ಮಹಾರಾಷ್ಟ್ರದಲ್ಲಿ ಕೊರೊನಾ ರುದ್ರತಾಂಡವ: ಒಂದೇ ದಿನ 12 ಕೇಸ್

ಮುಂಬೈ, ಮಾರ್ಚ್ 21: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಶನಿವಾರ ಮಧ್ಯಾಹ್ನದವೊತ್ತಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 300ರ ಗಡಿದಾಟಿದೆ.

ಮಹಾರಾಷ್ಟ್ರ ಒಂದರದಲ್ಲಿ ಒಂದೇ ದಿನಕ್ಕೆ 12 ಕೊರೊನಾ ಪ್ರಕರಣ ದಾಖಲಾಗಿದೆ. ಮಾರ್ಚ್ 20ರವರೆಗೂ 52 ಸೋಂಕಿತರ ಸಂಖ್ಯೆ ಇತ್ತು. ಇದೀಗ, ಶನಿವಾರ ಸಂಜೆಯೊತ್ತಿಗೆ ಸೋಂಕಿತ ಸಂಖ್ಯೆ 64ಕ್ಕೆ ಏರಿದೆ.

ಇಂದು ಮುಂಬೈ ನಗರದಲ್ಲಿ ಒಟ್ಟು 8 ಕೇಸ್ ದಾಖಲಾಗಿದೆ. ಪುಣೆಯಲ್ಲಿ ಎರಡು ಕೇಸ್ ದೃಢವಾಗಿದೆ. ಯವತ್ಮಲ್ ಮತ್ತು ಕಲ್ಯಾಣ್ ನಗರಗಳಲ್ಲಿ ತಲಾ ಒಂದೊಂದು ಕೇಸ್ ಖಚಿತವಾಗಿದೆ. ಈ ಮೂಲಕ ಮಾರ್ಚ್ 21ರಂದು ಒಟ್ಟು 12 ಸೋಂಕಿತರು ದಾಖಲಾಗಿದ್ದಾರೆ. ಇದರಲ್ಲಿ ಏಂಟು ಮಂದಿ ವಿದೇಶಿದಿಂದ ಬಂದವರು ನಾಲ್ಕು ಜನ ಅವರ ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿದೆ.

Coronavirus Positive Cases In Maharashtra Rise To 64

ಸದ್ಯ, ಭಾರತದಲ್ಲಿ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ ಮಹಾರಾಷ್ಟ್ರ ಎನಿಸಿಕೊಂಡಿದೆ. ಮಹಾರಾಷ್ಟ್ರ ಬಿಟ್ಟರೆ ಕೇರಳದಲ್ಲಿ (40) ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 19ಕ್ಕೆ ಏರಿದೆ.

ಇದುವರೆಗೂ ಭಾರತದಲ್ಲಿ ಒಟ್ಟು ಐದ ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿ ನಾಲ್ಕು ಭಾರತೀಯರಾಗಿದ್ದರೆ, ಒಬ್ಬರು ಇಟಲಿ ಮೂಲದ ವ್ಯಕ್ತಿ. ಕರ್ನಾಟಕ, ದೆಹಲಿ, ಪಂಜಾಬ್, ಮಹಾರಾಷ್ಟ್ರ ಹಾಗೂ ರಾಜಸ್ಥಾನದಲ್ಲಿ ತಲಾ ಒಬ್ಬೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಈಗಾಗಲೇ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದಾರೆ. ಮಾರ್ಚ್ 31ರವರೆಗೂ ರಾಜ್ಯದಲ್ಲಿ ಮಾಲ್, ಚಿತ್ರಮಂದಿರ, ಪಬ್, ಬಾರ್, ರೆಸ್ಟೋರೆಂಟ್, ಸಭೆ, ಸಮಾರಂಭ ಸೇರಿದಂತೆ ಹೆಚ್ಚು ಜನರು ಸೇರುವುದನ್ನು ನಿರ್ಬಂಧ ಹೇರಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+