ಭಾರತದಲ್ಲಿ ಮುಂಬೈನಲ್ಲೇ ಅತಿ ಶ್ರೀಮಂತರು ಹೆಚ್ಚು!

ಲಂಡನ್, ಆ.6: ವಿಶ್ವ ಸ್ಥಿತಿವಂತ ಹೊಸ ಸೂಚ್ಯಂಕದಂತೆ ವಿಶ್ವದಲ್ಲಿ ಅತಿ ಹೆಚ್ಚು ಕೋಟ್ಯಾಧಿಪತಿಗಳಿರುವ 8ನೇ ರಾಷ್ಟ್ರವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಲಂಡನ್ ಮೂಲದ ಪ್ರತಿಷ್ಠಿತ ಜಾಗತಿಕ ವಾಣಿಜ್ಯ ಪತ್ರಿಕೆಯೊಂದು ಬಿಡುಗಡೆ ಮಾಡಿರುವ ಪಟ್ಟಿಯಂತೆ ಭಾರತದಲ್ಲಿ ಮುಂಬೈನಲ್ಲೇ ಅತಿ ಹೆಚ್ಚು ಶ್ರೀಮಂತರಿದ್ದಾರಂತೆ.

ವಿಶ್ವದ ದೊಡ್ಡಣ್ಣ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ, ರಷ್ಯಾ ಮತ್ತು ಫ್ರಾನ್ಸ್ ರಾಷ್ಟ್ರಗಳು ಕೂಡ ಭಾರತಕ್ಕಿಂತ ಹಿಂದೆ ಬಿದ್ದಿವೆ.
ಚೀನಾ, ಜರ್ಮನಿ, ಬ್ರಿಟನ್, ಸಿಂಗಪುರ್, ಕೆನಡಾ ರಾಷ್ಟ್ರಗಳು ಅತಿ ಹೆಚ್ಚು ಕೋಟ್ಯಧಿಪತಿಗಳನ್ನು ಹೊಂದಿರುವ ದೇಶಗಳಾಗಿವೆ. ಭಾರತದಲ್ಲಿ ಒಟ್ಟು 14,800 ಮಂದಿ ಕೋಟ್ಯಾಧಿಪತಿಗಳಿದ್ದಾರೆ. ಇದರಲ್ಲಿ ದೇಶದ ವಾಣಿಜ್ಯ ನಗರಿ ಮುಂಬೈನಲ್ಲೇ ಸರಿಸುಮಾರು 2700 ಮಂದಿ ಕೋಟ್ಯಾಧಿಪತಿಗಳಾಗಿರುವುದು ವಿಶೇಷವಾಗಿದೆ.

India ranks 8th in New World Wealth index; home to 14,800 multimillionaires

ಇನ್ನೊಂದು ಗಮನಿಸಬೇಕಾದ ಅಂಶವೆಂದರೆ, ವಿಶ್ವದಲ್ಲಿ ಅತಿ ಹೆಚ್ಚು ಕೋಟ್ಯಧಿಪತಿಗಳನ್ನು ಹೊಂದಿರುವ 30 ನಗರಗಳಲ್ಲಿ ಮುಂಬೈ ಸ್ಥಾನ ಪಡೆದಿದೆ. ವಿಶ್ವದಲ್ಲೇ ಅತಿ ಹೆಚ್ಚು ಕೋಟ್ಯಾಧಿಪತಿಗಳಿರುವ ನಗರಗಳಲ್ಲಿ ಹಾಂಕಾಂಗ್ (15,400) ಮೊದಲ ಸ್ಥಾನ ಪಡೆದರೆ, ನ್ಯೂಯಾರ್ಕ್ (14,300) ಎರಡನೆ ಸ್ಥಾನ, ಲಂಡನ್ (9,700) ಮೂರನೆ ಸ್ಥಾನ, ಮಾಸ್ಕೋ (7,600) ನಾಲ್ಕನೆ ಸ್ಥಾನ, ಲಾಸ್ ಏಂಜಲೀಸ್ (7,400) ಐದನೆ ಸ್ಥಾನ, ಮತ್ತು ಸಿಂಗಪುರ್ (6,600) ಆರನೆ ಸ್ಥಾನದಲ್ಲಿದೆ.

ವೈಯಕ್ತಿಕ ಆದಾಯ ಗಳಿಕೆಯಲ್ಲಿ ಅಮೆರಿಕ ವಿಶ್ವದಲ್ಲೇ ಮೊದಲ ಸ್ಥಾನ ಪಡೆದಿದೆ. ಇಲ್ಲಿ 10 ಮಿಲಿಯನ್ ಡಾಲರ್ ಸಂಪತ್ತು ಹೊಂದಿರುವವರ ಸಂಖ್ಯೆ 1,83,500 ಮಂದಿ ಇದ್ದರೆ, ನಂತರ ಚೀನಾ 26,600, ಜರ್ಮನಿ 25,400, ಬ್ರಿಟನ್ 21,700, ಜಪಾನ್ 21,000, ಸ್ವಿಡ್ಜರ್‌ಲ್ಯಾಂಡ್ 18,300 ಹಾಗೂ ಹಾಂಕಾಂಗ್ 15,400 ಮಂದಿ ಇದ್ದಾರೆ.

ಕಳೆದ ಒಂದು ದಶಕದ ಅವಧಿಯಲ್ಲಿ ಕೋಟ್ಯಾಧಿಪತಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಶೇ.58 ರಿಂದ ಶೇ.71ರಷ್ಟು ಸಂಪತ್ತು ವೃದ್ಧಿಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ವಿಶ್ವದಲ್ಲಿ ಆರ್ಥಿಕ ಕುಸಿತದ ನಡುವೆಯೂ ಭಾರತದಲ್ಲಿ ಕೋಟ್ಯಾಧಿಪತಿಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಬಡತನ ನಿರ್ಮೂಲನೆಗೆ ಸರ್ಕಾರ ತ್ವರಿತ ಕ್ರಮ ಕೈಗೊಂಡಿದೆ. ಮೂಲಭೂತ ಸೌಕರ್ಯಗಳಿಗೂ ವಿಶೇಷ ಆದ್ಯತೆ ನೀಡುತ್ತಿದೆ ಎಂದು ಇಲ್ಲಿನ ಸರ್ಕಾರದ ಕ್ರಮಗಳ ಬಗ್ಗೆ ವರದಿಯಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+