ಸೆಲೆಬ್ರಿಟಿಗಳಿಗೆ ಮತದಾನ ಗುಂಗು, ತಾರೆಯರ ಕೈಯಲ್ಲಿ ಶಾಯಿ ರಂಗು!

ಮುಂಬೈ, ಏಪ್ರಿಲ್ 29 : ಲೋಕಸಭೆ ಚುನಾವಣೆಗೆ ನಾಲ್ಕನೇ ಹಂತದ ಮತದಾನ ಏಪ್ರಿಲ್ 29ರಂದು ನಡೆಯುತ್ತಿದ್ದು, ಮಹಾರಾಷ್ಟ್ರದ 17 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಇವುಗಳಲ್ಲಿ ಮುಂಬೈಯ ಆರು ಕ್ಷೇತ್ರಗಳೂ ಸೇರಿರುವುದರಿಂದ ಇಂದಿನ ಮತದಾನಕ್ಕೆ ಹೊಸ ರಂಗು ಬಂದಿದೆ.

ಬಾಲಿವುಡ್ ತಾರೆಯರ ತವರೂರಾದ ಮುಂಬೈಯಲ್ಲಿ ಮತ ಚಲಾಯಿಸುವ ಮೂಲಕ ಹಲವು ಜನಪ್ರಿಯ ತಾರೆಯರು ತಮ್ಮ ಸಾಂವಿಧಾನಿಕ ಹಕ್ಕನ್ನು ನೆನಪಿಸಿದರು. ಮಹಾರಾಷ್ಟ್ರದಲ್ಲಿ ಇಂದು ನಡೆದ ಚುನಾವಣೆಯ ಫಲಿತಾಂಶ ಮೇ 23ರಂದು ಹೊರಬೀಳಲಿದೆ.

ಬಾಲಿವುಡ್ ನ ಹಿರಿಯ ಅಭಿನೇತ್ರಿಗಳಾದ ರೇಖಾ, ಅಮಿತಾಭ್ ಬಚ್ಚನ್, ಗುಲ್ಜಾರ್, ಆಶಾ ಭೋಸ್ಲೆ, ಅಮೀರ್ ಖಾನ್ ಆದಿಯಾಗಿ, ಕ್ರಿಕೆಟ್ ತಾರೆಯರು, ಉದ್ಯಮಿಗಳು ಹೀಗೆ ನಾನಾ ರಂಗಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡ ನೂರಾರು ಸೆಲೆಬ್ರಿಟಿಗಳು ಉತ್ಸಾಹದಿಂದ ಮತ ಚಲಾಯಿಸಿದರು. ವಿಶೇಷವೆಂದರೆ, ರಂಗೀಲಾ ಖ್ಯಾತಿ ಊರ್ಮಿಳಾ ಮಾತೋಂಡ್ಕರ್ ಅವರು ಕೂಡ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸುತ್ತಿದ್ದಾರೆ.

ಕಳೆದ ಚುನಾವಣೆಯಲ್ಲಿ 48 ಸೀಟುಗಳಲ್ಲಿ ಬಿಜೆಪಿ 23 ಸೀಟು ಗೆದ್ದಿದ್ದರೆ, ಶಿವಸೇನೆ 18 ಕ್ಷೇತ್ರಗಳಲ್ಲಿ ಗೆದ್ದಿತ್ತು. ನ್ಯಾಷನಲ್ ಕಾಂಗ್ರೆಸ್ ಪಕ್ಷ 7ರಲ್ಲಿ ಮತ್ತು ಕಾಂಗ್ರೆಸ್ ಕೇವಲ 2 ಸೀಟು ಮಾತ್ರ ಗೆದ್ದಿತ್ತು.

ಮುಂಬೈಯಲ್ಲಿ ಇಂದು ಮತ ಚಲಾಯಿಸಿದ ಬಾಲಿವುಡ್ ತಾರೆಯರ ಕೆಲವು ಝಲಕು ನಿಮಗಾಗಿ ಇಲ್ಲಿದೆ....

ಆಮಿರ್ ಖಾನ್

ಆಮಿರ್ ಖಾನ್

ಮತ ಚಲಾಯಿಸಿ ಫೋಟೋಕ್ಕೆ ಪೋಸು ನೀಡಿದ, ದಂಗಲ್ ಖ್ಯಾತಿಯ ಬಾಲಿವುಡ್ ನಟ ಆಮೀರ್ ಖಾನ್ ಮತ್ತು ಪತ್ನಿ ನಿರ್ಮಾಪಕಿ ಕಿರಣ್ ರಾವ್.

ಸೋನಾಲಿ ಬೇಂದ್ರೆ

ಸೋನಾಲಿ ಬೇಂದ್ರೆ

ಪತಿ, ಚಿತ್ರ ನಿರ್ಮಾಪಕ ಗೋಲ್ಡಿ ಬೆಹ್ಲ್ ಜೊತೆ ಮತಚಲಾಯಿಸಿದ ಪತ್ನಿ ಸೋನಾಲಿ ಬೇಂದ್ರೆ. ಅವರು ಇತ್ತೀಚೆಗಷ್ಟೇ ಅಮೆರಿಕದಲ್ಲಿ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದು ಮುಂಬೈಗೆ ವಾಪಸ್ಸಾಗಿದ್ದರು.

ಬೆಳಗ್ಗೆಯೇ ಕ್ಯೂನಲ್ಲಿ ನಿಂತು ಮತದಾನ ಮಾಡಿದ ಬಾಲಿವುಡ್ ಸ್ಟಾರ್ಸ್

ಸಂಜಯ್ ದತ್

ಸಂಜಯ್ ದತ್

ಪತ್ನಿ ಮಾನ್ಯತಾ ದತ್ ಜೊತೆ ಮತ ಚಲಾಯಿಸಿದ ಬಾಲಿವುಡ್ ನಟ ಸಂಜಯ್ ದತ್. ಇತ್ತೀಚೆಗಷ್ಟೇ ರಣಬೀರ್ ಕಪೂರ್ ಅಭಿನಯದ ಅವರ ಬಯೋಪಿಕ್ 'ಸಂಜು' ಬಿಡುಗಡೆಯಾಗಿ, ಬಾಕ್ಸ್ ಆಫೀಸಿನಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು.

ಊರ್ಮಿಳಾ ಮಾತೋಂಡ್ಕರ್

ಊರ್ಮಿಳಾ ಮಾತೋಂಡ್ಕರ್

ಮತ ಚಲಾಯಿಸಿದ ನಂತರ ತಮ್ಮ ಸಂತಸವನ್ನು ನಟಿ ಊರ್ಮಿಳಾ ಮಾತೋಂಡ್ಕರ್ ಹಂಚಿಕೊಂಡಿದ್ದು ಹೀಗೆ... ಅವರು ಮುಂಬೈ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯೂ ಹೌದು. ರಂಗೀಲಾ ಖ್ಯಾತಿಯ ಊರ್ಮಿಳಾ ಮಾತೋಂಡ್ಕರ್ ಅವರು ಪ್ರಥಮ ಬಾರಿಗೆ ಚುನಾವಣಾ ಕಣಕ್ಕೆ ಧುಮುಕಿದ್ದಾರೆ.

ಅನಿಲ್ ಅಂಬಾನಿ

ಅನಿಲ್ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ ನ ಚೇರ್ ಮನ್ ಅನಿಲ್ ಅಂಬಾನಿ ಅವರೂ ಇಂದು ಮುಂಬೈನಲ್ಲಿ ಮತಚಲಾಯಿಸಿದರು. ನಂತರ ಅವರು ಪತ್ರಕರ್ತರಿಗೆ ಪೋಸು ನೀಡಿದ್ದು ಹೀಗೆ. ಅವರ ಪತ್ನಿ, ಖ್ಯಾತ ಮಾಜಿ ನಟಿ ಟೀನಾ ಮುನೀಮ್ ಅವರು ಅನಿಲ್ ಜೊತೆ ಯಾಕೋ ಕಂಡುಬಂದಿಲ್ಲ.

Array

ಸಚಿನ್ ತೆಂಡೂಲ್ಕರ್

ಮುಂಬೈಯಲ್ಲಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಪತ್ನಿ ಅಂಜಲಿ, ಪುತ್ರ ಅರ್ಜುನ್ ಮತ್ತು ಪುತ್ರಿ ಸಾರಾ ಜೊತೆ ಮತ ಚಲಾಯಿಸಿ, ಪೋಸು ನೀಡಿದ್ದು ಹೀಗೆ.

Array

ಸಲ್ಮಾನ್ ಖಾನ್

ಮುಂಬೈಯ ಬಾಂದ್ರಾದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಮತ ಚಲಾಯಿಸಿದ ನಂತರ ಕಂಡುಬಂದಿದ್ದು ಹೀಗೆ. ಸಲ್ಮಾನ್ ಖಾನ್ ಅವರು ಬೀಯಿಂಗ್ ಹ್ಯೂಮನ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

ಕರೀನಾ ಕಪೂರ್

ಬಾಲಿವುಡ್ ಬೇಬ್ ಕರೀನಾ ಕಪೂರ್ ಅವರು ಬಿಳಿ ಬಟ್ಟೆ ತೊಟ್ಟು ಮತ ಚಲಾಯಿಸಿದ ನಂತರ ಪೋಸು ನೀಡಿದ್ದು ಹೀಗೆ.

ಅಮಿತಾಬ್ ಬಚ್ಚನ್

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಬಚ್ಚನ್ ಅವರು ಜುಹು ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+