ಮೋದಿ ಅನ್ಯಗ್ರಹಕ್ಕೂ ಹೋಗ್ತಾರೆ: ಶಿವಸೇನೆ ವ್ಯಂಗ್ಯ

ಮುಂಬೈ, ಜೂನ್ 20: ಪ್ರಧಾನಿ ಮೋದಿ ಇನ್ನು ಮುಂದೆ ಅನ್ಯಗ್ರಹಗಳ ಪ್ರವಾಸವನ್ನೂ ಮಾಡುತ್ತಾರೆ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ವ್ಯಂಗ್ಯವಾಡಿದ್ದಾರೆ.

ಶಿವಸೇನೆಯ 52ನೇ ಸಂಸ್ಥಾಪನಾ ದಿನದಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರು.

ನರೇಂದ್ರ ಮೋದಿ ಕೇವಲ ಸುಳ್ಳು ಭರವಸೆಗಳನ್ನು ನೀಡಿ 2014ರಲ್ಲಿ ಅಧಿಕಾರಕ್ಕೆ ಬಂದ್ದಿದ್ದಾರೆ ಎಂದು ಆರೋಪಿಸಿದ ಅವರು, ಮೋದಿ ಅವರ ವಿದೇಶ ಪ್ರವಾಸಗಳ ಬಗ್ಗೆ ಮೇಲಿನಂತೆ ವ್ಯಂಗ್ಯವಾಡಿದರು.

Modi may visit alien planet soon : Uddhav Thackeray

ಜಮ್ಮು ಕಾಶ್ಮೀರದಲ್ಲಿ ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರ ಮುರಿದುಬಿದ್ದ ಬಗ್ಗೆ ಮಾತನಾಡಿದ ಉದ್ಧವ್ ಠಾಕ್ರೆ, 600 ಸೈನಿಕರನ್ನು ಬಲಿಕೊಟ್ಟ ಮೇಲೆ ಮೈತ್ರಿ ಸರ್ಕಾರ ಅಪ್ರಯೋಜಕ ಎಂದು ಗೊತ್ತಾಯಿತಾ ಎಂದು ಹರಿಹಾಯ್ದರು.

ರಂಜಾನ್ ಹಬ್ಬದ ಸಮಯ ಕದನ ವಿರಾಮ ಘೋಷಿಸಿದ್ದರ ಬಗ್ಗೆಯೂ ಟೀಕಿಸಿದ ಅವರು, ಗಣೇಶ ಹಬ್ಬ, ದೀಪಾವಳಿ ಹಬ್ಬದಂದು ಪಾಕಿಸ್ತಾನ ಇದೇ ನೀತಿ ಅನುಸರಿಸುತ್ತದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಬಿಜೆಪಿ ವಿರುದ್ಧ ಕೆಂಡಾಮಂಡಲವಾಗಿರುವ ಶಿವಸೇನೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಇತ್ತೀಚೆಗೆ ಮಾಡುತ್ತಿದೆ. ಶಿವಸೇನೆಯು ಎನ್‌ಡಿಎ ಮೈತ್ರಿಕೂಟದಿಂದ ಜನವರಿಯಲ್ಲಿ ಹೊರಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+