• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡಿ ಗ್ಯಾಂಗಿಗೆ ಹಿನ್ನಡೆ, ದಾವೂದ್ ಸೋದರನ ಪುತ್ರ ರಿಜ್ವಾನ್ ಬಂಧನ

|

ಮುಂಬೈ, ಜುಲೈ 18: ಭೂಗತ ಪಾತಕಿ ದಾವೂದ್​ಇಬ್ರಾಹಿಂನ ಡಿ ಕಂಪನಿಯ ಹವಾಲ ವ್ಯವಹಾರಗಳನ್ನು ನಿಭಾಯಿಸುತ್ತಿದ್ದ ಅಹ್ಮದ್ ರಾಜಾ ಅಲಿಯಾಸ್ ಅಫ್ರೋಜ್ ವದಾರಿ ದುಬೈನಿಂದ ಭಾರತಕ್ಕೆ ಗಡಿಪಾರಾಗಿರುವ ಸುದ್ದಿ ಬೆನ್ನಲ್ಲೇ ಮತ್ತೊಂದು ಸುದ್ದಿ ಬಂದಿದೆ. ದಾವೂದ್ ಸೋದರನ ಪುತ್ರ ಮುಂಬೈ ಪೊಲೀಸರು ಬಂಧಿಸಿದ್ದಾರೆ.

ದಾವೂದ್ ಇಬ್ರಾಹಿಂನ್ ಸೋದರ ಇಕ್ಬಾಲ್ ಕಸ್ಕರ್ ಅವರ ಸೋದರ ರಿಜ್ವಾನ್ ಕಸ್ಕರ್ ನನ್ನು ಬುಧವಾರ ರಾತ್ರಿ ವೇಳೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ.

'ಡಿ ಕಂಪನಿ'ಗೆ ಆಘಾತ, ದುಬೈನಿಂದ ಭಾರತಕ್ಕೆ ಛೋಟಾ ಶಕೀಲ್ ಆಪ್ತ ಅಹ್ಮದ್ ರಾಜಾ 'ಡಿ ಕಂಪನಿ'ಗೆ ಆಘಾತ, ದುಬೈನಿಂದ ಭಾರತಕ್ಕೆ ಛೋಟಾ ಶಕೀಲ್ ಆಪ್ತ ಅಹ್ಮದ್ ರಾಜಾ

ಮುಂಬೈ, ಥಾಣೆ ಅಲ್ಲದೆ ಸೂರತ್ ನಲ್ಲಿರುವ ವ್ಯಾಪಾರಿಗಳನ್ನು ಗುರಿಯನ್ನಾಗಿಸಿಕೊಂಡು ಬೆದರಿಕೆ ಹಾಕಿ ಹಫ್ತಾ ವಸೂಲಿ ಮಾಡುತ್ತಿದ್ದ ಅಹ್ಮದ್ ರಾಜಾ ವಿರುದ್ಧ ಹಲವು ಪ್ರಕರಣ ದಾಖಲಿಸಿಕೊಂಡು, ಬಂಧನಕ್ಕಾಗಿ ಲುಕ್​ಔಟ್​ ನೋಟಿಸ್ ಹೊರಡಿಸಲಾಗಿತ್ತು. ಈಗ ದುಬೈನಿಂದ ಗಡಿಪಾರು ಆದ ಬಳಿಕ ಮುಂಬೈ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ವಿಚಾರಣೆ ವೇಳೆ ರಿಜ್ವಾನ್ ಕಸ್ಕರ್ ಅವರನ್ನು ಅಹ್ಮದ್ ಬಾಯ್ಬಿಟ್ಟಿದ್ದಾನೆ. ಅಹ್ಮದ್ ನೀಡಿದ ಮಾಹಿತಿಯನ್ನು ಆಧಾರಿಸಿ, ಬಲೆ ಬೀಸಿ, ಮುಂಬೈ ವಿಮಾನ ನಿಲ್ದಾಣದಲ್ಲಿ ರಿಜ್ವಾನ್ ನನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸ್ ಪ್ರಕಟಿಸಿದೆ.

ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಗುಜರಾತ್ ರಾಜ್ಯಗಳಲ್ಲಿ ಮುಖ್ಯವಾಗಿ ಡಿ ಕಂಪನಿ ಕಾರ್ಯ ನಿರ್ವಹಿಸುತ್ತಿದ್ದು, ನಕಲಿ ನೋಟು ಜಾಲ, ಐಎಸ್ಐನ ಅಕ್ರಮ ಮಾದಕ ದ್ರವ್ಯ ವ್ಯವಹಾರ, ಮನಿ ಲಾಂಡ್ರಿಂಗ್ ಸೇರಿದಂತೆ ಅನೇಕ ಭೂಗತ ಪಾತಕಗಳಲ್ಲಿ ತೊಡಗಿಕೊಂಡಿದೆ.

English summary
Mumbai Police has arrested underworld don Dawood Ibrahim's nephew Rizwan Kaskar in connection with an extortion case, an official said on Thursday. Rizwan Kaskar, the son of Ibrahim's brother Iqbal Kaskar, was arrested on Wednesday night from the international airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X