ಸಚಿನ್ ಪೈಲಟ್ ಹೊಗಳಿದ್ದಕ್ಕೆ ಕಾಂಗ್ರೆಸ್ ಪಕ್ಷದಿಂದ ಸಂಜಯ್ ವಜಾ?

ಮುಂಬೈ, ಜುಲೈ 14: ಕಾಂಗ್ರೆಸ್ ಪಕ್ಷದಿಂದ ಹಿರಿಯ ಮುಖಂಡ ಸಂಜಯ್ ಝಾ ಅಮಾನತು ಮಾಡಿ ಕಾಂಗ್ರೆಸ್ ಪಕ್ಷ ಆದೇಶ ಹೊರಡಿಸಿದೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ತಕ್ಷದಿಂದಲೇ ಆದೇಶ ಜಾರಿಗೆ ಬರಲಿದೆ ಎಂದು ಕಾಂಗ್ರೆಸ್ ಹೇಳಿದೆ. ಸಂಜಯ್ ಅಮಾನತು ಮಾಡಲು ಸ್ಪಷ್ಟವಾದ ಕಾರಣ ಏನು ಎಂಬುದನ್ನು ಪಕ್ಷ ತಿಳಿಸಿಲ್ಲ. ಆದರೆ, ಸಂಜಯ್ ಅವರು ರಾಜಸ್ಥಾನದ ಡಿಸಿಎಂ ಆಗಿದ್ದ ಸಚಿನ್ ಪೈಲಟ್ ಹೊಗಳಿ ಟ್ವೀಟ್ ಮಾಡಿದ್ದೆ ಮುಖ್ಯ ಕಾರಣ ಎಂದು ಸದ್ಯಕ್ಕೆ ಪರಿಗಣಿಸಲಾಗಿದೆ.

ರಾಜಸ್ಥಾನದಲ್ಲಿ ಆಂತರಿಕ ಬಿಕ್ಕಟ್ಟು ಉಲ್ಭಣವಾಗುತ್ತಿದ್ದಂತೆ ಉಪ ಮುಖ್ಯಮಂತ್ರಿ ಸ್ಥಾನದಿಂದ ಸಚಿನ್ ಪೈಲಟ್ ಹಾಗೂ ಇನ್ನಿಬ್ಬರು ಬೆಂಬಲಿತ ಸಚಿವರನ್ನು ಸಿಎಂ ಅಶೋಕ್ ಗೆಹ್ಲೋಟ್ ಅವರು ಸಂಪುಟದಿಂದ ಕೈಬಿಟ್ಟ ಘಟನೆ ನಂತರ ಮಹಾರಾಷ್ಟ್ರದಲ್ಲಿ ಈ ಬೆಳವಣಿಗೆಯಾಗಿದೆ.

ರಾಜಸ್ಥಾನದಲ್ಲಿ 2013 ರಿಂದ 2018ರ ಅವಧಿಯಲ್ಲಿ ಪೈಲಟ್ ಕಾರ್ಯ ನಿರ್ವಹಿಸಿದ ರೀತಿ, 23 ಸ್ಥಾನದಿಂದ 100 ಪ್ಲಸ್ ಸ್ಥಾನಕ್ಕೇರುವಂತೆ ಮಾಡಿದ್ದನ್ನು ಮರೆತು ಪರ್ಫಾಮೆನ್ಸ್ ಬೋನಸ್ ಎಂಬಂತೆ ಈ ರೀತಿ ಕ್ರಮ ಕೈಗೊಳ್ಳಲಾಗಿದೆ ಇದೇನಾ ಪಾರದರ್ಶಕ ನೀತಿ ಎಂದು ಸಂಜಯ್ ವ್ಯಂಗ್ಯವಾಡಿದ್ದರು. ಮೊದಲಿಗೆ ಜ್ಯೋತಿರಾದಿತ್ಯ ಸಿಂಧಿಯಾ, ನಂತರ ಸಚಿನ್ ಪೈಲಟ್, ಮುಂದೆ ಯಾರು? ಎಂದು ಪ್ರಶ್ನಿಸಿದ್ದ ಸಂಜಯ್ ಈಗ ತಾವೇ ಪಕ್ಷದಿಂದ ಹೊರಬಿದ್ದಿದ್ದಾರೆ.

Know Why Sanjay Jha has been suspended from the Congress Party

ಮಹಾರಾಷ್ಟ್ರ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಾಳಾಸಾಹೇಬ್ ಥೋರಟ್ ಅವರ ಸಹಿಯಿರುವ ಆದೇಶ ಪತ್ರವನ್ನು ಟ್ವೀಟ್ ಮಾಡಲಾಗಿದೆ. ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಪಾಲ್ಗೊಂಡಿದ್ದ ಸಂಜಯ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷದ ಈ ನಡೆ ನನಗೇನು ಆಶ್ಚರ್ಯ ತಂದಿಲ್ಲ ಎಂದಿದ್ದಾರೆ.

ನಾನು ಯಾವ ರೀತಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದೆ ಎಂಬುದು ನನಗಂತೂ ತಿಳಿದಿಲ್ಲ, ಕಾಂಗ್ರೆಸ್ ನವರು ನನ್ನನ್ನು ಸಂಪರ್ಕಿಸಿ ಪ್ರಶ್ನಿಸಬಹುದಾಗಿತ್ತು ಎಂದು ಸಂಜಯ್ ಅವರು ಅಮಾನತು ಆದೇಶದ ಬಗ್ಗೆ ಹೇಳಿದ್ದಾರೆ.

ಸಂಜಯ್ ಝಾ ಅವರ ಲೇಖನದಿಂದ ಸಿಟ್ಟಿಗೆದ್ದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಂಜಯ್ ಅವರನ್ನು ಪಕ್ಷದ ವಕ್ತಾರ ಸ್ಥಾನದಿಂದ ವಜಾಗೊಳಿಸಿದ್ದರು.

ಪ್ರಜಾಪ್ರಭುತ್ವ, ಸಹಿಷ್ಣು, ಉದಾರೀಕರಣ ಮೌಲ್ಯದಿಂದ ಕಾಂಗ್ರೆಸ್ ಇಂದು ದೂರ ಸರಿದಿದೆ ಎಂದು ಈ ಕ್ರಮಕ್ಕೆ ಸಂಜಯ್ ಪ್ರತಿಕ್ರಿಯಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+