ಸದ್ಯದಲ್ಲೇ ದೇಶದ ನೂರು ರೈಲ್ವೆ ನಿಲ್ದಾಣದಲ್ಲಿ ಉಚಿತ ವೈಫೈ

ಮುಂಬೈ, ಜನವರಿ,23: ಪ್ರತಿಷ್ಠಿತ ಗೂಗಲ್ ಸಂಸ್ಥೆ ಸಹಯೋಗದಲ್ಲಿ ಮುಂಬೈ, ಬೆಂಗಳೂರು ಸೇರಿದಂತೆ ದೇಶದ ನೂರು ರೈಲ್ವೆ ನಿಲ್ದಾಣಗಳಿಗೆ ಉಚಿತ ವೈಫೈ ಸೇವೆ ಒದಗಿಸುವ ಮೂಲಕ ಕೇಂದ್ರದ ಮಹತ್ವ ಉದ್ದೇಶ ಈಡೇರಿಸಲು ರೈಲ್ವೆ ಸಚಿವ ಸುರೇಶ್ ಪ್ರಭು ಮುಂದಾಗಿದ್ದಾರೆ.

ಮುಂಬೈ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಉಚಿತ ವೈಫೈ ಸೌಲಭ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು, 'ಇದು ಉಚಿತ ವೈಫೈ ಸೌಲಭ್ಯ ಪಡೆದ ರಾಷ್ಟ್ರದ ಮೊದಲ ರೈಲ್ವೆ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ' ಎಂದು ತಿಳಿಸಿದರು.[ಜನ್ ಆಹಾರ ಕೆಫೆ: ರೈಲು ನಿಲ್ದಾಣಗಳಲ್ಲಿ 20ರುಗೆ ಊಟ]

High-speed WiFi available 99 more train stations across India by end of the year

ಸಾಮಾನ್ಯ ವರ್ಗದ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಈ ವ್ಯವಸ್ಥೆ ಆರಂಭಿಸಲಾಗಿದೆ. ಇದರಿಂದ ಒಂದು ಕೋಟಿ ಜನರು ಈ ಸೌಲಭ್ಯ ಪಡೆಯಲಿದ್ದಾರೆ ಎಂದು ರೈಲ್ ಟೆಲ್ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್ ಕೆ ಬಹುಗುಣ ತಿಳಿಸಿದ್ದಾರೆ.

ಈ ವರ್ಷದ ಕೊನೆಯ ಹೊತ್ತಿಗೆ ಮುಂಬೈ, ಬೆಂಗಳೂರು ರೈಲ್ವೆ ನಿಲ್ದಾಣ ಸೇರಿದಂತೆ ಒಟ್ಟು 100 ರೈಲ್ವೆ ನಿಲ್ದಾಣಗಳಿಗೆ ಈ ಸೇವೆ ಒದಗಿಸಲಾಗುವುದು. ಬಳಿಕ ಈ ಸೇವೆಯನ್ನು ಅಲಹಾಬಾದ್, ಪಾಟ್ನಾ, ರಾಂಚಿ, ಜೈಪುರ ಸೇರಿದಂತೆ ಒಟ್ಟು 400 ರೈಲ್ವೆ ನಿಲ್ದಾಣಗಳಿಗೆ ವಿಸ್ತರಿಸಲಾಗುವುದು.[ಭಾರತದಲ್ಲಿ ಬುಲೆಟ್ ಟ್ರೇನ್, ಯಾಕೆ? ಏತಕ್ಕೆ?]

ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೇವೆಗೆ ಲಾಗ್ ಇನ್ ಆಗುವುದು ಹೇಗೆ?

* ಆಂಡ್ರಾಯ್ಡ್ ಮೊಬೈಲ್ ಬಳಕೆದಾರರು ಮೊದಲು ಬ್ರೌಸರ್ ಗೆ ಹೋಗಿ ಅಲ್ಲಿ railwire.co.in ವೆಬ್ ಸೈಟ್ ಗೆ ತೆರಳಬೇಕು
* ಬಳಿಕ ನಿಮ್ಮ ಮೊಬೈಲ್ ನಂಬರ್ ನ್ನು ವೈಫೈ ಲಾಗಿನ್ ಪರದೆಗೆ ನೀಡಲು ಸೂಚಿಸಲಾಗುತ್ತದೆ.
* ಮೊಬೈಲ್ ನಂಬರ್ ನೀಡಿದ ಬಳಿಕ ಒಂದು ಎಸ್ ಎಂ ಎಸ್ ನಿಮ್ಮ ಮೊಬೈಲ್ ಗೆ ಬರುತ್ತದೆ
* ಬರುವ ಸಂದೇಶದಲ್ಲಿ ನಾಲ್ಕು ಒಟಿಪಿ ಸಂಖ್ಯೆ ಇರುತ್ತದೆ. ಅದನ್ನು ನೀವು ಲಾಗಿನ್ ಆದರೆ ರೈಲ್ವೆ ನಿಲ್ದಾಣದ ವೈಫೈ ಸೌಲಭ್ಯ ನಿಮಗೆ ದೊರೆಯುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+