ವಿಮಾನದಲ್ಲಿ ಸೋನು ಹಾಡಿನ ವಿವಾದ, ಸಿಬ್ಬಂದಿ ಸಸ್ಪೆಂಡ್

Posted By:
Subscribe to Oneindia Kannada

ಮುಂಬೈ, ಫೆಬ್ರವರಿ 05 : ವಿಮಾನದಲ್ಲಿ ಸುಶ್ರಾವ್ಯವಾದ ಹಾಡು ಕೇಳುವುದು ಅಪರಾಧವೆ? ಆದರೆ, ಹಾಡು ಹೇಳಿಸುವಂತೆ ಅವಕಾಶ ಮಾಡಿಕೊಟ್ಟು ನಿಯಮ ಉಲ್ಲಂಘಿಸಿದ್ದು ಮಹಾಪರಾಧವಾಗಿದೆ. ಇಂಥ ಆರೋಪ ಮಾಡಿದ್ದಕ್ಕಾಗಿ ವಿಮಾನದ ಸಿಬ್ಬಂದಿಗಳು ತೊಂದರೆಗೆ ಸಿಲುಕಿದ್ದಾರೆ.

ಎರಡು ಅತ್ಯದ್ಭುತ ಹಿಂದಿ ಹಾಡುಗಳನ್ನು ಹಾಡಿ ಪ್ರಯಾಣಿಕರನ್ನು ರಂಜಿಸಿದ್ದು ಮತ್ತಾರೂ ಅಲ್ಲ, ಕನ್ನಡದಲ್ಲಿ ಜನಜನಿತವಾಗಿರುವ ಹಿಂದಿ ಚಿತ್ರರಂಗದ ಸುಶ್ರಾವ್ಯ ಕಂಠದ ಗಾಯಕ ಸೋನು ನಿಗಮ್. ಹಾಡುಗಾರರಿಗೆ ಹಾಡು ಕೇಳಿಸುವುದಕ್ಕಿಂತ ಸಂತೋಷ ಇನ್ನೇನಿದೆ? ಪ್ರಯಾಣಿಕರು ಹಾಡಿ ಎಂದು ಹುರಿದುಂಬಿಸಿದ್ದಾರೆ, ಸೋನು ಹಾಡಿ ಗಂಧರ್ವಲೋಕಕ್ಕೆ ಕರೆದುಕೊಂಡು ಹೋಗಿದ್ದಾರೆ. [ರಾಧೆ ಮಾಳನ್ನು ಕಾಳಿಗೆ ಹೋಲಿಸಿ ಕಷ್ಟಕ್ಕೆ ಸಿಲುಗಿದ ಸೋನು]

Jet crew suspended for allowing Sonu Nigam to sing mid-air

ಆದರೆ, ತೊಂದರೆಗೆ ಸಿಲುಕಿರುವುದು ಮಾತ್ರ ವಿಮಾನದ ಸಿಬ್ಬಂದಿಗಳು. ಜೆಟ್ ಏರ್‌ವೇಸ್‌ನ ಎಲ್ಲ ಐದು ಸಿಬ್ಬಂದಿಗಳನ್ನು ವಿಚಾರಣೆಗೆ ಗುರಿಪಡಿಸಲಾಗಿತ್ತು. ನಾಗರಿಕ ವಿಮಾನಯಾನ ನಿರ್ದೇಶನಾಲಯ ಜೇಟ್ ಏರ್‌ವೇಸ್‌ಗೆ ಸಿಬ್ಬಂದಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ನಿರ್ದೇಶಿಸಿತ್ತು. ಇದೀಗ ಎಲ್ಲ ಸಿಬ್ಬಂದಿಗಳನ್ನು ಅಮಾನತಿನಲ್ಲಿಡಲಾಗಿದೆ.

ಜನವರಿ 4ರಂದು ಜೋಧಪುರದಿಂದ ಮುಂಬೈಗೆ ಹಾರುತ್ತಿದ್ದ ವಿಮಾನದಲ್ಲಿ ಮದುವೆ ದಿಬ್ಬಣದಿಂದ ಪ್ರಯಾಣಿಕರು ಮರಳುತ್ತಿದ್ದರು. ಅದರಲ್ಲಿ ಸೋನು ಕೂಡ ಇದ್ದರು. ಇನ್ನು ಕೇಳಬೇಕೆ? ಕೆಲ ಹಾಡು ಹಾಡಬೇಕೆಂದು ಹುರಿದುಂಬಿಸಿದ್ದಾರೆ. ವೀರ್ ಝರಾ ಮತ್ತು ರೆಫ್ಯೂಜಿ ಚಿತ್ರದ ಎರಡು ಹಾಡುಗಳನ್ನು ಸೋನು ನಿಗಮ್ ಹಾಡಿದ್ದಾರೆ. ಕೆಲವರು ವಿಡಿಯೋ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. [ಸೋನು ನಿಗಂಗೆ ಲಕ್ಷ..ಲಕ್ಷ: ಯಾಕ್ ಸ್ವಾಮಿ ದುಂದುವೆಚ್ಚ]

Jet crew suspended for allowing Sonu Nigam to sing mid-air

ಹಾಗೆಯೇ ಕೆಲ ಹಾಡುಗಳನ್ನು ಗುನುಗಿದ್ದರೆ ಅಂತಹ ತೊಂದರೆಯಾಗುತ್ತಿರಲಿಲ್ಲವೇನೋ. ಆದರೆ, ಹಾಡಲು ಸೋನು ಬಳಸಿದ್ದು, ಪ್ರಯಾಣಿಕರನ್ನು ಉದ್ದೇಶಿಸಿ ಸಿಬ್ಬಂದಿ ಘೋಷಣೆ ಮಾಡುವ ಸಲಕರಣೆ. ಹಿಂದೆ 2014ರಲ್ಲಿ ಸ್ಪೈಸ್ ಜೆಟ್ ನಲ್ಲಿ ಕೂಡ ಇಂತಹುದೇ ಘಟನೆ ನಡೆದಿತ್ತು. ಬಲಮ ಪಿಚಕಾರಿ ಹಾಡಿಕೆ ಸಿಬ್ಬಂದಿಗಳು ನೃತ್ಯ ಮಾಡಿದ್ದರಿಂದ ಅವರನ್ನು ಅಮಾನತುಗೊಳಿಸಲಾಗಿತ್ತು.

ಡೋಂಟ್ ಪನಿಶ್ ಹ್ಯಾಪಿನೆಸ್ : ಜೆಟ್ ಏರ್ ವೇಸ್‌ನ ಸಿಬ್ಬಂದಿಗಳನ್ನು ಗಾಯಕ ಸೋನು ನಿಗಮ್ ಬೆಂಬಲಿಸಿದ್ದು, ಹಾಡು ಕೇಳಿ ನಾಲ್ಕು ಜನ ಖುಷಿಪಟ್ಟರೆ ಸಿಬ್ಬಂದಿಗಳ ಮೇಲೆ ಏಕೆ ಕ್ರಮ ಜರುಗಿಸುತ್ತೀರಿ. ಡೋಂಟ್ ಪನಿಶ್ ಹ್ಯಾಪಿನೆಸ್ ಎಂದು ವಿಮಾನಯಾನ ಸಂಸ್ಥೆಯನ್ನು ಕೋರಿದ್ದಾರೆ. ಕೆಲವರು ಸೋನು ನಿಗಮ್ ಅವರನ್ನು ಕೂಡಲೆ ಬಂಧಿಸಬೇಕೆಂದು ಆಗ್ರಹಿಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Jet Airways personnel have been suspended for allowing Bollywood singer Sonu Nigam to sing mid-air. Sonu had sung two songs from Bollywood movies using plane's address system. Directorate General of Civil Aviation took a strict view of this and directed airways to take strict action.
Please Wait while comments are loading...