ಮುಂಬೈ ರೈಲ್ವೆ ಹಳಿ ಮೇಲೆ ರಕ್ತಸಿಕ್ತವಾಗಿ ಸಿಕ್ಕ ಬಾಲಕಿ ಶವ

ಮುಂಬೈ, ನವೆಂಬರ್ 11: ಇಲ್ಲಿನ ವಿದ್ಯಾವಿಹಾರ್ ರೈಲ್ವೆ ನಿಲ್ದಾಣದ ಹಳಿ ಮೇಲೆ ರಕ್ತಸಿಕ್ತವಾಗಿದ್ದ 10 ವರ್ಷದ ವಯಸ್ಸಿನ ಬಾಲಕಿಯ ಶವ ಪತ್ತೆಯಾಗಿದೆ. ನವೆಂಬರ್ 5ರಿಂದ ಕಾಣೆಯಾಗಿದ್ದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕೊಂದು ರೈಲ್ವೆ ಹಳಿ ಮೇಲೆ ಎಸೆಯಲಾಗಿದೆ.

ಬಾಲಕಿಯ ಶವದ ಪರೀಕ್ಷೆ ನಂತರ ಅತ್ಯಾಚಾರ, ಕತ್ತು ಹಿಸುಕಿ ಸಾಯಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ. ಅತ್ಯಾಚಾರ ಎಸಗಿದ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಸಿಸಿಟಿವಿ ದೃಶ್ಯ ನೆರವು: ನಾಪತ್ತೆಯಾಗಿದ್ದ ಬಾಲಕಿ ಬಗ್ಗೆ ರೈಲ್ವೆ ನಿಲ್ದಾಣ ಸೇರಿ ಎಲ್ಲೆಡೆ ಪೋಸ್ಟರ್ ಹಾಕಲಾಗಿತ್ತು. ಇದರಿಂದ ಶವದ ಗುರುತು ಪತ್ತೆ ಸುಲಭವಾಯಿತು. ಇನ್ನು ಅತ್ಯಾಚಾರ ಎಸಗಿದ ವ್ಯಕ್ತಿಯ ಬಗ್ಗೆ ಸಿಸಿಟಿವಿ ಫುಟೇಜ್ ನಿಂದ ಮಾಹಿತಿ ಸಿಕ್ಕಿದೆ. ನವೆಂಬರ್ 05ರಂದು ಬಾಲಕಿಯನ್ನು ಕರೆದುಕೊಂಡು ನಿಲ್ದಾಣದಿಂದ ಹೊರಗಡೆ ಆರೋಪಿ ಓಡಾಡಿದ್ದಾನೆ.

Mumbai: 10-year-old raped, strangulated to death; body found near Vidyavihar railway Track

ಆರೋಪಿಯ ಮುಖ ಚಹರೆ ಪತ್ತೆಯಾದ ಬಳಿಕ ಎಲ್ಲೆಡೆ ಆತನ ಬಗ್ಗೆ ವಿಚಾರಿಸಿದ ಪೊಲೀಸರು, ಸಾಮಾಜಿಕ ಜಾಲ ತಾಣಗಳನ್ನು ಬಳಸಿ ಮಾಹಿತಿ ಸಂಗ್ರಹಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಭಾನುವಾರದಂದು ಒಂದು ಬಾಟಲಿ ಫಿನಾಯಿಲ್ ಹಾಗೂ ಚಾಕು ಹಿಡಿದುಕೊಂಡು ಓಡಾಡುತ್ತಿದ್ದ ವ್ಯಕ್ತಿಯನ್ನು ಗುರುತಿಸಿದ ಸ್ಥಳೀಯರೊಬ್ಬರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+