ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿಲ್ಲ: ಮಮತಾ ಕುಲಕರ್ಣಿ

ಮುಂಬೈ, ಜುಲೈ 22: ಹಿಂದಿ ಚಿತ್ರರಂಗದಲ್ಲಿ ಒಂದುಕಾಲದಲ್ಲಿ ಗ್ಲಾಮರ್ ತಾರೆಯಾಗಿ ಕಾಣಿಸಿಕೊಂಡಿದ್ದ ನಟಿ ಮಮತಾ ಕುಲಕರ್ಣಿ ಅವರು ಕೊನೆಗೂ ಡ್ರಗ್ಶ್ ಮಾಫಿಯಾದ ಆರೋಪದ ಬಗ್ಗೆ ವಿವರಣೆ ನೀಡಿದ್ದಾರೆ.

ಪತಿ ವಿಕ್ಕಿ ಗೋಸ್ವಾಮಿ ಅವರು ಡ್ರಗ್ಸ್ ಮಾಫಿಯಾ ಕಿಂಗ್ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಜತೆಗೆ ಮಮತಾ ಕೂಡಾ ಸಕ್ರಿಯವಾಗಿ ಮಾದಕ ದ್ರವ್ಯ ವ್ಯಾಪಾರಿ ಎನ್ನಲಾಗಿತ್ತು. ಆದರೆ, ಎಬಿಪಿ ನ್ಯೂಸ್ ಗೆ ಕೊಟ್ಟಿರುವ ಸಂದರ್ಶನದಲ್ಲಿ ಮಮತಾ ಅವರು ಎಲ್ಲಾ ಸುದ್ದಿಯನ್ನು ಅಲ್ಲಗೆಳೆದಿದ್ದಾರೆ.

ಮಾದಕ ವಸ್ತುಗಳ ಬಳಕೆಯನ್ನು ನಾನು ವಿರೋಧಿಸುತ್ತೇನೆ. ನಾನು ಡ್ರಗ್ಸ್ ಮಾಫಿಯಾದಲ್ಲಿ ಪಾಲ್ಗೊಂಡಿಲ್ಲ ಎದು ಬಾಲಿವುಡ್ ನ ಮಾಜಿ ನಟಿ ಮಮತಾ ಕುಲಕರ್ಣಿ ಹೇಳಿದ್ದಾರೆ.

ಇತ್ತೀಚೆಗೆ ಮಹಾರಾಷ್ಟ್ರದ ಥಾಣೆ ಪೊಲೀಸರು ಸೋಲಾಪುರದ ಫ್ಯಾಕ್ಟರಿಯೊಂದರಿಂದ 20 ಟನ್ ಎಫೆಡ್ರಾಯಿನ್ ಡ್ರಗ್ಸ್ ವಶಕ್ಕೆ ಪಡೆದಿದ್ದರು. ಈ ಡೀಲಿಂಗ್ ನಲ್ಲಿ ಪತಿ ವಿಕ್ಕಿ ಗೋಸ್ವಾಮಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿದು ಬಂದಿದೆ. ಪತಿಯ ಡ್ರಗ್ ಡೀಲಿಂಗ್ ಗೆ ಮಮತಾ ಕೂಡಾ ಸಾಥ್ ನೀಡುತ್ತಿದ್ದರು ಎಂಬ ಮಾಹಿತಿ ಇತ್ತು. ಅದರೆ, ಈ ಬಗ್ಗೆ ಮಮತಾ ತುಟಿ ಬಿಚ್ಚಿರಲಿಲ್ಲ.

 ಕೀನ್ಯಾದಲ್ಲೆ ನೆಲೆಸಿರುವ ಗೋಸ್ವಾಮಿ

ಕೀನ್ಯಾದಲ್ಲೆ ನೆಲೆಸಿರುವ ಗೋಸ್ವಾಮಿ

ಸದ್ಯ ಕೀನ್ಯಾದಲ್ಲೆ ನೆಲೆಸಿರುವ ಗೋಸ್ವಾಮಿಯನ್ನು ಗಡಿಪಾರು ಮಾಡುವಂತೆ ಮನವಿ ಸಲ್ಲಿಸಲಾಗುತ್ತದೆ.ಮನೋಜ್ ಜೈನ್, ಪುನೀತ್ ಶ್ರಿಂಗಿ, ಪ್ರದೀಪ್ ಸಿಂಗ್ ಗಿಲ್ ಮುಂತಾದವರು ಸಹ ಆರೋಪಿಗಳಾಗಿದ್ದಾರೆ. ಇಂಟರ್ ಪೋಲ್ ನೋಟಿಸ್ ಪಡೆದಿರುವ ವಿಕ್ಕಿ ತನ್ನ ಜಾಲದ ವಿವರವನ್ನು ಪತ್ನಿ ಮಮತಾಗೆ ಹೇಳಿರುವ ಸಾಧ್ಯತೆಯಿದೆ.

ಅನೇಕ ಕಡೆ ಗ್ರಾಹಕರನ್ನು ಹೊಂದಿರುವ ವಿಕ್ಕಿ

ಅನೇಕ ಕಡೆ ಗ್ರಾಹಕರನ್ನು ಹೊಂದಿರುವ ವಿಕ್ಕಿ

ಅಲ್ಲದೆ, ಆಕೆಯನ್ನು ದುಬೈ, ಸಿಂಗಪುರ, ದಕ್ಷಿಣ ಆಫ್ರಿಕಾ ಹಾಗೂ ಯುಎಸ್ ಕ್ಲೈಂಟ್ ಜತೆ ಸಭೆ ನಡೆಸಲು ಕಳಿಸಿದ್ದ ಎಂಬ ಮಾಹಿತಿ ಕೂಡಾ ಬಂದಿತ್ತು. ಮಮತಾ ಹೆಸರಿನಲ್ಲೇ ಬ್ಯಾಂಕ್ ವ್ಯವಹಾರಗಳನ್ನು ಆತ ನಡೆಸುತ್ತಿದ್ದ. 2014ರಲ್ಲ್ಲಿ ಮಮತಾ ಹಾಗೂ ಗೋಸ್ವಾಮಿ ಅವರನ್ನು ಕೀನ್ಯಾ ಪೊಲೀಸರು ವಿಚಾರಣೆಗಾಗಿ ಬಂಧಿಸಿದ್ದರು. ಆದರೆ, ನಂತರ ಬಿಡುಗಡೆಯಾಗಿದ್ದರು.

ಯುಎಇನಲ್ಲಿ ಜೈಲಿನಲ್ಲಿದ್ದ ವಿಕ್ಕಿ

ಯುಎಇನಲ್ಲಿ ಜೈಲಿನಲ್ಲಿದ್ದ ವಿಕ್ಕಿ

1997 ರಲ್ಲಿ ನಿಷೇಧಿತ ಮ್ಯಾಂಡ್ರಕ್ಸ್ 11.5 ಟನ್ ಗಳಷ್ಟು ಸಾಗಿಸುತ್ತಿದ್ದ ಗೋಸ್ವಾಮಿಯನ್ನು ಬಂಧಿಸಿದ್ದ ಯುಎಇ ಪೊಲೀಸರು 25 ವರ್ಷ ಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದರು. 2012ರ ನವೆಂಬರ್ 15 ರಂದು ಬಿಡುಗಡೆಯಾಗಿದ್ದ 2012ರಲ್ಲಿ 52 ವರ್ಷ ವಯಸ್ಸಿನ ವಿಕ್ಕಿಯನ್ನು ಮಮತಾ (ಈಗ 44 ವರ್ಷ) ಮದುವೆಯಾಗಿದ್ದರು. ನಂತರ ಇಸ್ಲಾಂ ಧರ್ಮಕ್ಕೆ ಮಮತಾ ಮತಾಂತರಗೊಂಡಿದ್ದರು

ಕುಲಕರ್ಣಿ ಮೇಲೆ ಡಿ ಗ್ಯಾಂಗ್ ವಾರ್?

ಕುಲಕರ್ಣಿ ಮೇಲೆ ಡಿ ಗ್ಯಾಂಗ್ ವಾರ್?

90ರ ದಶಕದಲ್ಲಿ ಪಡ್ಡೆಗಳ ನಿದ್ದೆಗೆಡಿಸಿದ್ದ ಮಮತಾ ಕುಲಕರ್ಣಿ ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಇತ್ತೀಚೆಗೆ ಪತಿ ವಿಕ್ಕಿ ಗೋಸ್ವಾಮಿ ಜೊತೆ ಬಂಧನವಾದ ಸುದ್ದಿ ಈಗಾಗಲೇ ಜಗತ್ತಿಗೆ ತಿಳಿದಿದೆ. ದುಬೈ ಜೈಲಿನಲ್ಲಿ ಸುಮಾರು 15 ವರ್ಷಗಳ ಕಾಲ ವಿಕ್ಕಿ ಗೋಸ್ವಾಮಿ ಕಾಲದೂಡಿದ್ದರೂ ಮತ್ತೆ ಡ್ರಗ್ಸ್ ದಂಧೆಯಲ್ಲಿ ತೊಡಗಿಕೊಂಡಿದ್ದ. ವಿಕ್ಕಿಗೆ ಛೋಟಾ ರಾಜನ್ ಸಾಥ್ ನೀಡಿದ್ದ, ಬದ್ಧವೈರಿ ರಾಜನ್ ವಿರುದ್ಧ ಸೇಡು ತೀರಿಸಿಕೊಳ್ಳಲು ಡೀಲಿಂಗ್ ಬಗ್ಗೆ ಪೊಲೀಸರಿಗೆ ಡಿ ಕಂಪನಿ ಮಾಹಿತಿ ನೀಡಿತ್ತು

ಬಾಲಿವುಡ್ ನಟಿಗಿತ್ತು ಭೂಗತ ನಂಟು

ಬಾಲಿವುಡ್ ನಟಿಗಿತ್ತು ಭೂಗತ ನಂಟು

ಕನ್ನಡದಲ್ಲಿ ವಿಷ್ಣು ವಿಜಯ ಚಿತ್ರದಲ್ಲಿ ನಟಿಸಿದ್ದ ಮಮತಾ ಅವರು ಹಿಂದಿಯಲ್ಲಿ ಅನೇಕ ಜನಪ್ರಿಯ ನಟರ ಜೊತೆ ನಟಿಸಿದ್ದರೂ ನಟನೆಗಿಂತ ಮಾದಕತೆಯಿಂದಲೇ ಎಲ್ಲರ ಗಮನ ಸೆಳೆದಿದ್ದಳು. ಬಾಲಿವುಡ್ ಬೆಡಗಿಯರ ಭೂಗತ ಜಗತ್ತಿನ ನಂಟು ತುಂಬಾ ಹಳೆಯ ಇತಿಹಾಸ. ಹಾಜಿ ಮಸ್ತಾನ್ ನಿಂದ ಹಿಡಿದು ಅಬು ಸಲೇಂ ತನಕ ಕಥೆ ಮುಂದುವರೆಯುತ್ತಲೇ ಇದೆ. ಮುಂಬೈನ ರಿಯಲ್ ಎಸ್ಟೇಟ್ ದಂಧೆ ಕೂಡಾ ಕೊರಳಿಗೆ ಉರುಳಾಗುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+