ಮುಂಬೈ ವಾಣಿಜ್ಯ ಕೇಂದ್ರದ 30ನೇ ಮಹಡಿಯಿಂದ ಹಾರಿ GST ಅಧಿಕಾರಿ ಆತ್ಮಹತ್ಯೆ
ಮುಂಬೈ, ಮೇ 14: ಮುಂಬೈಯ ವಿಶ್ವ ವಾಣಿಜ್ಯ ಕೇಂದ್ರ(WTC) ಕಟ್ಟಡದ 30 ನೇ ಮಹಡಿಯಿಂದ ಹಾರಿ ಜಿ ಎಸ್ಟಿ(ಸರಕು ಮತ್ತು ಸೇವಾ ತೆರಿಗೆ) ಮೇಲಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಸಂಜೆ ನಡೆದಿದೆ.
ಮುಂಬೈಯ ಕಫೆ ಪರೇಡ್ ಮಲ್ಲಿರುವ WTC ಯ ಮೂವತ್ತನೇ ಮಹಡಿಗೆ ತೆರಳಿದ್ದ ಹರೇಂದ್ರ ಕಪಾಡಿಯ ಎಂಬ ಅಧಿಕಾರಿ, ಸಂಜೆ ಸುಮಾರು 6:30 ರ ಸುಮಾರಿಗೆ ಅಲ್ಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲೇ ಅವರು ಮೃತರಾಗಿದ್ದರು. ಸುಮಾರು 8-10 ತಿಂಗಳ ಮುಂಚೆ ಮೆದುಳಿನ ಪಾರ್ಶವಾಯುವಿಗೆ ತುತ್ತಾಗಿದ್ದ ಅವರು ಕೆಲಸಕ್ಕೆ ಬರುತ್ತಿರಲಿಲ್ಲ. ನಂತರ ಮೆದುಳು ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು.

"ಮೂರು ತಿಂಗಳ ಹಿಂದಿನಿಂದ ಮತ್ತೆ ಕೆಲಸಕ್ಕೆ ಬರುತ್ತಿದ್ದ ಅವರಿಗೆ ನೆನಪಿನ ಶಕ್ತಿಯ ಸಮಸ್ಯೆಯಾಗಿತ್ತು. ತಮ್ಮ ಅನಾರೋಗ್ಯದಿಂದ ಬೇಸತ್ತಿದ್ದ ಅವರು ಇಂಥ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ಅನ್ನಿಸುತ್ತಿದೆ" ಎಂದು ಪೊಲೀಸರು ಹೇಳಿದ್ದಾರೆ.
ಕಪಾಡಿಯಾ ಆತ್ಮಹತ್ಯೆಯ ಸಮಯದಲ್ಲಿ ಕಚೇರಿಯಲ್ಲಿದ್ದ ಜನರನ್ನು ಈಗಾಗಳೇ ಪೊಲೀಸರು ವಿಚಾರಣೆ ನಡೆಸಿದ್ದಾರೆ.












Click it and Unblock the Notifications