ಮುಂಬೈ, ಪುಣೆಗೆ ಆಘಾತಕಾರಿ ಸುದ್ದಿ ನೀಡಿದ ಮಹಾ ಸಿಎಂ

ಮುಂಬೈ, ಮೇ 1: ಮೇ 3 ರಂದು ಲಾಕ್‌ಡೌನ್ ತೆರವಾಗಬಹುದು ಎಂದು ಕಾಯ್ದು ಕುಳಿತಿದ್ದ ಮಹಾರಾಷ್ಟ್ರದ ಎರಡು ಮಹಾನಗರಗಳಾದ ಮುಂಬೈ ಹಾಗೂ ಪುಣೆ ಜನರಿಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಘಾತಕಾರಿ ಸುದ್ದಿ ನೀಡಿದ್ದಾರೆ.

Recommended Video

      ಮಹಾ ಸರ್ಕಾರದ ಮೇಲೆ ಹಿಡಿತ ಸಾಧಿಸಲು ಆದಿತ್ಯ ಮಾಸ್ಟರ್ ಪ್ಲಾನ್ | Oneindia Kannada

      ಮುಂಬೈ ಹಾಗೂ ಪುಣೆಯಲ್ಲಿ ಯಾವುದೇ ಕಾರಣಕ್ಕೂ ಲಾಕ್‌ಡೌನ್ ತೆರವು ಮಾಡುವುದಿಲ್ಲ ಎಂದಿದ್ದಾರೆ. ಇನ್ನೂ ಕನಿಷ್ಠ ಒಂದು ತಿಂಗಳಾದರೂ ಈ ನಗರದಲ್ಲಿ ಲಾಕ್‌ಡೌನ್ ಇರಲಿದೆ ಎಂದು ಅವರು ಹೇಳಿದ್ದಾರೆ. ಉಳಿದಂತೆ ಮಹಾರಾಷ್ಟ್ರದ ಕಿತ್ತಳೆ, ಹಳದಿ ಹಾಗೂ ಹಸಿರು ವಲಯಗಳಲ್ಲಿ ಲಾಕ್‌ಡೌನ್ ನಿಂದ ಕೆಲವು ವಿನಾಯಿತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

      ಶುಕ್ರವಾರ ಮಹಾರಾಷ್ಟ್ರದ ಸಂಸ್ಥಾಪನಾ ದಿನದ ಅಂಗವಾಗಿ ಮಾತನಾಡಿದ ಉದ್ಧವ್ ಠಾಕ್ರೆ, ರಾಜ್ಯದಲ್ಲಿ ಆರ್ಥಿಕ ದೃಷ್ಟಿಯಿಂದ ಕೈಗಾರಿಕೆ ಚಟುವಟಿಕೆಗಳಿಗೆ ಅನುಮತಿ ನೀಡಲಾಗುತ್ತದೆ. ಆದರೆ, ಮುಂಬೈ, ಪುಣೆ ಹಾಗೂ ನಾಗ್ಪುರ್ ನಲ್ಲಿ ಯಾವುದಕ್ಕೂ ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ.

      Lockdown Continue For Mumbai And Pune Says Maharastra CM

      ಇಡೀ ಭಾರತದಲ್ಲಿ ಕೊರೊನಾ ಹಾವಳಿ ಮಹಾರಾಷ್ಟ್ರದಲ್ಲಿಯೇ ಅತಿ ಹೆಚ್ಚು ಸದ್ದು ಮಾಡುತ್ತಿದೆ. 10 ಸಾವಿರಕ್ಕೂ ಹೆಚ್ಚು ಕೊರೊನಾ ರೋಗಿಗಳು ಅಲ್ಲಿ ಕಂಡು ಬಂದಿದ್ದಾರೆ. 432 ಜನ ಕೊರೊನಾದಿಂದ ಮೃತಪಟ್ಟಿದ್ದಾರೆ. ಮುಂಬೈನಲ್ಲಿ 7000 ಜನರಿಗೆ ಸೋಂಕು ತಗುಲಿದೆ. ಪುಣೆಯಲ್ಲಿ 1338 ಜನರಿಗೆ ಸೋಂಕು ತಗುಲಿ ಈ ಎರಡು ನಗರಗಳು ಕೊರೊನಾ ವಿಷಯದಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಸದ್ಯಕ್ಕೆ ಈ ಎರಡು ನಗರಗಳಿಗೆ ಲಾಕ್‌ಡೌನ್ ಮಾತ್ರ ಮರಿಚಿಕೆಯೇ ಸರಿ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+