ಪಾಕಿಸ್ತಾನಿ ಹಾಡುಗಾರ ರಾಹತ್ ಫತೇಹ್ ಅಲಿ ಖಾನ್ ಗೆ ಫೆಮಾ ನೋಟೀಸ್
ಮುಂಬೈ, ಜನವರಿ 30 : ಬಾಲಿವುಡ್ ನಲ್ಲಿ ಹಲವಾರು ಸೂಪರ್ ಹಿಟ್ ಹಾಡುಗಳನ್ನು ಹಾಡಿರುವ ಪಾಕಿಸ್ತಾನದ ಖ್ಯಾತ ಹಾಡುಗಾರ, ಸಂಗೀತಗಾರ ರಾಹತ್ ಫತೇಹ್ ಅಲಿ ಖಾನ್ ಅವರಿಗೆ ವಿದೇಶಿ ವಿನಿಮಯ ನಿರ್ವಹಣಾ (ಫೆಮಾ) ಕಾಯ್ದೆಯಡಿ ಬುಧವಾರ ಶೋಕಾಸ್ ನೋಟೀಸ್ ಜಾರಿ ಮಾಡಲಾಗಿದೆ.
ಡಬ್ಬಾಂಗ್ ಚಿತ್ರದಲ್ಲಿ 'ತೆರಿ ಮಸ್ತ್ ದೋ ನೈನ್', ಸುಲ್ತಾನ್ ಚಿತ್ರದಲ್ಲಿ 'ಜಗ ಘೂಮೇಗಾ', ಮೈ ನೇಮ್ ಈಸ್ ಖಾನ್ ಚಿತ್ರದಲ್ಲಿ 'ಸಜದಾ'ದಂಥ ಸೂಪರ್ ಹಿಟ್ ಹಾಡುಗಳನ್ನು ಹಾಡಿರುವ ರಾಹತ್ ಫತೇಹ್ ಅಲಿ ಖಾನ್ ಅವರು ಫೆಮಾ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ವಿದೇಶಿ ಹಣವನ್ನು ಕಳ್ಳತನದಿಂದ ಭಾರತದ ಹೊರಗೆ ತೆಗೆದುಕೊಂಡು ಹೋದ ಆರೋಪವನ್ನು ರಾಹತ್ ಫತೇಹ್ ಅಲಿ ಖಾನ್ ಅವರ ವಿರುದ್ಧ ಹೊರಿಸಲಾಗಿದೆ. 2011ರಲ್ಲಿ ಕೂಡ 60 ಲಕ್ಷ ರು.ನಷ್ಟು ಅಘೋಷಿತ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದಾಗ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಲಾಗಿತ್ತು.

ಮುಸ್ಲಿಂ ಸೂಫಿ ಸಂತರ ಭಕ್ತಿಗೀತೆಗಳನ್ನು ಮತ್ತು ಕವ್ವಾಲಿ ಹಾಡುಗಳಿಗಾಗಿ ಖ್ಯಾತಿ ಗಳಿಸಿರುವ ರಾಹತ್ ಫತೇಹ್ ಅಲಿ ಖಾನ್ ಅವರು ಪಾಕಿಸ್ತಾನದ ಮತ್ತೊಬ್ಬ ಖ್ಯಾತ ಕವ್ವಾಲಿ ಹಾಡುಗಾರ ನುಸ್ರತ್ ಫತೇಹ್ ಅಲಿ ಖಾನ್ ಅವರ ಸೋದರ ಸಂಬಂಧಿ.












Click it and Unblock the Notifications