ದೆಹಲಿ- ಮುಂಬೈ ಜೆಟ್ ಏರ್ ವೇಸ್ ವಿಮಾನಕ್ಕೆ ಬೆದರಿಕೆ ಕರೆ
ಮುಂಬೈ, ಅಕ್ಟೋಬರ್ 30: ಮುಂಬೈನಿಂದ ದೆಹಲಿಗೆ ಹೊರಟ್ಟಿದ್ದ ಜೆಟ್ ಏರ್ ವೇಸ್ ವಿಮಾನಕ್ಕೆ ಬೆದರಿಕೆ ಕರೆ ಬಂದಿದೆ. ಸೋಮವಾರ ಮುಂಜಾನೆ ಬೆದರಿಕೆ ಬಂದ ಹಿನ್ನಲೆಯಲ್ಲಿ ವಿಮಾನದ ಮಾರ್ಗ ಬದಲಾವಣೆ ಮಾಡಲಾಗಿದೆ.
ಮುಂಬೈನಿಂದ ಹೊರಟ ವಿಮಾನ ಸದ್ಯ ಸುರಕ್ಷಿತವಾಗಿ ಅಹಮದಾಬಾದ್ ತಲುಪಿದೆ.9W339 ವಿಮಾನ ಮುಂಬೈನಿಂದ ಮುಂಜಾನೆ 2.55 amಗೆ ಹೊರಟ್ಟಿತ್ತು. ಭದ್ರತಾ ಕಾರಣಗಳಿಗಾಗಿ ವಿಮಾನವನ್ನು ಕೂಡಲೇ ಮಾರ್ಗ ಬದಲಾಯಿಸಲು ಸೂಚಿಸಲಾಯಿತು. ಅಹಮದಾಬಾದಿನ ವಿಮಾನ ನಿಲ್ದಾಣಕ್ಕೆ 3.45 am ಗೆ ವಿಮಾನ ತಲುಪಿದೆ.

ಅಹಮದಾಬಾದ್ ವಿಮಾನ ನಿಲ್ದಾಣದ ಸಿಬ್ಬಂದಿಗಳು ವಿಮಾನದಲ್ಲಿರುವ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿ ತಪಾಸಣೆ ಮಾಡಿದ್ದಾರೆ. ಬೆದರಿಕೆ ಕರೆ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಿಲ್ಲ.












Click it and Unblock the Notifications