ಮುಂಬೈ: 5 ಸ್ಟಾರ್ ಟ್ರಿಡೆಂಟ್ ಹೊಟೇಲ್ ಬಳಿ ಅಗ್ನಿ ಆಕಸ್ಮಿಕ
ಮುಂಬೈ, ಡಿಸೆಂಬರ್ 20: ಮುಂಬೈಯ 5 ಸ್ಟಾರ್ ಟ್ರಿಡೆಂಟ್ ಹೊಟೇಲ್ ಗೆ ಎಡತಾಕಿಕೊಂಡಿರುವ ಐಷಾರಾಮಿ ಶೋ ರೂಮ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಸಾವು ನೋವಿನ ವರದಿಯಾಗಿಲ್ಲ.
ಬುಧವಾರ ರಾತ್ರಿ ಸುಮಾರು 11 ಗಂಟೆಯ ಆಸುಪಾಸಿನಲ್ಲಿ ಬೆಂಕಿ ಹೊತ್ತಿಕೊಂದಿದ್ದು, ತಕ್ಶಃಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿ ಆರಿಸುವ ಕಾರ್ಯದಲ್ಲಿ ನಿರತರಾದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.
ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸುವುದು ಕೆಲವು ಸೆಕೆಂಡ್ ತಡವಾಗಿದ್ದರೂ ಬೆಂಕಿ ಪಕ್ಕದ 5 ಸ್ಟಾರ್ ಹೊಟೇಲ್ ಗೂ ತಗುಲುವ ಸಾಧ್ಯತೆ ಇತ್ತು. ಈ ಹೊಟೇಲ್ 35 ಅಂತಸ್ತಿನ ಐಷಾರಾಮಿ ಹೊಟೇಲ್ ಆಗಿದ್ದು, 555 ರೂಮುಗಳನ್ನು ಹೊಂದಿದೆ.

ಇತ್ತೀಚೆಗಷ್ಟೇಅಂಧೇರಿ ಉಪನಗರದ ಮರೋಲ್ ನಲ್ಲಿರುವ ಸರಕಾರ ನಡೆಸುವ ಇಎಸ್ ಐಸಿ ಕಾಮ್ ಗರ್ ಆಸ್ಪತ್ರೆಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿತ್ತು. ಈ ಘಟನೆಯಲ್ಲಿ 8 ಜನ ಮೃತರಾಗಿದ್ದರು. ಘಟನೆಯಲ್ಲಿ ಸುಮಾರು 150 ಕ್ಕೂ ಹೆಚ್ಚು ಮಂದಿಗೆ ಗಾಯವಾಗಿತ್ತು. ಸೋಮವಾರ ಸಂಭವಿಸಿದ್ದ ಈ ದುರಂತದಲ್ಲಿ ಇನ್ನೂ ಹಲವರ ಸ್ಥಿತಿ ಗಂಭೀರವಾಗಿದೆ.












Click it and Unblock the Notifications