ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವೀಸ್ ಪತ್ನಿ ಸೆಲ್ಫಿ ಹುಚ್ಚು: ವಿಡಿಯೋ ವೈರಲ್

Recommended Video

      ಮಹಾರಾಷ್ಟ್ರ ಸಿ ಎಂ ದೇವೇಂದ್ರ ಫಡ್ನವಿಸ್ ಪತ್ನಿಯ ಸೆಲ್ಫಿಯೇ ಹುಚ್ಚು | ವೈರಲ್ ವಿಡಿಯೋ | Oneindia Kannada

      ಮುಂಬೈ, ಅಕ್ಟೋಬರ್ 22: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್ ಅವರ ಸೆಲ್ಫಿ ಹುಚ್ಚಿನ ವಿಡಿಯೋ ಈಗ ವೈರಲ್ ಆಗಿದೆ. ಮಾತ್ರವಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೂ ಒಳಗಾಗಿದೆ.

      ಸೆಲ್ಫಿ ಹುಚ್ಚಿನಿಂದ ಅನೇಕರು ಜೀವ ಕಳೆದುಕೊಂಡ ನಿದರ್ಶನ ಇರುವಾಗ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಅದರ ವಿರುದ್ಧ ಜಾಗೃತಿ ಮೂಡಿಸುವುದನ್ನು ಬಿಟ್ಟು, ತಾವೇ ಸೆಲ್ಫಿ ಹುಚ್ಚಿಗೆ ಪ್ರಚೋದನೆ ನೀಡುವಂತೆ ವರ್ತಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ.

      ಶನಿವಾರ ಮುಂಬೈ-ಗೋವಾ ವಿಹಾರ ನೌಕೆಯಲ್ಲಿ ತೆರಳಿದ್ದ ಅಮೃತಾ ಫಡ್ನವೀಸ್, ತಮ್ಮ ಭದ್ರತಾ ಅಧಿಕಾರಿಗಳ ಎಚ್ಚರಿಕೆಯ ಮಾತುಗಳಿಗೆ ಕಿವಿಗೊಡದೆ ಹಡಗಿನ ಅಂಚಿನಲ್ಲಿ ಕುಳಿತು ಸೆಲ್ಫಿ ತೆಗೆದುಕೊಂಡಿದ್ದಾರೆ.

      ಸುರಕ್ಷತೆಗೆ ಅಳವಡಿಸಿದ್ದ ತಡೆಯನ್ನೂ ದಾಟಿ ಅವರು ತುದಿಯಲ್ಲಿ ಕುಳಿತು ಸಮುದ್ರದ ನೀರು ಸ್ಪಷ್ಟವಾಗಿ ಕಾಣಿಸಿಸುವಂತೆ ಮೊಬೈಲ್‌ನಲ್ಲಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಇದು ತೀವ್ರ ವಿವಾದ ಮತ್ತು ಟೀಕೆಗೆ ಕಾರಣವಾಗಿದೆ.

      ಮೊದಲ ಆಂತರಿಕ ಸೇವೆ

      ಮೊದಲ ಆಂತರಿಕ ಸೇವೆ

      ಭಾರತದ ಮೊದಲ ಆಂತರಿಕ ಸಂಪರ್ಕ ಸೇವಾ ನೌಕೆ ಆಂಗ್ರಿಯಾಕ್ಕೆ ಶನಿವಾರ ಸಂಜೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಿದ್ದರು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಪತ್ನಿ ಅಮೃತಾ ಕೂಡ ಈ ನೌಕೆಯಲ್ಲಿದ್ದರು.

      Array

      ಎಚ್ಚರಿಕೆಗೆ ಕಿವಿಗೊಡದ ಅಮೃತಾ

      ನೌಕೆ ಸಮುದ್ರದಲ್ಲಿ ಸಾಗತೊಡಗಿದಾಗ ಸೆಲ್ಫಿ ತೆಗೆದುಕೊಳ್ಳಲು ಅಮೃತಾ ಮುಂದಾದರು. ಸಮುದ್ರದ ಹಿನ್ನೆಲೆ ಚಿತ್ರದಲ್ಲಿ ಸರಿಯಾಗಿ ಮೂಡದ ಕಾರಣ ಅವರು ನೌಕೆಯ ಮುಂಭಾಗದ ತುದಿಗೆ ತೆರಳಿದರು. ಅವರ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸರು ಅವರನ್ನು ಅಲ್ಲಿಗೆ ತೆರಳದಂತೆ ತಡೆಯುವಲ್ಲಿ ವಿಫಲರಾದರು. ಭದ್ರತಾ ಅಧಿಕಾರಿಗಳ ಎಚ್ಚರಿಕೆಗೂ ಕಿವಿಗೊಡದೆ ಅಂಚಿನಲ್ಲಿ ಕುಳಿತು ಸೆಲ್ಫಿ ಕ್ಲಿಕ್ಕಿಸಿಕೊಂಡರು.

      ಬೈಕ್ ಸವಾರರ ಮೇಲೆ ಮಾತ್ರವೇ?

      ಮುಂಬೈ ಪೊಲೀಸರು ಗಣ್ಯರೆನಿಸಿಕೊಂಡ ವಿವಿಐಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆಯೇ ಅಥವಾ ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುವವರ ಮೇಲೆ ಮಾತ್ರವೇ? ಚೆನ್ನಾಗಿರುವ ಸೆಲ್ಫಿ ತೆಗೆದುಕೊಳ್ಳುವ ಸಲುವಾಗಿ ಸಿಎಂ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಸುರಕ್ಷತೆಯ ಎಚ್ಚರಿಕೆಗಳನ್ನು ಮೀರಿದ್ದಾರೆ ಎಂದು ಇಮ್ರಾನ್ ಸೋಲಂಕಿ ಎಂಬುವವರು ಆರೋಪಿಸಿದ್ದಾರೆ.

      ಪತ್ನಿಯಿಂದ ಹಿನ್ನಡೆ

      ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ಮಾತಿದೆ. ಆದರೆ, ದೇವೇಂದ್ರ ಫಡ್ನವೀಸ್ ಅವರ ಹಿನ್ನಡೆಯು ಅವರ ಪತ್ನಿಯಿಂದಲೇ ಉಂಟಾಗಲಿದೆ ಎಂದು ವೆಂಕಟರಾಮನ್ ಎಂಬುವವರು ಟ್ವೀಟ್ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+