ಪೋಷಕರ ವಿರೋಧಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು

ಮುಂಬೈ, ಜೂನ್ 07: ಪೋಷಕರ ವಿರೋಧಕ್ಕೆ ಹೆದರಿ, ಯುವ ಪ್ರೇಮಿಗಳು ಆತ್ಮಹತ್ಯೆಗೆ ಶರಣಾದ ಘಟನೆ ಇಲ್ಲಿನ ಮುಲಾಂದ್ ಬಳಿ ನಡೆದಿದೆ. ಕಾರಿನಲ್ಲಿ ಪ್ರೇಮಿಗಳಿಬ್ಬರ ಶವ ಪತ್ತೆಯಾಗಿದೆ.

ಮುಲಾಂದ್‌ ಬಳಿಯ ಕಾರ್‌ ಪಾರ್ಕ್‌ನಲ್ಲಿ ಮೃತಪಟ್ಟವರನ್ನು ಸಲ್ಮಾನ್‌ ಅಫ್ರೋಜ್‌ ಆಲಮ್‌ ಖಾನ್‌ (26) ಹಾಗೂ ಮನಿಶಾ ನೇಗಿ(21) ಎಂದು ಗುರುತಿಸಲಾಗಿದೆ. ಈ ಜೋಡಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

ಇವರಿಬ್ಬರಿದ್ದ ಕಾರಿನ ಲೈಟ್ ಆನ್ ಆಗಿತ್ತು. ಹಾಗೂ ವಾಹನದ ಇಂಜಿನ್ ಆಫ್ ಆಗಿರಲಿಲ್ಲ. ಇಬ್ಬರು ಮನೆಯಲ್ಲಿ ವಿರೋಧದ ಹಿನ್ನೆಲೆಯಲ್ಲಿ ಇಬ್ಬರು ಆತ್ಮಹತ್ಯೆಗೆ ಶರಣಾಗಿರಬಹುದು ಎಂಬ ಅನುಮಾನ ಮೂಡಿದೆ.

Faced With Parents Opposition, Lovers Allegedly Commit Suicide

ಸ್ಥಳೀಯ ನಿವಾಸಿಗಳು ನೀಡಿದ ಮಾಹಿತಿ ಆಧಾರದ ಮೇಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪ್ರಜ್ಞೆ ತಪ್ಪಿದ್ದ ಇಬ್ಬರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಇಬ್ಬರ ಪ್ರಾಣಪಕ್ಷಿಗಳು ಆಗಲೇ ಹಾರಿ ಹೋಗಿತ್ತು.

ಕಳೆದ ನಾಲ್ಕು ವರುಷಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದರು. ಕಾರಿನಲ್ಲಿ ಯಾವುದೇ ಡೆತ್‌ ನೋಟ್‌ ಸಿಕ್ಕಿಲ್ಲ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+