ಮುಂದಿನದು ಮೊಬೈಲ್ internet ಬಳಕೆದಾರರ ಯುಗ

ಮುಂಬೈ, ಅಕ್ಟೋಬರ್ 15: ತಾಜಾ ಸಮೀಕ್ಷಾ ವರದಿ ಪ್ರಕಾರ ಮೊಬೈಲ್ ಫೋನುಗಳಲ್ಲಿ ಅಂತರ್ಜಾಲದಲ್ಲಿ ಜಾಲಾಡುತ್ತಿರುವವರು ಬಹುತೇಕ ಯುವಜನತೆ. ಮತ್ತು ಅವರು ಸದಾ ತಮ್ಮ ಮೊಬೈಲ್ ಆನ್ ಮಾಡಿಟ್ಟುಕೊಂಡಿತ್ತಾರೆ ಎಂಬುದು ಗಮನಾರ್ಹ.

ಇದನ್ನು ಕೇಳಿ ಅಂಥಾದ್ದೇನು ವಿಶೇಷ ಇದರಲ್ಲಿ. ನಾನು ಸಹಾ ಸದಾ ಮೊಬೈಲಿನಲ್ಲಿ ಅಂತರ್ಜಾಲದಲ್ಲಿ ಲೀಲಾಜಾಲವಾಗಿ ಜಾಲಾಡುತ್ತಿರುವವರ ಪೈಕಿ ನಾನೂ ಒಬ್ಬ ಎಂದು ನೀವು ಹೇಳಬಹುದು. ಆದರೆ ಇಡೀ ದೇಶಕ್ಕೆ ಅನ್ವಯಿಸಿದಾಗ ಈ ಸಮೀಕ್ಷೆ ಭವಿಷ್ಯದಲ್ಲಿ ಮೊಬೈಲ್ ಮತ್ತು ಇಂಟರ್ ನೆಟ್ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.

ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಮುಂದಿನ ಯುಗ ಯಾರಿಗೆ ಸಲ್ಲುತ್ತದೆ ಅಂದರೆ ಅದು ನಿಸ್ಸಂಶಯವಾಗಿ mobile-phone internet ಬಳಕೆದಾರರಿಗೆ ಸಲ್ಲುತ್ತದೆ ಎನ್ನಬಹುದು.

smartphone ಸುಗ್ಗಿಯಲ್ಲಿ 2016ರ ವೇಳೆಗೆ ಭಾರತದಲ್ಲಿ ಮೊಬೈಲ್ ಮೂಲಕ ಜಾಹೀರಾತು ಮಾರುಕಟ್ಟೆಯ ಗಾತ್ರ 2,800 ಕೋಟಿ ರೂ. ದಾಟುವ ಅಂದಾಜಿದೆ. ಆದರೆ ಇಂದಿನ ಮೊಬೈಲ್ ಫೋನ್ ಜಾಹೀರಾತು ಪ್ರಮಾಣವೆಷ್ಟಿದೆ ಗೊತ್ತಾ? ಅತ್ಯಂತ ನಗಣ್ಯವೆನ್ನಬಹುದಾದ ಕೇವಲ 180 ಕೋಟಿ ರೂ. ಅಷ್ಟೇ!

 ಶೇ.50 ಮಂದಿ ಮೊಬೈಲಿಗೆ ಇಂಟರ್ನೆಟ್ ಕನೆಕ್ಷನ್

ಶೇ.50 ಮಂದಿ ಮೊಬೈಲಿಗೆ ಇಂಟರ್ನೆಟ್ ಕನೆಕ್ಷನ್

ಮುಂಬೈನ Avendus Capital ನಡೆಸಿರುವ ಸಮೀಕ್ಷೆಯ ಪ್ರಕಾರ ಪ್ರಸ್ತುತ ವಿಶ್ವದಲ್ಲಿ ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಮೊಬೈಲ್ ಬಳಸುವವರ ಪೈಕಿ ಶೇ. 20-25ರಷ್ಟು ಮಂದಿ ಮಾತ್ರವೇ mobile-phone internet ಬಳಕೆದಾರರಿದ್ದರೆ ಭಾರತದಲ್ಲಿ ಶೇ. 50ರಷ್ಟು ಮಂದಿ ತಮ್ಮ ಮೊಬೈಲಿಗೆ ಇಂಟರ್ ನೆಟ್ ಕನೆಕ್ಷನ್ ಪಡೆದುಕೊಂಡಿದ್ದಾರೆ.

ಈ ಶೇ. 50ರಷ್ಟು ಮಂದಿ ಮೊಬೈಲ್ ಇಂಟರ್ ನೆಟ್ ಬಳಕೆದಾರರ ಪೈಕಿ ಬಹುತೇಕರು ಯುವಜನತೆಯಾಗಿರುವುದರಿಂದ ಈ ಮಾಧ್ಯಮದಲ್ಲಿ ಹೆಚ್ಚು ಆಶಾದಾಯಕ ಪರಿಸ್ಥಿತಿ ಮೂಡುತ್ತಿದೆ. ಹಾಗಾಗಿ mobile-phone internet ಮಾಧ್ಯಮದಲ್ಲಿ ಹೆಚ್ಚು ಸಮಂಜಸ content ನೀಡುವುದಕ್ಕೆ ಒತ್ತು ನೀಡಬೇಕಿದೆ.

Smartphone, iOS ಮತ್ತು Google Play

Smartphone, iOS ಮತ್ತು Google Play

ಇದುವರೆಗೂ ಟೆಲಿಕಾಂ ಆಪರೇಟರುಗಳಿಗೆ ಮೌಲ್ಯವರ್ಧಿತ ಸೇವೆಗಳನ್ನು ಕಲ್ಪಿಸುವ ಮೂಲಕವಷ್ಟೇ ತಮ್ಮ ಆದಾಯವನ್ನು ವೃದ್ಧಿಸಿಕೊಳ್ಳಬೇಕಿತ್ತು. ಆದರೆ ಜಾಗತಿಕ ಮಟ್ಟದಲ್ಲಿ ಬದಲಾದ ಕಾಲಮಾನದಲ್ಲಿ ಸಮಂಜಸ contentಗೆ ಮೊಬೈಲ್ ಬಳಕೆದಾರರು ಮುಗಿಬೀಳುತ್ತಿದ್ದಾರೆ. Smartphone, iOS ಮತ್ತು Google Playಗಳು mobile-phone internet ಮಾಧ್ಯಮದ ದಿಕ್ಕುದೆಸೆ ಬದಲಿಸುತ್ತಿವೆ.(ಕೃಪೆ- http://services.2020mobile.es)

gaming ಮತ್ತು apps market

gaming ಮತ್ತು apps market

ಇದಕ್ಕೆ ಆಧಾರವಾಗಿ gaming ಮತ್ತು apps market ಸಹ ಸದೃಢವಾಗಿ ಬೇರೂರುತ್ತಿವೆ. 2016 ವೇಳೆಗೆ ಈ ಮಾರುಕಟ್ಟೆ 2,000 ಕೋಟಿ ರೂ. ದಾಟುವ ಅಂದಾಜಿದೆ. (ಚಿತ್ರ ಕೃಪೆ- flipcart)

15 ಕೋಟಿ ಮೊಬೈಲ್ ಬಳಕೆದಾರರು

15 ಕೋಟಿ ಮೊಬೈಲ್ ಬಳಕೆದಾರರು

ಇನ್ನು ಜಾಹೀರಾತುದಾರರ ಹಿತದೃಷ್ಟಿಯಿಂದ ನೋಡಿದರೆ ತ್ವರಿತಗತಿಯ ಬಳಕೆದಾರರ ಸರಕು ಉತ್ಪಾದನಾ ಕಂಪನಿಗಳು mobile-phone internet ಮಾಧ್ಯಮಕ್ಕೆ ಹೆಚ್ಚಾಗಿ ಜೋತುಬೀಳುತ್ತಿವೆ. ಈ ಮಾಧ್ಯಮ ಹತ್ತಾರು ಪಟ್ಟು ವೃದ್ಧಿಸುವ ಸಾಮರ್ಥ್ಯ ಹೊಂದಿದೆ. ಅಷ್ಟಕ್ಕೂ ಯಾವುದೇ ಗ್ರಾಹಕ ಉತ್ಪನ್ನ ಕಂಪನಿಗೆ 15 ಕೋಟಿ ಮೊಬೈಲ್ ಬಳಕೆದಾರರನ್ನು ಕಡೆಗಣಿಸಲು ಸಾಧ್ಯವೇ!?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+