ಮಹಾರಾಷ್ಟ್ರದಲ್ಲಿ 11ನೇ ತರಗತಿಗೆ ಉಚಿತ ಆನ್‌ಲೈನ್ ತರಗತಿ ಆರಂಭ

ಮುಂಬೈ, ನವೆಂಬರ್ 02: ಮಹಾರಾಷ್ಟ್ರದಲ್ಲಿ 11ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಆನ್‌ಲೈನ್ ತರಗತಿಯನ್ನು ಆರಂಭಿಸಲಾಗಿದೆ.

ಕೊರೊನಾ ಸೋಂಕು ಭೀತಿಯ ಈ ಸಂದರ್ಭದಲ್ಲಿ ಉಂಟಾಗುತ್ತಿರುವ ಶೈಕ್ಷಣಿಕ ನಷ್ಟವನ್ನು ತಪ್ಪಿಸುವ ಕಾರಣ ಶಿಕ್ಷಣ ಇಲಾಖೆಯು ಉಚಿತ ಆನ್‌ಲೈನ್ ತರಗತಿಯನ್ನು ಆರಂಭಿಸಿದೆ.

ಭಾನುವಾರ ಸಂಜೆಯವರೆಗೆ ಸುಮಾರು 62 ಸಾವಿರದಷ್ಟು ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗೆ ನೋಂದಣಿ ಮಾಡಿಸಿಕೊಂಡಿದ್ದರು.

Free Online Classes Begin For 11th Standard Students In Maharashtra

ಯೂಟ್ಯೂಬ್ ಮೂಲಕ ತರಗತಿಗಳನ್ನು ಆರಂಭಿಸಲಾಗಿದ್ದು, ಈ ವರೆಗೆ ಜ್ಯೂನಿಯರ್ ಕಾಲೇಜಿನ ಮೊದಲ ವರ್ಷದ ಎಫ್‌ವೈಜೆಸಿ ಅಥವಾ 11ನೇ ತರಗತಿ ಸುಮಾರು 60 ಸಾವಿರ ವಿದ್ಯಾರ್ಥಿಗಳು ತರಗತಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ರಾಜ್ಯ ಶಿಕ್ಷಣ ಮಂಡಳಿಯ ನಿರ್ದೇಶಕ ದಿನಾರ್ ಪಟೇಲ್ ಮಾಹಿತಿ ನೀಡಿದ್ದಾರೆ.

ಕೊರೊನಾ ಸೋಂಕಿನ ಜತೆಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮರಾಠಿಗರಿಗೆ ಮೀಸಲಾತಿ ನೀಡುವ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿರುವ ಕಾರಣ ಎಫ್‌ವೈಜೆಸಿಗೆ ಪ್ರವೇಶ ಪ್ರಕ್ರಿಯೆಗಳು ಸ್ಥಗಿತಗೊಂಡಿವೆ.

ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಹರಡುವಿಕೆ ಪ್ರಮಾಣ ಕೊಂಚ ತಗ್ಗಿದಂತೆ ತೋರುತ್ತಿದೆ. ಕಳೆದ 24 ಗಂಟೆಗಳಲ್ಲಿ 45230 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.

ಕಳೆದೊಂದು ದಿನಗಳಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳಿಗಿಂತ ಗುಣಮುಖ ಪ್ರಕರಣಗಳ ಸಂಖ್ಯೆಯೇ ಹೆಚ್ಚಾಗಿದೆ. ಒಂದು ದಿನದಲ್ಲಿ 53,285 ಮಂದಿ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದು, 496 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ದೇಶಾದ್ಯಂತ ಕೊವಿಡ್-19 ಸೋಂಕಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.

Recommended Video

      RRNagar Congress Candidate Kusuma Exclusive Interview | ನಾನು ಯಾರನ್ನೂ ನಂಬೋಲ್ಲ !! | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+