'ಮೈನೆ ಪ್ಯಾರ್ ಕಿಯಾ' ಸಿನಿಮಾ ಖ್ಯಾತಿಯ ನಟಿ ಭಾಗ್ಯಶ್ರೀ ಪತಿಯ ಬಂಧನ

ಮುಂಬೈ, ಜುಲೈ 3: 'ಮೈನೆ ಪ್ಯಾರ್ ಕಿಯಾ' ಸಿನಿಮಾ ಖ್ಯಾತಿಯ ನಟಿ ಭಾಗ್ಯಶ್ರೀ ಅವರ ಪತಿ ಜೂಜಾಟದ ಜಾಲದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಬಂಧಿಸಲಾಗಿತ್ತು. ಮುಂಬೈನ ಜೋಗೇಶ್ವರಿಯಲ್ಲಿ ನಡೆಯುತ್ತಿದ್ದ ಜೂಜು ದಂಧೆಯಲ್ಲಿ ಆತ ತೊಡಗಿದ್ದ ಎನ್ನಲಾಗಿದೆ. ನಟ- ನಿರ್ಮಾಪಕ ಹಿಮಾಲಯ ದಾಸಾನಿಯನ್ನು ಮಂಗಳವಾರ ಆತನ ಮನೆಯಲ್ಲಿ ಬಂಧಿಸಲಾಯಿತು ಎಂದು ಅಂಬೋಲಿ ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಕೋರ್ಟ್ ನಲ್ಲಿ ಹಿಮಾಲಯ ದಾಸಾನಿಯನ್ನು ಹಾಜರು ಪಡಿಸಿದ್ದು, ಜಾಮೀನು ಸಹ ದೊರೆತಿದೆ. ಅಂಬೋಲಿ ಪೊಲೀಸರು ಜೂಜಿನ ಜಾಲವೊಂದನ್ನು ಭೇದಿಸಿದ್ದರು. ಬಂಧಿತ ಆರೋಪಿಗಳನ್ನು ವಿಚಾರಣೆ ಮಾಡುವ ವೇಳೆ ದಾಸಾನಿ ಹೆಸರು ಕೂಡ ಕೇಳಿಬಂದಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Maine Pyar Kiya movie fame actress Bhagyasree husband arrested

ಹಿಮಾಲಯ ದಾಸಾನಿ 1992ರಲ್ಲಿ 'ಪಾಯಲ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು, ಸದ್ಯಕ್ಕೆ ಆತ ನಿರ್ಮಾಪಕ ಹಾಗೂ ಉದ್ಯಮಿ. ಇನ್ನು ನಟಿ ಭಾಗ್ಯಶ್ರೀ ಅವರು ಕನ್ನಡದಲ್ಲಿ ನಟ ಶಿವರಾಜಕುಮಾರ್ ಅವರ ಜತೆಗೆ 'ಅಮ್ಮಾವ್ರ ಗಂಡ' ಚಿತ್ರದಲ್ಲಿ ನಟನೆ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+