"ಭಾರತೀಯ ಮಹಿಳೆಯರು ಸುಳ್ಳು ದೂರು ನೀಡುವ ಸಂಭವ ತೀರಾ ಕಡಿಮೆ"

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 07: "ಭಾರತೀಯ ಮಹಿಳೆಯರು ಸುಳ್ಳು ದೂರು ನೀಡುವುದು ತೀರಾ ಕಡಿಮೆ. ದೂರು ನೀಡುವಲ್ಲಿ ವಿಳಂಬವಾಯಿತೆಂದು ಆ ದೂರು ಸುಳ್ಳು ಎಂದು ನಿರ್ಧರಿಸುವುದು ತಪ್ಪು" ಎಂದು ಮುಂಬೈ ಹೈ ಕೋರ್ಟ್ ಹೇಳಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಸಾಮೂಹಿನ ಅತ್ಯಾಚಾರ ಪ್ರಕರಣವೊಂದರಲ್ಲಿ ನಾಲ್ವರು ಆರೋಪಿಗಳು ದೋಷಿಗಳು ಎಂದು ಅಧೀನ ನ್ಯಾಯಾಲಯವೊಂದು ನೀಡಿದ ತೀರ್ಪನ್ನು ಎತ್ತಿಹಿಡಿದ ಬಾಂಬೆ ಹೈ ಕೋರ್ಟ್, ಈ ರೀತಿ ಹೇಳಿದೆ.

ಅಸಭ್ಯವಾಗಿ ವರ್ತಿಸಿದ ಪೊಲೀಸರಿಗೇ ಪಂಚುಕೊಟ್ಟ ಗಟ್ಟಿಗಿತ್ತಿ ಈಕೆ!

ಮಾರ್ಚ್ 15, 2012 ರಲ್ಲಿ ನಡೆದ ಸಾಮೂಹಿಕ ಅತ್ಯಾಚಾರವೊಂದರಲ್ಲಿ ಪೊಲೀಸರಿಗೆ ದೂರು ನೀಡದಂತೆ ಮಹಿಳೆಗೆ ಬೆದರಿಕೆ ಒಡ್ಡಲಾಗಿತ್ತು. ಆದರೂ ಅತ್ಯಾಚಾರ ನಡೆದ ಎರಡು ದಿನದ ನಂತರ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಳು. ಆದರೆ ಈ ಆರೋಪವನ್ನು ತಳ್ಳಿಹಾಕಿದ ಆರೋಪಿಗಳು, 'ಅತ್ಯಾಚಾರ ನಡೆದ ಎರಡು ದಿನದವರೆಗೆ ಆಕೆ ದೂರು ನೀಡದೆ ಇದ್ದಿದ್ಯಾಕೆ? ಆಕೆ ಸುಳ್ಳು ಆರೋಪ ಮಾಡುತ್ತಿದ್ದಾಳೆ' ಎಂದು ವಿಚಾರಣೆಯ ಸಮಯದಲ್ಲಿ ದೂರಿದ್ದರು.

Indian women rarely make false claims: Mumbai HC

ಇದಕ್ಕೆ ಪ್ರತಿಕ್ರೆ ನೀಡಿದ ಕೋರ್ಟು, 'ಒಬ್ಬ ಮಹಿಳೆ ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಸುಳ್ಳು ದೂರು ನೀಡಲಾರಳು. ಅಂಥ ಪ್ರಕರಣಗಳು ತೀರಾ ಅಪರೂಪ. ಕೆಲವು ಅನಿವಾರ್ಯ ಕಾರಣ ಅಥವಾ ಒತ್ತಡದಿಂದ ದೂರು ನೀಡುವುದು ವಿಳಂಬವಾಗಬಹುದು. ಇದರಿಂದ ವೈದ್ಯಕೀಯ ಪರೀಕ್ಷೆಗೆ ತೊಂದರೆಯಾಗುತ್ತದೆ, ಸ್ಪಷ್ಟತೆ ಇರುವುದಿಲ್ಲ ಎಂಬುದು ನಿಜ. ಆದರೆ ದೂರು ನೀಡುವಲ್ಲಿ ವಿಳಂಬವಾಯ್ತು ಎಂದು ಮಹಿಳೆಯ ಆರೋಪವೇ ಸುಳ್ಳು ಎಂದು ನಿರ್ಧರಿಸುವುದು ತಪ್ಪು' ಎಂದು ಕೋರ್ಟು ಹೇಳಿದೆ.

ಅಧೀನ ನ್ಯಾಯಾಲಯ ಆ ನಾಲ್ಕು ಅತ್ಯಾಚಾರಿಗಳಿಗೆ ನೀಡಿದ 10 ವರ್ಷಗಳ ಜೈಲು ಶಿಕ್ಷೆಯನ್ನು ಹೈ ಕೋರ್ಟ್ ಎತ್ತಿಹಿಡಿದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian women rarely make false claims, delay in filing rape case doesn't mean she lied says Mumbai Hight Court while upholding the conviction of 4 men in a gangrape case.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ