ಕೊರೊನಾಭೀತಿ ನಡುವೆ ನಮಾಜ್, 150 ಮಂದಿ ವಿರುದ್ಧ ಎಫ್ಐಆರ್

ಮುಂಬೈ, ಮಾರ್ಚ್ 24: ಇಲ್ಲಿನ ಸುನ್ನಿ ಶಫಿ ಮಸೀದಿಯಲ್ಲಿ ನಮಾಜು ಮಾಡಲು ಅನುವು ಮಾಡಿಕೊಟ್ಟ ಟ್ರಸ್ಟಿಗಳ ವಿರುದ್ಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊರೊನಾವೈರಸ್ ಸೋಂಕು ಹರಡದಂತೆ ಕಠಿಣ ಕ್ರಮಗಳನ್ನು ಮಹಾರಾಷ್ಟ್ರ ಸರ್ಕಾರ ಜರುಗಿಸಿದೆ. ಈ ನಡುವೆ ಎಲ್ಲಾ ಪ್ರಾರ್ಥನಾ ಮಂದಿರಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ರದ್ದುಗೊಳಿಸಲಾಗಿದೆ.

ಆದರೆ, ಸರ್ಕಾರದ ನಿಯಮ ಉಲ್ಲಂಘಿಸಿ ಪ್ರಾರ್ಥನೆಯಲ್ಲಿ ತೊಡಗಿದ್ದ 150ಕ್ಕೂ ಅಧಿಕ ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಜೆಜೆ ಪೊಲೀಸರು, ಎಫ್ಐಆರ್ ಹಾಕಿದ್ದಾರೆ.

ಸಿಆರ್ ಪಿಸಿ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು, ಸಾರ್ವಜನಿಕವಾಗಿ ಜನರು ಗುಂಪಿನಲ್ಲಿರುವುದನ್ನು ನಿಷೇಧಿಸಲಾಗಿದೆ.

COVID-19: FIR against masjid trustees for violating govt norms

ಆದರೆ, ಮಸೀದಿಯಲ್ಲಿ100 ರಿಂದ 150 ಮಂದಿ ನಮಾಜು ಮಾಡುತ್ತಿರುವ ಸುದ್ದಿ ಬಂದಿದೆ. ಸೋಮವಾರ ಮಧ್ಯಾಹ್ನದ ವೇಳೆ ಎಸಿಪಿ ಅವಿನಾಶ್ ಧರ್ಮಾಧಿಕಾರಿ ಅವರ ತಂಡ ಮಸೀದಿಗೆ ತೆರಳಿ ಅಲ್ಲಿ ನೆರೆದಿದ್ದವರನ್ನು ತೆರವುಗೊಳಿಸಿದ್ದಾರೆ.

ನಂತರ ಮಸೀದಿಯ ಟ್ರಸ್ಟಿಗಳಾದ ಮಜಲ್ ಬದ್ವಾನ್ ಕುನಿ ಸೇರಿದಂತೆ 150 ಮಂದಿ ವಿರುದ್ಧ ಐಪಿಸಿ ಸೆಕ್ಷನ್ 188,269 ಅನ್ವಯ ಹಾಗೂ ಮಹಾರಾಷ್ಟ್ರ ಪೊಲೀಸ್ ಕಾಯ್ದೆ ಉಲ್ಲಂಘನೆ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆಸಲಾಗುತ್ತಿದ್ದು, ಯಾವುದೇ ಬಂಧನವಾಗಿಲ್ಲ ಎಂದು ಧರ್ಮಾಧಿಕಾರಿ ಹೇಳಿದ್ದಾರೆ.

READ IN ENGLISH

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+