ವಿಡಿಯೋ: ಗೋ ಕೊರೊನಾ.. ಗೋ ಕೊರೊನಾ ಹಾಡು ಹಾಡಿದ ಕೇಂದ್ರ ಸಚಿವ!

ಮುಂಬೈ, ಮಾರ್ಚ್.10: ದೇಶಾದ್ಯಂತ ಮಾರಣಾಂತಿಕ ರೋಗ ಕೊರೊನಾ ವೈರಸ್ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ. ಇದರ ಮಧ್ಯೆ ಕೇಂದ್ರ ಸಚಿವ ರಾಮದಾಸ್ ಅಥವಾಲೆ ಹಾಡಿದ ಹಾಡು ಎಲ್ಲರ ಗಮನ ಸೆಳೆಯುತ್ತಿದೆ.

ಮುಂಬೈನ ಗೇಟ್ ವೇ ಆಫ್ ಇಂಡಿಯಾ ಬಳಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಜಾಥಾ ನಡೆಸಿದ ಕೇಂದ್ರ ಸಚಿವ ರಾಮದಾಸ್ ಅಥವಾಲೆ, ಗೋ ಕೊರೊನಾ, ಕೊರೊನಾ ಗೋ ಎಂದು ಹೇಳಿದರು. ಚೀನಾದಲ್ಲಿ ಕೊರೊನಾ ವೈರಸ್ ಹರಡುವಿಕೆಗೆ ಕಡಿವಾಣ ಹಾಕುವಂತೆ ಪ್ರಾರ್ಥಿಸಿದರು.

ಕೊರೊನಾ ವೈರಸ್ ನಿಂದ ಪಾರು ಮಾಡುವಂತೆ ಪ್ರಾರ್ಥನೆ ಸಲ್ಲಿಸುವ ವೇಳೆಯಲ್ಲಿ ಚೀನಾ ರಾಯಭಾರಿ ತಾಂಗ್ ಗೋಶೈ ಕೂಡಾ ಭಾಗಿಯಾಗಿದ್ದರು. ಈ ವೇಳೆ ಕೇಂದ್ರ ಸಚಿವ ರಾಮದಾಸ್ ಅಥವಾಲೆ ಹಾಡಿರುವ ಹಾಡಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

Coronavirus Song: Central Minister Ramdas Athawale Sing A Song At India Gate

ಭಾರತದಲ್ಲಿ 54 ಮಂದಿಗೆ ಕೊರೊನಾ ಸೋಂಕು:

ಇನ್ನು, ಭಾರತದಲ್ಲಿ ಇದುವರೆಗೂ 54 ಜನರಿಗೆ ಕೊರೊನಾ ವೈರಸ್ ಹರಡಿರುವುದು ಸ್ಪಷ್ಟವಾಗಿದೆ. ಕೇರಳದಲ್ಲಿ ಮಂಗಳವಾರ ಹೊಸದಾಗಿ 6 ಪ್ರಕರಣಗಳು ಪತ್ತೆಯಾಗಿದ್ದರೆ, ಕರ್ನಾಟಕದಲ್ಲಿ ನಾಲ್ಕು ಸೋಂಕಿತ ಪ್ರಕರಣಗಳ ಬಗ್ಗೆ ವರದಿಯಾಗಿದೆ. ಈ ಪೈಕಿ 16 ಮಂದಿ ಇಟಲಿ ಪ್ರಜೆಗಳು ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+