ಬಾಲಕಿ ಪತ್ರ ಬರೆದಿಟ್ಟು ಮನೆಬಿಟ್ಟು ಓಡಿ ಹೋಗಿದ್ದೆಲ್ಲಿಗೆ?
ಮುಂಬೈ, ಜೂನ್ 4: ಕೀ ಕೀ ಚಾಲೆಂಜ್, ಟಿಕ್ ಟಾಕ್, ಬ್ಲೂವೇಲ್, ಪಬ್ಜಿ ಇಂತಹ ಆಟದ ಹುಚ್ಚು ಮುಗ್ಧ ಮಕ್ಕಳನ್ನು ಎಲ್ಲಿಗೆ ತಂದು ನಿಲ್ಲಿಸುತ್ತಿವೆ ನೋಡಿ..
ಅಪ್ಪ ಯಾವ ಹುಡುಗರೊಂದಿಗೂ ಮಾತನಾಡಲು ಬಿಡುತ್ತಿಲ್ಲ, ಅಪ್ಪನ ವರ್ತನೆಯಿಂದ ಬೇಸರವಾಗಿದೆ ಹಾಗಾಗಿ ಮನೆಬಿಟ್ಟು ಹೋಗುತ್ತಿದ್ದೇನೆ ಎಂದು ಪತ್ರ ಬರೆದು ಹೊರಟ ಬಾಲಕಿ ಹೋಗಿದ್ದು ನೇಪಾಳದ 16 ವರ್ಷದ ಟಿಕ್ ಟಾಕ್ ಹೀರೋನನ್ನು ಭೇಟಿ ಮಾಡಲು.
'ಟಿಕ್ ಟಾಕ್' ಆ್ಯಪ್ ನಿಷೇಧಿಸುವಂತೆ ಕರ್ನಾಟಕ ಮಹಿಳಾ ಆಯೋಗ ಮನವಿ
ಒಂದೆಡೆ ಮಗಳು ಎಲ್ಲಿ ಹೋಗಿದ್ದಾಳೆ ಎಂದು ಪೋಷಕರು ತಲೆ ಕೆಡಿಸಿಕೊಂಡು ಆಕೆಯನ್ನು ಹುಡುಕದ ಜಾಗವಿಲ್ಲ, ಪತ್ರವನ್ನು ನೋಡಿದ ತಕ್ಷಣವೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ಪತ್ರದಲ್ಲೇನಿತ್ತು?: ಅಮ್ಮಾ ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ ಅಪಪ್ ನಡೆದುಕೊಳ್ಳುತ್ತಿರುವ ರೀತಿಯಿಂದ ಬೇಜಾರಾಗಿದೆ. ನಾನು ಆತ್ಮಹತ್ಯೆಯನ್ನೂ ಮಾಡಿಕೊಳ್ಳುವುದಿಲ್ಲ, ಯಾವ ಹುಡುಗನ ಜೊತೆಯೂ ಓಡಿ ಹೋಗುತ್ತಿಲ್ಲ ಎಂದು ಪತ್ರದಲ್ಲಿ ಬರೆದಿದ್ದಳು.
ಆದರೆ ನಿಜವಾದ ಕಾರಣ ಪೊಲೀಸರು ಬಹಿರಂಗಗೊಳಿಸಿದ್ದಾರೆ. ಎಂಟು ತಾಸಿನೊಳಗೆ ಪೊಲೀಸರು ಬಾಲಕಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ.
ಟಿಕ್ ಟಾಕ್ ಹೀರೋ ರಿಯಾಜ್ ಬಗ್ಗೆ ಅತಿಯಾದ ಒಲವು ಹೊಂದಿದ್ದ ಬಾಲಕಿ ಹೇಳದೆ ಕೇಳದೆ ಮನೆಬಿಟ್ಟಿದ್ದಳು ಎನ್ನುವುದು ಸಾಬೀತಾಗಿದೆ.