ತಂದೆಯ ಕುತ್ತಿಗೆಯನ್ನು ಕಚ್ಚಿ ಕೊಲೆ ಮಾಡಿದ ಜಿಮ್ ಟ್ರೈನರ್
ನಾಗ್‌ಪುರ್, ಏಪ್ರಿಲ್ 27: ಜಿಮ್ ತರಬೇತುದಾರನೊಬ್ಬ ಸಿನಿಮಾ ಡೈಲಾಗ್ ಹೇಳುತ್ತಾ ತಂದೆಯ ಕುತ್ತಿಗೆಯನ್ನು ಕಚ್ಚಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಗ್‌ಪುರದಲ್ಲಿ ನಡೆದಿದೆ.
25 ವರ್ಷದ ಜಿಲ್ ಟ್ರೈನರ್ ತಂದೆಯ ಕುತ್ತಿಗೆ ಕಚ್ಚಿ, ಬಳಿಕ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.ಈ ಘಟನೆಯು ಹುಡ್ಕೇಶ್ವರ್ ಪ್ರದೇಶದಲ್ಲಿ ಶನಿವಾರ ನಡೆದಿದೆ.
ಆರೋಪಿಯನ್ನು ವಿಕ್ರಾಂತ್ ಪಿಳ್ಳೇವರ್ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಬೇಕಾದರೆ ಪೊಲೀಸರು ಹರಸಾಹಸಪಡಬೇಕಾಯಿತು ಎಂದು ತಿಳಿಸಿದ್ದಾರೆ.

ಏಕಾಏಕಿ ವಿಕ್ರಾಂತ್ ಜಗಳ ಆರಂಭಿಸಿದ್ದ ಬಳಿಕ ಎದ್ದು ತಂದೆಯ ಕುತ್ತಿಗೆಯನ್ನು ಕಚ್ಚಿದ್ದ, ಆತ ಕಚ್ಚಿದ ರಭಸಕ್ಕೆ ಕುತ್ತಿಗೆಯಿಂದ ರಕ್ತ ಹೊರಕ್ಕೆ ಚಿಮ್ಮಿತ್ತು. ಕೊನೆ ಅವರನ್ನು ಎಳೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ.
ವಿಕ್ರಾಂತ್ ಸಾಕಷ್ಟು ಹಿಂದಿ ಸಿನಿಮಾಗಳನ್ನು ನೋಡುತ್ತಿದ್ದ, ಅದನ್ನು ನೋಡಿ ಪ್ರಭಾವಿತನಾಗಿ ಈ ರೀತಿ ಕೃತ್ಯವೆಸಗಿದ್ದಾನೆ. ಒಂದೊಮ್ಮೆ ಮಧ್ಯ ಪ್ರವೇಶಿಸಿದರೆ ತಾಯಿ, ತಂಗಿಯನ್ನೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಆತನನ್ನು ಬಂಧಿಸಲು ಐದು ಮಂದಿ ಪೊಲೀಸರು ತೆರಳಿದ್ದರೂ ಕೂಡ ಆತನನ್ನು ಹಿಡಿದು ತರಲು ಕಷ್ಟವಾಯಿತು ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications