ಮುಂಬೈನ ಧಾರಾವಿಯ ಕೊಳೆಗೇರಿ ಕೊರೊನಾ ಸೋಂಕಿತರ ಸಂಖ್ಯೆ 101ಕ್ಕೆ ಏರಿಕೆ
ಮುಂಬೈ, ಏಪ್ರಿಲ್ 18: ಮುಂಬೈನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಲೇ ಇದೆ. ಧಾರಾವಿಯ ಕೊಳಗೇರಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದೆ.
ಇದುವರೆಗೆ 10 ಮಂದಿ ಮೃತಪಟ್ಟಿದ್ದು, ಶುಕ್ರವಾರ 15 ಹೊಸ ಪ್ರಕರಗಳು ಪತ್ತೆಯಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 101ಕ್ಕೆ ಏರಿದೆ.
62 ವರ್ಷದ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೂರು ಪ್ರಕರಗಳು ಮಾತುಂಗ ಲೇಬರ್ ಕ್ಯಾಂಪ್, ಮುಸ್ಲಿಂ ನಾಗಾರಂದ್ ಇಂದಿರಾ ನಗರ, ಸೋಶಿಯಲ್ ನಗರದಲ್ಲಿ ಇಬ್ಬರು, ಡಾ. ಬಾಳಿಗಾ ನಗರ, ಲಕ್ಷ್ಮೀ ಛಾವ್ಲ, ಜನತಾ ಸೊಸೈಟಿ, ಸರ್ವೋದಯ ಸೊಸೈಟಿಯಲ್ಲಿ ತಲಾ ಒಬ್ಬೊಬ್ಬರು ಮೃತಪಟ್ಟಿದ್ದಾರೆ.
ಧಾರಾವಿಯಲ್ಲಿ 8 ಲಕ್ಷ ಮಂದಿ ಒಟ್ಟಿಗೆ ವಾಸಿಸುತ್ತಿದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಷ್ಟವಾಗಿದೆ.

ಯಾರೂ ಮನೆಯಿಂದ ಹೊರಬರಬೇಡಿ ನಿಮಗೆ ಬೇಕಾದ ಅಗತ್ಯವಸ್ತುಗಳನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ಮುಂಬೈನಲ್ಲಿ ಇದುವರೆಗೆ 2073 ಕೊರೊನಾ ಪ್ರಕರಣಗಳು ದಾಖಲಾಗಿವೆ.
ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಗುರುವಾರ 27 ಸಾವಿರ ಕೊವಿಡ್ 19 ಪರೀಕ್ಷೆಗಳನ್ನು ನಡೆಸಿದೆ.












Click it and Unblock the Notifications