ವಿವಾದಾತ್ಮಕ ಹೇಳಿಕೆ: ನಟಿ ಕಂಗನಾ ಮೇಲೆ ಬಿತ್ತು ಕೇಸ್
ಮುಂಬೈ, ಏಪ್ರಿಲ್ 24: ಕೋಮು ಭಾವನೆ ಕೇರಳಿಸುವಂತ ಹೇಳಿಕೆ ನೀಡಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ಮೇಲೆ ದೂರು ದಾಖಲಾಗಿದೆ.
ವಕೀಲ ಆಲಿ ಅಸೀಪ್ ಖಾನ್ ಎಂಬ ವಕೀಲರು ನೀಡಿರುವ ದೂರಿನ ಆಧಾರದ ಮೇಲೆ ಅಂಬೋಲಾ ಸಬ್ ಅರ್ಬನ್ ಪೊಲೀಸರು ಕಂಗನಾ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.
ಇತ್ತೀಚೆಗೆ ಕಂಗನಾ ತಂಗಿ ರಂಗೋಲಿ ಚಾಂಡೆಲಾ ಒಂದು ಧರ್ಮದವರು ಭಯೋತ್ಪಾದಕರು ಎಂದು ಹೇಳಿದ್ದರು. ತಂಗಿಯ ಬೆಂಬಲವಾಗಿ ರನೌತ್, ಇನ್ಸಟಾಗ್ರಾಮ್ ನಲ್ಲಿ ವಿಡಿಯೋ ಹಾಕಿ, 'ಹೌದು ಒಂದು ಕೋಮಿನವರು ಭಯೋತ್ಪಾದನಾ ಚಟುವಟಿಕೆಯಲ್ಲಿ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ' ಎಂದು ಹೇಳಿ ಮುಸ್ಲಿಂ ಕೋಮಿನ ವಿರುದ್ಧ ವಿಡಿಯೋ ಹಾಕಿದ್ದರು. ಈ ವೀಡಿಯೋ ಸಕತ್ ವೈರಲ್ ಆಗಿತ್ತು.

ಈಗ ನಟಿಯ ವಿರುದ್ಧ ದೂರು ದಾಖಲಾಗಿದೆ. ರಂಗೋಲಿ ಚಂಡೆಲಾ ಟ್ವಿಟರ್ ನಲ್ಲಿ ವಿಡಿಯೋ ಹಾಕಿದ್ದರು. ಅವರ ಖಾತೆಯನ್ನು ಟ್ವಿಟರ್ ಅಮಾನತು ಮಾಡಿದೆ.












Click it and Unblock the Notifications