ಮಹಾರಾಷ್ಟ್ರದಲ್ಲಿ ಸಚಿವ ಜಿತೇಂದ್ರ ಅವಾದ್‌ಗೆ ಕೊರೊನಾ ಸೋಂಕು

ಮುಂಬೈ, ಏಪ್ರಿಲ್ 24: ಮಹಾರಾಷ್ಟ್ರದಲ್ಲಿ ಡೆಡ್ಲಿ ವೈರಸ್ ಕೊರೊನಾ ಅಟ್ಟಹಾಸ ಮಾಡುತ್ತಿದೆ. ದೇಶದಲ್ಲಿ 20 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, ಮಹಾರಾಷ್ಟ್ರ ಒಂದರಲ್ಲೇ 6 ಸಾವಿರ ಗಡಿದಾಟಿದೆ.

ಇದೀಗ, ಮಹಾರಾಷ್ಟ್ರದಲ್ಲಿ ವಸತಿ ಸಚಿವರಿಗೆ ಡೆಡ್ಲಿ ಕೊರೊನಾ ಸೋಂಕು ತಗುಲಿದೆ. ಸಚಿವ ಜಿತೇಂದ್ರ ಅವಾದ್‌ ಅವರಿಗೆ ಕೊವಿಡ್ ಸೋಂಕು ಕಾಣಿಸಿಕೊಂಡಿದ್ದು, ಮುಂಜಾಗ್ರತೆ ಕ್ರಮವಾಗಿ ಅವರನ್ನು ಆಸ್ಪತ್ರೆಯೆ ಐಸೋಲೇಶನ್ ವಾರ್ಡ್‌ನಲ್ಲಿರಿಸಲಾಗಿದೆ.

ಸಚಿವ ಸಿಬ್ಬಂದಿಗಳಲ್ಲಿ ಕೊರೊನಾ ರೋಗದ ಲಕ್ಷಣ ಕಾಣಿಸಿಕೊಂಡ ನಂತರ, ಅವರನ್ನು ಪರೀಕ್ಷಿಸಲಾಗಿತ್ತು. ಸುಮಾರು 15 ಜನರನ್ನು ಕ್ವಾರೆಂಟೈನ್‌ ಮಾಡಲಾಗಿತ್ತು. ಅವರಲ್ಲಿ ಕೆಲವರಿಗೆ ಕೊವಿಡ್ ಸೋಂಕು ಪತ್ತೆಯಾಗಿತ್ತು.

 Maharashtra Minister Tested Coronavirus Positive

ಇದಕ್ಕೂ ಮುಂಚೆ ಈ ಪೊಲೀಸ್ ಅಧಿಕಾರಿಗಳನ್ನು ಮಿನಿಸ್ಟರ್ ಭೇಟಿ ಮಾಡಿದ್ದರು. ಬಹುಶಃ ಇವರ ಸಂಪರ್ಕದಿಂದಲೇ ವಸತಿ ಸಚಿವರಿಗೆ ಕೊರೊನಾ ಅಂಟಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಏಪ್ರಿಲ್ 13 ರಂದು ಮುನ್ನಚ್ಚರಿಕೆ ಕ್ರಮವಾಗಿ ಸಚಿವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ ಸಮಯದಲ್ಲಿ ಮಿನಿಸ್ಟರ್‌ಗೆ ನೆಗಿಟಿವ್ ಫಲಿತಾಂಶ ಬಂದಿತ್ತು. ಆದ್ರೀಗ, ಕೊರೊನಾ ಪಾಸಿಟಿವ್ ಬಂದಿದೆ.

ಅಂದ್ಹಾಗೆ, ಸಚಿವ ಜಿತೇಂದ್ರ ಅವಾದ್‌ ಅವರ ಜೊತೆ ಸಂಪರ್ಕದಲ್ಲಿದ್ದವರನ್ನು ಗಮನಿಸಿದರೆ, ಇದರ ಚೈನ್ ಲಿಂಕ್ ಬಹಳ ದೊಡ್ಡದಿದೆ ಎನಿಸುತ್ತಿದೆ. ಮೇಲ್ನೋಟಕ್ಕೆ ಪೊಲೀಸ್ ಅಧಿಕಾರಿಗಳಿಂದಲೇ ಸಚಿವರಿಗೆ ಸೋಂಕು ಅಂಟಿಕೊಂಡಿದೆ ಎನ್ನುತ್ತಿದ್ದರೂ, ಆ ಪೊಲೀಸರಿಗೆ ತಬ್ಲಿಘಿಗಳಿಂದ ಸೋಂಕು ಬಂದಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಯಾಕಂದ್ರೆ, ತಬ್ಲಿಘಿಗಳ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸರ ಜೊತೆ ನಂತರದ ದಿನದಲ್ಲಿ ಮಂತ್ರಿಗಳು ಚರ್ಚಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+