Petrol, Diesel Prices Hike: ಪೆಟ್ರೋಲ್ - ಡೀಸೆಲ್ ಬೆಲೆ ದೆಹಲಿಗಿಂತ ಕರ್ನಾಟಕದಲ್ಲಿ ಹೆಚ್ಚು ಯಾಕೆ
Petrol, Diesel Prices Hike: ಕರ್ನಾಟಕ ಹಾಗೂ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಕೇಂದ್ರ ಸರ್ಕಾರವು ದೇಶದ ಗ್ರಾಹಕರಿಗೆ ತೈಲ ಶಾಕ್ ಕೊಟ್ಟಿದೆ. ಮೇ 25ರ ಸೋಮವಾರ ಪೆಟ್ರೋಲ್ ಮೇಲಿನ ಬೆಲೆ ಪ್ರತಿ ಲೀಟರ್‌ಗೆ 2.61 ರೂ. ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 2.71 ರೂ. ಏರಿಕೆ ಆಗಿದೆ. ಈ ಬೆಲೆ ಏರಿಕೆಯು ಕಳೆದ 10 ದಿನಗಳಲ್ಲಿ 4ನೇ ಬಾರಿ ಆಗಿದೆ. ಆದರೆ ಕೇಂದ್ರ ಸರ್ಕಾರದ ಬೆಲೆ ಏರಿಕೆಯು ದೇಶದ ವಿವಿಧ ರಾಜ್ಯಗಳ ಮೇಲೆ ಒಂದೇ ಆದರೂ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವಿಪರೀತ ಬೆಲೆ ಏರಿಕೆ ಆಗಿದೆ. ದೆಹಲಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಹೆಚ್ಚಾಗಿದೆ. ದೆಹಲಿಗಿಂತಲೂ ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಕಾರಣವೇನು ಹಾಗೂ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ವಿವರ ಈ ಲೇಖನದಲ್ಲಿದೆ.

ಭಾರತದ ವಿವಿಧ ರಾಜ್ಯಗಳಲ್ಲಿ ಮೇ 25ರಂದು ಪೆಟ್ರೋಲ್ ಬೆಲೆ (ಪ್ರತಿ ಲೀಟರ್‌ಗೆ ರೂಪಾಯಿಗಳಲ್ಲಿ)
* ಆಂಧ್ರಪ್ರದೇಶ - ₹117.88
* ತೆಲಂಗಾಣ - ₹115.69
* ಕೇರಳ - ₹115.49
* ಮಧ್ಯಪ್ರದೇಶ - ₹114.54
* ಪಶ್ಚಿಮ ಬಂಗಾಳ - ₹113.47
* ಬಿಹಾರ - ₹113.35
* ರಾಜಸ್ಥಾನ - ₹112.66
* ಮಹಾರಾಷ್ಟ್ರ - ₹111.18
* ಸಿಕ್ಕಿಂ - ₹110.95
* ಕರ್ನಾಟಕ - ₹110.93
* ಲಡಾಖ್ - ₹110.88
* ಒಡಿಶಾ - ₹109.22
* ಛತ್ತೀಸ್‌ಗಢ - ₹108.06
* ತಮಿಳುನಾಡು - ₹107.77
* ಲಕ್ಷದ್ವೀಪ - ₹107.50
* ಮಣಿಪುರ - ₹106.95
* ಜಾರ್ಖಂಡ್ - ₹105.93
* ಅಸ್ಸಾಂ - ₹105.85
* ಪಂಜಾಬ್ - ₹105.56
* ಮಿಜೋರಾಂ - ₹105.52
* ತ್ರಿಪುರ - ₹105.17
* ನಾಗಾಲ್ಯಾಂಡ್ - ₹104.39
* ಜಮ್ಮು ಮತ್ತು ಕಾಶ್ಮೀರ - ₹104.33
* ಗೋವಾ - ₹104.19
* ಪಾಂಡಿಚೇರಿ - ₹103.58
* ಹರಿಯಾಣ - ₹103.28
* ಹಿಮಾಚಲ ಪ್ರದೇಶ - ₹102.55
* ಮೇಘಾಲಯ - ₹102.26
* ದೆಹಲಿ - ₹102.12
* ಉತ್ತರ ಪ್ರದೇಶ - ₹102.05
* ಗುಜರಾತ್ - ₹101.96
* ಚಂಡೀಗಢ - ₹101.51
* ಉತ್ತರಾಖಂಡ - ₹100.54
* ಅರುಣಾಚಲ ಪ್ರದೇಶ - ₹97.70
* ಅಂಡಮಾನ್ ಮತ್ತು ನಿಕೋಬಾರ್ - ₹88.66
Petrol, Diesel Prices Hike: ದೆಹಲಿಗಿಂತಲೂ ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಯಾಕೆ
ಈಗ ದೆಹಲಿಗಿಂತ ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚು ಇದೆ. ಕಾರಣ, ಕರ್ನಾಟಕ ಸರ್ಕಾರವು ಇಂಧನದ ಮೇಲೆ ದೆಹಲಿಗಿಂತ ಹೆಚ್ಚು ವ್ಯಾಟ್ (VAT) ತೆರಿಗೆ ವಿಧಿಸುತ್ತಿದೆ. ಇದನ್ನು ಕರ್ನಾಟಕ ಸರ್ಕಾರ ಕಡಿಮೆ ಮಾಡಬೇಕು ಎಂದು ವಿರೋಧ ಪಕ್ಷದ ನಾಯಕರು ಇದೀಗ ಆಗ್ರಹಿಸಿದ್ದಾರೆ.












Click it and Unblock the Notifications