ಲೈಂಗಿಕ ಕ್ರಿಯೆ ವೇಳೆ ಉಸಿರುಗಟ್ಟಿ ಗೆಳತಿ ಸಾವು, ವರ್ಷದ ನಂತರ ಪ್ರಕರಣ ದಾಖಲು

ಮುಂಬೈ, ಜುಲೈ 3: ಕಳೆದ ವರ್ಷ ಮುಂಬೈನ ಹೋಟೆಲ್ ವೊಂದರಲ್ಲಿ ನಡೆದಿದ್ದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಪ್ಪತ್ಮೂರು ವರ್ಷದ ಇಸ್ರೇಲ್ ಪ್ರಜೆಯ ಮೇಲೆ ಪ್ರಕರಣ ದಾಖಲಾಗಿದೆ. ಒರಿರಾನ್ ಯಾಕೊವ್ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಳೆದ ವರ್ಷ ಇಸ್ರೇಲ್ ನವರೇ ಆದ, ಇಪ್ಪತ್ತು ವರ್ಷದ ತನ್ನ ಗೆಳತಿ ಜತೆಗೆ ಒರಿರಾನ್ ಯಾಕೊವ್ ಪ್ರವಾಸಿ ವೀಸಾದ ಮೇಲೆ ಭಾರತಕ್ಕೆ ಬಂದಿದ್ದ. ಲೈಂಗಿಕ ಕ್ರಿಯೆ ನಡೆಸುವ ವೇಳೆ ಉಸಿರುಗಟ್ಟಿ ಆಕೆ ಸಾವನ್ನಪ್ಪಿದ್ದಳು. ಈ ಸಂಗತಿ ಇದೀಗ ಬಂದಿರುವ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಗೊತ್ತಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಕ್ಷಿಣ ಮುಂಬೈನ ಕೊಲಾಬಾದ ಹೋಟೆಲ್ ವೊಂದರಲ್ಲಿ ಇವರಿಬ್ಬರು ಉಳಿದುಕೊಂಡಿದ್ದಾಗ ಈ ಘಟನೆ ನಡೆದಿತ್ತು. ಹೋಟೆಲ್ ನಲ್ಲಿ ಲೈಂಗಿಕ ಕ್ರಿಯೆ ನಡೆಸುವಾಗ ಯಾಕೊವ್ ತನ್ನ ಗೆಳತಿಯ ಕುತ್ತಿಗೆ ಮೇಲೆ ಒತ್ತಡ ಹಾಕಿದ್ದರಿಂದ ಆಕೆ ಉಸಿರುಗಟ್ಟಿ ಮೃತಪಟ್ಟಿದ್ದಳು ಎಂಬುದು ಪೊಲೀಸರ ಆರೋಪವಾಗಿತ್ತು.

Case registered against Israel national after 1 year of incident

ಈ ಘಟನೆ ನಡೆದಾಗ ಪೊಲೀಸರು ಹೋಟೆಲ್ ಗೆ ತೆರಳಿದ್ದರು. ಆಗ ಯಾಕೊವ್, ನನ್ನ ಗೆಳತಿ ಚಲನೆಯೇ ಇಲ್ಲದೆ ಕೋಣೆಯಲ್ಲಿ ಕೆಳಗೆ ಬಿದ್ದಿದ್ದಾಳೆ ಎಂದು ತಿಳಿಸಿದ್ದ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಗಿತ್ತು. ಸಾವಿಗೆ ನಿಖರ ಕಾರಣ ಗೊತ್ತಿರಲಿಲ್ಲವಾದ್ದರಿಂದ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಲಾಗಿತ್ತು.

ಆ ಯುವತಿಯ ಕುಟುಂಬದವರು ಆಕೆ ಮೃತ ದೇಹವನ್ನು ಇಸ್ರೇಲ್ ಗೆ ತೆಗೆದುಕೊಂಡು ಹೋಗಿದ್ದರು. ಈಚೆಗಷ್ಟೇ ಆ ಸಾವಿನ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದಿತ್ತು. ಆ ಯುವತಿ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಎಂದು ಅದರಲ್ಲಿತ್ತು. ಆ ವರದಿ ಆಧಾರದಲ್ಲಿ ಪೊಲೀಸರು ಯಾಕೊವ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯಕ್ಕೆ ಯಾಕೊವ್ ಇಸ್ರೇಲ್ ನಲ್ಲಿದ್ದಾನೆ. ಪ್ರಕರಣದ ತನಿಖೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+