಕಟ್ಟಡ ಕುಸಿತ; 2 ಸಾವು, 13 ಜನರ ರಕ್ಷಣೆ

ಮುಂಬೈ, ಜುಲೈ 16 : ಗುರುವಾರ ಸಂಜೆ ದಕ್ಷಿಣ ಮುಂಬೈನ ವಸತಿ ಪ್ರದೇಶದಲ್ಲಿ 5 ಅಂತಸ್ತಿನ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿತ್ತು. ರಕ್ಷಣಾ ಕಾರ್ಯಾಚರಣೆ ಇನ್ನೂ ಸಹ ಮುಂದುವರೆದಿದೆ. ಘಟನೆಯಲ್ಲಿ ಇದುವರೆಗೂ ಇಬ್ಬರು ಮೃತಪಟ್ಟಿದ್ದಾರೆ.

Recommended Video

      Oxford Covid Vaccine ಮಾನವ ಪ್ರಯೋಗದ ಪಲಿತಾಂಶ ಇಂದು | Oneindia Kannada

      ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಅವಶೇಷಗಳಡಿ ಸಿಲುಕಿದ್ದ 13 ಜನರನ್ನು ಇದುವರೆಗೂ ರಕ್ಷಣೆ ಮಾಡಲಾಗಿದೆ. 65 ವರ್ಷದ ವೃದ್ಧ ಸೇರಿದಂತೆ ಇಬ್ಬರ ಶವಗಳನ್ನು ಹೊರತೆಗೆಯಲಾಗಿದೆ.

      Mumbai Building Collapsed 2 Dead 13 Rescued

      ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಭವ್ ಠಾಕ್ರೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಂಬೈ ನಗರದಲ್ಲಿ ಮಳೆ ಸುರಿಯುತ್ತಿದ್ದು, ಇದರ ನಡುವೆಯೇ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

      ವಸತಿ ಪ್ರದೇಶದಲ್ಲಿ ಒಂದು ಭಾಗ ಮಾತ್ರ ಕುಸಿದು ಬಿದ್ದಿತ್ತು. ಮತ್ತೊಂದು ಭಾಗದಲ್ಲಿನ ಮನೆಯಲ್ಲಿ ಜನರು ಇದ್ದರು. ಅವರನ್ನು ಅಗ್ನಿ ಶಾಮಕದ ದಳದ ಅಧಿಕಾರಿಗಳು ರಕ್ಷಣೆ ಮಾಡಿದರು.

      ಕಟ್ಟಡ ಕುಸಿತ ಸಂಭವಿಸಿದಾಗ 4 ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆಯನ್ನು ಆರಂಭಿಸಿದರು. ಬಳಿಕ ಎನ್‌ಡಿಆರ್‌ಎಫ್ ತಂಡ ಕಾರ್ಯಾಚರಣೆಗೆ ಕೈ ಜೋಡಿಸಿದೆ. ಭಾರಿ ಮಳೆಯ ಕಾರಣ ಕಟ್ಟಡ ಕುಸಿದು ಬಿದ್ದಿರಬಹುದು ಎಂದು ಶಂಕಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+