R Ashwin: ಯಶಸ್ವಿ ಜೈಸ್ವಾಲ್‌ ದಾರಿಗೆ ಮುಳುವಾಗಿದ್ದು ವೈಭವ್ ಸೂರ್ಯವಂಶಿ: ಆರ್ ಅಶ್ವಿನ್

R Ashwin: ಐಪಿಎಲ್‌ 2026ರಲ್ಲಿ ರಾಜಸ್ಥಾನ್ ರಾಯಲ್ಸ್‌ ಪರ 15 ವರ್ಷದ ವೈಭವ್ ಸೂರ್ಯವಂಶಿ ಅವರು ಅಬ್ಬರದ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಇವರ ಆಟಕ್ಕೆ ಮನಸೋಲದವರೇ ಇಲ್ಲ. ಅಷ್ಟರ ಮಟ್ಟಿಗೆ ಆಕ್ರಮಣಕಾರಿ ಆಟ ಆಡುತ್ತಿದ್ದಾರೆ. ಈ ನಡುವೆ ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್ ಆರ್ ಅಶ್ವಿನ್ ಅವರು, ವೈಭವ್ ಅವರ ಅದ್ಭುತ ಪ್ರದರ್ಶನವು ಯಶಸ್ವಿ ಜೈಸ್ವಾಲ್‌ಗೆ ಅಡ್ಡಿಯಾಗಿದೆ ಎನ್ನುವ ರೀತಿಯಲ್ಲಿ ಅಚ್ಚರಿ ಹೇಳಿಕೆ ನೀಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಸ್ಪೋಟಕ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದಾರೆ. ಆದರೆ, ಅವರ ಈ ಅದ್ಭುತ ಬೆಳವಣಿಗೆಯು ತಂಡದ ಹಳೆಯ ಸ್ಟಾರ್ ಆಟಗಾರ ಯಶಸ್ವಿ ಜೈಸ್ವಾಲ್ ಪಾಲಿಗೆ ತುಸು ಕಠಿಣ ಪರಿಸ್ಥಿತಿಯನ್ನು ತಂದೊಡ್ಡಿದೆ ಎನ್ನುವ ರೀತಿಯಲ್ಲಿ ಹೇಳಿದ್ದಾರೆ.

R Ashwin Makes Big Statement on Vaibhav Sooryavanshi and Yashasvi Jaiswal in IPL 2026 Huge viral

ಆರ್ ಅಶ್ವಿನ್ ಹೇಳಿದ್ದೇನು?

ಐಪಿಎಲ್ 2026ರ ಸೀಸನ್ ಆರಂಭಕ್ಕೂ ಮುನ್ನ ಜೈಸ್ವಾಲ್ ತಂಡದ ಪ್ರಮುಖ ಆಕರ್ಷಣೆಯಾಗಿದ್ದರು. ಆದರೆ ಟೂರ್ನಿ ಮುಂದುವರಿದಂತೆ ತಂಡದ ಯಶಸ್ಸಿಗೆ ನೀಡುತ್ತಿರುವ ಕೊಡುಗೆಯಲ್ಲಿ ಸೂರ್ಯವಂಶಿ ಅವರು ಜೈಸ್ವಾಲ್ ಅವರಿಗಿಂತ ಬಹುದೂರ ಮುಂದೆ ಹೋಗಿದ್ದಾರೆ. ಈ ಕುರಿತು ಟೀಮ್ ಇಂಡಿಯಾ ಮಾಜಿ ಆಲ್ ರೌಂಡರ್ ರವೀಂದ್ರನ್ ಅಶ್ವಿನ್ ಅವರು ಪ್ರತಿಕ್ರಿಯಿಸಿದ್ದು, '15 ವರ್ಷದ ಸೂರ್ಯವಂಶಿಯ ಏಳಿಗೆ ಮತ್ತು ಅವರ ಹೆಸರಿನ ಸುತ್ತ ಸೃಷ್ಟಿಯಾಗಿರುವ ಭಾರಿ ಪ್ರಚಾರ ಈ ವರ್ಷ ಜೈಸ್ವಾಲ್ ಅವರ ಸಾಧಾರಣ ಪ್ರದರ್ಶನಕ್ಕೆ ಪ್ರಮುಖ ಕಾರಣವಾಗಿರಬಹುದು,' ಎಂದು ಹೇಳಿದ್ದಾರೆ.

ಜೈಸ್ವಾಲ್ ಬಗ್ಗೆ ಆರ್ ಅಶ್ವಿನ್ ಅಚ್ಚರಿ ಹೇಳಿಕೆ

ರವಿಚಂದ್ರನ್ ಅಶ್ವಿನ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿ ಈ ವರ್ಷ ರಾಜಸ್ಥಾನ್ ರಾಯಲ್ಸ್ ಪರ ಜೈಸ್ವಾಲ್ ಆಡುತ್ತಿರುವ ರೀತಿಯ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ್ದಾರೆ. 'ಜೈಸ್ವಾಲ್ ಅವರ ಸಾಧಾರಣ ಪ್ರದರ್ಶನಕ್ಕೆ ಅವರ ಆರಂಭಿಕ ಜೊತೆಗಾರನಾಗಿ ಕಣಕ್ಕಿಳಿಯುತ್ತಿರುವ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ಪ್ರಭಾವ ಬೀರಿರಬಹುದು,' ಎಂದು ಹೇಳಿದ್ದಾರೆ.

'ಜೈಸ್ವಾಲ್ ಫಾರ್ಮ್ ಅಚ್ಚರಿ ತಂದಿದೆ'

'ಯಶಸ್ವಿ ಜೈಸ್ವಾಲ್ ಅವರಿಂದ ನಿರೀಕ್ಷಿಸಿದಷ್ಟು ಪ್ರದರ್ಶನ ಕಂಡುಬರುತ್ತಿಲ್ಲ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಅವರ ಈ ಫಾರ್ಮ್ ನನಗೆ ಅಚ್ಚರಿ ತಂದಿದೆ. ಅವರಿಂದ ಉತ್ತಮ ಪ್ರದರ್ಶನ ಮೂಡಿಬರಲಿದೆ ಎಂದು ನನಗೆ ದೊಡ್ಡ ಭರವಸೆ ಇತ್ತು. ಆದರೆ ವೈಭವ್ ಸೂರ್ಯವಂಶಿಯವರ ಆಟದ ವೈಖರಿ ಜೈಸ್ವಾಲ್ ಅವರನ್ನು ವಿಚಲಿತಗೊಳಿಸಿರಬಹುದು ಎಂಬ ಸಣ್ಣ ಅನುಮಾನ ನನ್ನಲ್ಲಿದೆ,' ಎಂದು ಹೇಳಿದ್ದಾರೆ.

ಪ್ರಸ್ತುತ ಸೂರ್ಯವಂಶಿ-ಜೈಸ್ವಾಲ್ ಜೋಡಿಯ ಪರಿಸ್ಥಿತಿಯನ್ನು ಭಾರತ ತಂಡದ ಮಾಜಿ ಆರಂಭಿಕ ಜೋಡಿಯಾದ ವೀರೇಂದ್ರ ಸೆಹ್ವಾಗ್ ಮತ್ತು ಆಕಾಶ್ ಚೋಪ್ರಾ ಅವರ ಸ್ಥಿತಿಗೆ ಹೋಲಿಸಿದ್ದಾರೆ. ನೀವು ಟೆಸ್ಟ್ ಪಂದ್ಯಗಳಲ್ಲಿ ವೀರೇಂದ್ರ ಸೆಹ್ವಾಗ್ ಮತ್ತು ಆಕಾಶ್ ಚೋಪ್ರಾ ಅವರ ಆರಂಭಿಕ ಜೋಡಿಯನ್ನು ನೆನಪಿಸಿಕೊಂಡರೆ, ಆಕಾಶ್ ಚೋಪ್ರಾ ಅವರು 30 ಅಥವಾ 40 ರನ್‌ಗಳ ಉತ್ತಮ ಆರಂಭ ನೀಡುವ ಮೂಲಕ ಅದ್ಭುತವಾಗಿ ಆಡುತ್ತಿದ್ದರು ಎಂದು ಹೇಳಿದ್ದಾರೆ.

ಆದರೆ ಇಲ್ಲಿ ವೈಭವ್ ಸೂರ್ಯವಂಶಿಯವರ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಜೈಸ್ವಾಲ್ ಅವರ ಲಯ ಸ್ವಲ್ಪ ತಪ್ಪಿದೆ ಎಂದು ನನಗೆ ಅನಿಸುತ್ತಿದೆ. ಹಲವು ಪಂದ್ಯಗಳಲ್ಲಿ ಜೈಸ್ವಾಲ್ ಅವರು ಬಿಗ್ ಶಾಟ್‌ ಹೊಡೆಯಲು ಹೋಗಿ ಔಟ್ ಆಗಿದ್ದಾರೆ. ಜೈಸ್ವಾಲ್ ಅವರು ಉತ್ತಮವಾಗಿ ಬ್ಯಾಟಿಂಗ್ ಮಾಡುವುದನ್ನು ನೋಡಲು ನಾನು ಬಯಸುತ್ತೇನೆ. ಜೋಫ್ರಾ ಆರ್ಚರ್ ಅವರ ಅಗತ್ಯವಿದ್ದ ದಿನ ಅವರು ಕೂಡ ಉತ್ತಮ ಪ್ರದರ್ಶನ ನೀಡಿದರು. ಆದರೆ ಇದೆಲ್ಲದರ ಹೊರತಾಗಿ ಮುಂಬೈ ಇಂಡಿಯನ್ಸ್ ಈ ಸೀಸನ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಈ ಸ್ಕೋರ್ ಬೆನ್ನಟ್ಟಲು ಸಾಧ್ಯವಿತ್ತು ಎಂದು ಅಶ್ವಿನ್ ಇದೇ ವೇಳೆ ಹೇಳಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ರಾಜಸ್ಥಾನ್ ರಾಯಲ್ಸ್‌ ತಂಡದಲ್ಲಿ ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟದ ಮುಂದೆ ಯಶಸ್ವಿ ಜೈಸ್ವಾಲ್‌ ಆಟ ಮಂಕಾಗಿದೆ. ಜೈಸ್ವಾಲ್ ಉತ್ತಮ ಲಯಕ್ಕೆ ಮರಳುತ್ತಾರೆ ಎನ್ನುವ ನಂಬಿಕೆ ನನಗಿದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+