Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಎಷ್ಟಿದೆ? ಇಲ್ಲಿದೆ ಮೇ 25ರ ದರಪಟ್ಟಿ

Arecanut Price: ದಾವಣಗೆರೆ ಜಿಲ್ಲೆಯಲ್ಲಿ ರಾಶಿ ಅಡಿಕೆ ಧಾರಣೆ ಸ್ಥರತೆ ಕಾಯ್ದುಕೊಂಡಿದೆ. ಅದರಲ್ಲೂ ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲೂಕು ಸೇರಿ ಜಿಲ್ಲೆಯ ಹಲವೆಡೆ ಅಡಿಕೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಹಾಗಾದ್ರೆ ಇಂದು ದಾವಣಗೆರೆ ಮಾರುಕಟ್ಟೆಯಲ್ಲಿ (ಮೇ 25) ದರ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಈ ಹಿಂದೆ ಕೆಲವರು ಹಸಿ ಅಡಿಕೆ ಮಾರಾಟ ಮಾಡಿ ಲಾಭ ಮಾಡಿಕೊಂಡಿದ್ದರು. ಆದರೆ, ಖೇಣಿ ಕೊಟ್ಟವರು ಸ್ವಲ್ಪ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದಾರೆ. ಯಾಕಂದ್ರೆ ಖೇಣಿ ಕೊಡುವ ವೇಳೆ ದರ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಏರಿಕೆಯಾಗಿತ್ತು. ಆದರೆ ಇದೀಗ ಅದೇ ಆಡಿದ್ದೇ ಆಟ ಎಂಬಂತೆ ಮತ್ತೆ ಇಳಿಕೆಯಾಗಿದ್ದು, ಇದೀಗ ಅದೇ ದರ ಮುಂದುವರೆದಿದೆ.

Arecanut Price Details on May 25 2026 in Davanagere Marcket Know Complete Statistics Details

ಪ್ರಸ್ತುತ ಅಡಿಕೆ ಧಾರಣೆ ಎಷ್ಟಿದೆ?

ಅಡಿಕೆ ದಾವಣಗೆರೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಆಗಿದೆ. ಇಂದು (ಮೇ 25) ರಾಶಿ ಅಡಿಕೆ ಗರಿಷ್ಠ (ಕ್ವಿಂಟಾಲ್‌ಗಳಲ್ಲಿ) ದರ 54,069 ರೂಪಾಯಿ, ಕನಿಷ್ಠ ದರ 40,000 ರೂಪಾಯಿ ಇದ್ದು, ಸರಾಸರಿ ಬೆಲೆ 52,234 ರೂಪಾಯಿ ಇದೆ. ಈ ಮೂಲಕ ಕಳೆದ ಕೆಲ ದಿನಗಳಿಂದ ಇದೇ ದರ ಮುಂದುವರೆದಿದೆ.

ಕಳೆದ 2025ರ ನವೆಂಬರ್ ತಿಂಗಳ ಆರಂಭದಲ್ಲಿ ಕ್ವಿಂಟಾಲ್ ಅಡಿಕೆ ಧಾರಣೆ 60,000 ರೂಪಾಯಿ ಇತ್ತು. ಡಿಸೆಂಬರ್ ಆರಂಭ ಆಗುತ್ತಿದ್ದಂತೆ 55,000 ರೂಪಾಯಿಗೆ ಕುಸಿತ ಕಂಡಿತ್ತು. 2026ರ ಜನವರಿಯಲ್ಲಿ ಇಳಿಕೆಯತ್ತ ಸಾಗಿತ್ತು. ಫೆಬ್ರವರಿ, ಮಾರ್ಚ್‌ನಲ್ಲಿ ಏರಿಳಿತ ಆಗುತ್ತಿತ್ತು. ಏಪ್ರಿಲ್‌ನಲ್ಲಿ ಭರ್ಜರಿ ಏರಿಕೆಯಾಗಿದ್ದು, ತಿಂಗಳ ಅಂತ್ಯದಲ್ಲೂ ಅದೇ ದರ ಮುಂದುವರೆದಿತ್ತು. ಮೇ ಮೊದಲ ವಾರದ ಅಂತ್ಯದಲ್ಲಿ ಏರಿಕೆಯಾಗಿತ್ತು. ಬಳಿಕ ಇಳಿಕೆಯಾಗಿದ್ದು, ಮೇ ಅಂತ್ಯದವರೆಗೂ ಅದೇ ದರ ಮುಂದುವರೆದಿದೆ.

ಯಾವಾಗ ಅಡಿಕೆ ಧಾರಣೆ ಎಷ್ಟಿತ್ತು?

ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಭಾಗದಲ್ಲಿ ಕಳೆದ ವರ್ಷದ ಅಂದರೆ 2025ರ ಜನವರಿ ಕೊನೆಯಲ್ಲಿ 52,000 ರೂಪಾಯಿ ಒಳಗಡೆ ಇದ್ದ ಕ್ವಿಂಟಾಲ್‌ ಅಡಿಕೆ ಧಾರಣೆ, ಫೆಬ್ರವರಿಯಲ್ಲಿ ಮತ್ತೆ 53,000 ರೂಪಾಯಿ ಗಡಿ ದಾಟಿತ್ತು. ಆಗಿನಿಂದಲೂ ಸತತ ಏರಿಕೆ ಆಗುತ್ತಲೇ ಇತ್ತು. ಕೊನೆಗೂ ಏಪ್ರಿಲ್‌ ಅಂತ್ಯದಲ್ಲಿ 60,000 ರೂಪಾಯಿ ಗಡಿ ದಾಟಿತ್ತು.

ಅಕ್ಟೋಬರ್ ನಾಲ್ಕನೇ ವಾರದ ಆರಂಭದಲ್ಲಿ 70,000 ರೂಪಾಯಿ ಸಮೀಪದತ್ತ ಬಂದಿತ್ತು. ಇನ್ನೇನು ಕೆಲವೇ ದಿನಗಳಲ್ಲಿ 70,000 ರೂಪಾಯಿ ಮುಟ್ಟುತ್ತದೆ ಅನ್ನುವಷ್ಟರಲ್ಲೇ ಧಾರಣೆ ಇಳಿಕೆಯಾಗಿತ್ತು. ಮೇ ತಿಂಗಳ ಆರಂಭದಿಂದಲೂ ಜೂನ್‌ ತಿಂಗಳ ಕೆಲವು ವಾರಗಳವರೆಗೆ ಇಳಿಕೆಯಾಗಿ ಮತ್ತೆ ಏರಿಕೆಯತ್ತ ಸಾಗಿತ್ತು. ಬಳಿಕ ಜೂನ್‌ ತಿಂಗಳ ಮಧ್ಯದಿಂದಲೂ ಜುಲೈ ಮೊದಲ ವಾರದ ಮಧ್ಯದವರೆಗೂ ಇಳಿಕೆ ಆಗುತ್ತಲೇ ಬಂದಿತ್ತು. ಇನ್ನು 2023ರ ಜುಲೈ ತಿಂಗಳಲ್ಲಿ ಗರಿಷ್ಠ ದರ 57,000 ರೂಪಾಯಿ ಮುಟ್ಟಿತ್ತು. 2024ರ ಮೇ ತಿಂಗಳಿನಲ್ಲಿ ಗರಿಷ್ಠ 55,000 ರೂಪಾಯಿಗೆ ತಲುಪಿತ್ತು.

2025ರ ಜುಲೈ ಮೊದಲ ವಾರದ ಮಧ್ಯದವರೆಗೂ ಇಳಿಕೆಯತ್ತ ಸಾಗುತ್ತಾ ಬಂದಿತ್ತು. ಜುಲೈಗೆ ಹೋಲಿಕೆ ಮಾಡಿದರೆ, ಆಗಸ್ಟ್‌ನಲ್ಲಿ ಧಾರಣೆಯಲ್ಲಿ ತುಸು ಸುಧಾರಣೆ ಕಂಡಿತ್ತು. ಆದರೆ, ಕೊನೆಯಲ್ಲಿ ತುಸು ಇಳಿಕೆಯಾಗಿ ಮತ್ತೆ ಸೆಪ್ಟೆಂಬರ್ ಅಂತ್ಯದಲ್ಲಿ ತುಸು ಏರಿಕೆಯತ್ತ ಹೊರಟ್ಟಿತ್ತು. ಅಕ್ಟೋಬರ್ ಅಂತ್ಯದವರೆಗೂ ಸತತವಾಗಿ ಏರಿಕೆ ಹಾದಿ ಹಿಡಿದಿತ್ತು.

ನಂತರ ಸತತ ಇಳಿಕೆಯ ಹಾದಿ ಹಿಡಿದಿದ್ದು, ನವೆಂಬರ್ ಮಧ್ಯದಿಂದ ಸತತ ಭರ್ಜರಿ ಏರಿಕೆಯತ್ತ ಹೊರಟಿತ್ತು. ಆದರೆ, ಡಿಸೆಂಬರ್‌ ಮಧ್ಯದಲ್ಲಿ ಅದೇ ಆಡಿದ್ದೇ ಆಟ ಎಂಬಂತೆ ಭಾರೀ ಪ್ರಮಾಣದಲ್ಲಿ ಇಳಿಕೆ ಆಗುತ್ತಲೇ ಬಂದಿತ್ತು. ಇನ್ನೂ 2026ರ ಜನವರಿಯಲ್ಲಿ ಭಾರೀ ಇಳಿಕೆಯತ್ತ ಸಾಗಿದ್ದು, ಬಳಿಕ ಫೆಬ್ರವರಿ ಮೂರನೇ ವಾರದವರೆಗೂ ಏರಿಕೆಯ ಓಟ ಮುಂದುವರೆದಿತ್ತು. ಏಪ್ರಿಲ್‌ ಮಧ್ಯದಿಂದ ಅಂತ್ಯದವರೆಗೂ ಅದೇ ದರ ಮುಂದುವರೆದಿತ್ತು. ಆದರೆ ಮೇ ಮೂರನೇ ವಾರದ ಆರಂಭದಲ್ಲಿ ಇಳಿಕೆಯಾಗಿದ್ದು, ಅಂತದವರೆಗೂ ಅದೇ ದರ ಮುಂದುವರೆದುದೆ. ಮುಂದಿನ ದಿನಗಳಲ್ಲಾದರೂ ಹೆಚ್ಚಳ ಆಗುವ ಭರವಸೆಯಲ್ಲಿ ಬೆಳೆಗಾರರಿದ್ದಾರೆ.

2026ರ ಆರಂಭದಿಂದಲೂ ದರದಲ್ಲಿ ಭಾರಿ ಏರಿಳಿತಗಳು ಕಂಡುಬರುತ್ತಿವೆ. ಜನವರಿಯಲ್ಲಿ 59,299 ರೂಪಾಯಿಗಳಷ್ಟಿದ್ದ ಬೆಲೆಯು ಫೆಬ್ರವರಿ ವೇಳೆಗೆ ದಿಢೀರನೆ 56,119 ರೂಪಾಯಿಗಳಿಗೆ ಕುಸಿದಿತ್ತು. ಈ ಇಳಿಕೆಯ ಹಾದಿ ಮಾರ್ಚ್‌ನಲ್ಲೂ ಮುಂದುವರಿದು ಬೆಲೆಯು 55,500 ರೂಪಾಯಿ ಆಗಿತ್ತು. ಏಪ್ರಿಲ್ 13ರಂದು ಬೆಲೆಯು 56,100 ರೂಪಾಯಿ ಆಗಿತ್ತು. ಬಳಿಕ ಇಳಿಕೆಯಾಗಿ ಏಪ್ರಿಲ್‌ ಅಂತ್ಯದವರೆಗೂ ಸ್ಥಿರತೆ ಕಾಯ್ದುಕೊಂಡಿತ್ತು. ಮೇ ಮೂರನೇ ವಾರದ ಆರಂಭದಲ್ಲಿ ಇಳಿಕೆಯಾಗಿ ಬಳಿಕವೂ ಅದೇ ದರ ಮುಂದುವರೆದಿರುವುದು ಬೆಳೆಗಾರರ ಮುಖದಲ್ಲಿ ಮಂದಹಾಸವನ್ನು ಕಡಿಮೆಯಾಗಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+