ಬೇನಾಮಿ ಆಸ್ತಿ ಪ್ರಕರಣ: ಶಾರುಖ್ ಫಾರ್ಮ್ ಹೌಸ್ ಗೆ ಬೀಗ
ಮುಂಬೈ, ಜನವರಿ 30: ಕಿಂಗ್ ಖಾನ್ ಶಾರುಖ್ ಒಡೆತನದ ಆಲಿಬಾಗ್ ತೋಟದ ಮನೆಗೆ ಬೀಗ ಬಿದ್ದಿದೆ. ಬೇನಾಮಿ ಆಸ್ತಿ ವ್ಯವಹಾರ ಕಾಯ್ದೆ ಅಡಿಯಲ್ಲಿ ಫಾರ್ಮ್ ಹೌಸನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಕೃಷಿ ಜಮೀನನ್ನು ಖರೀದಿ, ಫಾರ್ಮ್ ಹೌಸ್ ನಿರ್ಮಿಸಿ, ಕಾನೂನು ಉಲ್ಲಂಘಿಸಿರುವ ಬಗ್ಗೆ ಕಳೆದ ಡಿಸೆಂಬರ್ ನಲ್ಲಿ ಈ ಕುರಿತಂತೆ ನಟ ಶಾರುಖ್ ಖಾನ್ ಗೆ ನೋಟಿಸ್ ನೀಡಲಾಗಿತ್ತು.

ಆದಾಯ ತೆರಿಗೆ ಸೆಕ್ಷನ್ 24ರ ಪ್ರಕಾರ ವ್ಯಕ್ತಿಯು ಬೇನಾಮಿದಾರ್ ಎಂದು ತನಿಖಾ ಅಧಿಕಾರಿಗಳಿಗೆ ತಿಳಿದು ಬಂದಲ್ಲಿ, ಆ ಜಾಗದ ಮಾಲಿಕನಿಗೆ ನೋಟಿಸ್ ಕಳುಹಿಸಬಹುದು. ಈ ರೀತಿ ನೋಟಿಸ್ ಜಾರಿ ಮಾಡಿದ 90 ದಿನಗಳೊಳಗಾಗಿ ಆಸ್ತಿಯನ್ನು ಜಪ್ತಿ ಮಾಡಬಹುದು ಎಂದು ಹಿರಿಯ ಐಟಿ ಅಧಿಕಾರಿ ಹೇಳಿದ್ದಾರೆ.
ಈ ಆಸ್ತಿಯ ಸರಾಸರಿ ಮೊತ್ತ 146.7 ಮಿಲಿಯನ್ ರೂಪಾಯಿ ಎನ್ನಲಾಗುತ್ತಿದೆ. 19,960 ಚದರ ಮೀಟರ್ ವಿಸ್ತೀರ್ಣದಲ್ಲಿ ಈ ಫಾರ್ಮ್ ಹೌಸ್ ಇದೆ. ಇದರಲ್ಲಿ ಸ್ವಿಮ್ಮಿಂಗ್ ಪೂಲ್, ಹೆಲಿಪ್ಯಾಡ್ ಕೂಡಾ ಇದೆ. ಆದರೆ, ಮಾರುಕಟ್ಟೆ ದರ ಇನ್ನೂ ಅಧಿಕ ಎನ್ನಲಾಗಿದೆ.
ಜನವರಿ 24ರಂದು ಶಾರೂಕ್ ಒಡೆತನದ ರೆಡ್ ಚಿಲ್ಲಿಸ್ ಎಂಟರ್ಟೈನ್ಮೆಂಟ್ ಹಾಗೂ ಐಪಿಎಲ್ ಫ್ರಾಂಚೈಸಿ ಕೆಕೆಆರ್ ಸಿಇಒಗೆ ನೋಟಿಸ್ ಜಾರಿ ಇಮೇಲ್ ಮೂಲಕ ನೋಟಿಸ್ ಕಳಿಸಲಾಗಿತ್ತು. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಐಟಿ ಇಲಾಖೆ ಹೇಳಿದೆ.












Click it and Unblock the Notifications