ಕ್ಯಾಂಪಾ ಕೋಲಾ ನಿವಾಸಿಗಳಿಗೆ ತಾತ್ಕಾಲಿಕ ರಿಲೀಫ್

ಮುಂಬೈ, ನ.13: ಕಳೆದ 48 ಗಂಟೆಗಳಿಂದ ಆತಂಕದ ಕ್ಷಣಗಳನ್ನು ಎದುರಿಸಿದ್ದ ಇಲ್ಲಿನ ಕ್ಯಾಂಪಾ ಕೋಲಾ ಅಪಾರ್ಟ್ಮೆಂಟ್ ನಿವಾಸಿಗಳಿಗೆ ತಾತ್ಕಾಲಿಕ ನೆಮ್ಮದಿ ಸಿಕ್ಕಿದೆ. 102ಕ್ಕೂ ಅಧಿಕ ಕುಟುಂಬಗಳು ತಮ್ಮ ಮನೆಗಳು ಕಣ್ಣೆದುರೇ ನೆಲಸಮವಾಗುವ ಭೀತಿಯಲ್ಲಿದ್ದರು. ಈಗ ಮುಂದಿನ ಮೇ 31, 2014 ರ ತನಕ ಕಟ್ಟಡ ನೆಲಸಮ ಕಾರ್ಯಕ್ಕೆ ಬ್ರೇಕ್ ಬೀಳಲಿದೆ.

ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಇಲ್ಲಿನ ಕ್ಯಾಂಪಾ ಕೋಲಾ ಅಪಾರ್ಟ್ ಮೆಂಟ್ ನ ಅಕ್ರಮ ಮಹಡಿಗಳ 102 ಕುಟುಂಬಗಳು ಮನೆ ಖಾಲಿ ಮಾಡಿ ಬೀದಿಗೆ ಬೀಳುವ ಭೀತಿಯಲ್ಲಿದ್ದವು. ಅಕ್ರಮವಾಗಿ ನಿರ್ಮಿಸಲಾಗಿರುವ ಮತ್ತು ವಾಸಯೋಗ್ಯ ಪತ್ರ ಇಲ್ಲದ 102 ಫ್ಲಾಟ್ ಗಳ ವಾಸ್ತವ್ಯ ತೆರವುಗೊಳಿಸಲು ಸುಪ್ರೀಂ ಕೋರ್ಟ್ ನ.11ರ ಅಂತಿಮ ಗಡುವು ನೀಡಿತ್ತು.

ಸುಪ್ರೀಂ ಕೋರ್ಟ್ ಆದೇಶದ ಪ್ರತಿ ಹಿಡಿದುಕೊಂದು ಗಡುವು ಮುಗಿಯುತ್ತಿದ್ದಂತೆಯೇ ಅಕ್ರಮ ಮಹಡಿಗಳನ್ನು ಧ್ವಂಸಗೊಳಿಸಲು ಮುಂಬೈ ಮಹಾನಗರಪಾಲಿಕೆ ಸಿಬ್ಬಂದಿ ಆಗಮಿಸಿದ್ದರು. ಇದಕ್ಕೂ ಮುನ್ನ ಕಟ್ಟಡಗಳ ವಿದ್ಯುತ್, ನೀರು ಮತ್ತು ಅನಿಲ ಸಂಪರ್ಕಗಳನ್ನು ಸ್ಥಗಿತಗೊಳಿಸಲಾಗಿತ್ತು.

ಆದರೆ, ಅಪಾರ್ಟ್ ಮೆಂಟ್ ನಿಂದ ಹೊರಕ್ಕೆ ಹೋಗಲು ಒಪ್ಪದ ನಿವಾಸಿಗಳು ಮುಷ್ಕರ ನಡೆಸಿದ್ದರು. ಪಾಲಿಕೆ ಸಿಬ್ಬಂದಿಗೆ ತೀವ್ರ ಪ್ರತಿರೋಧ ಒಡ್ಡಿದ್ದರು. ಅಪಾರ್ಟ್ ಮೆಂಟ್ ರಕ್ಷಿಸಲು ಸುಗ್ರೀವಾಜ್ಞೆ ಹೊರಡಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಿವಾಸಿಗಳು ಒತ್ತಾಯಿಸಿದ್ದರು. ಆದರೆ ಈ ಒತ್ತಾಯಕ್ಕೆ ಮಣಿಯಲು ಮುಖ್ಯಮಂತ್ರಿ ಪೃಥ್ವಿರಾಜ ಚವಾಣ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಆಪಾರ್ಟ್ಮೆಂಟ್ ನಿವಾಸಿಗಳ ಬೆಂಬಲಕ್ಕೆ ಬಿಜೆಪಿ ಹಾಗೂ ಆರೆಸ್ಸೆಸ್ ನಿಂತಿದ್ದರಿಂದ ವಿಷಯ ರಾಜಕೀಯ ಬಣ್ಣ ಪಡೆದಿತ್ತು. ಈಗ ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಸುಪ್ರೀಂಕೋರ್ಟಿನಿಂದ ಶುಭ ಸುದ್ದಿ ಸಿಕ್ಕಿದ ಬೆನ್ನಲ್ಲೇ ಆಪಾರ್ಟ್ಮೆಂಟ್ ನಿವಾಸಿಗಳು ಸಂತೋಷದಿಂದ ಕುಣಿದಾಡಿದ್ದಾರೆ. ಅದರೆ, ಇದು ತಾತ್ಕಾಲಿಕ ನೆಮ್ಮದಿ ಮಾತ್ರ ಇನ್ನೂ ಯುದ್ಧ ಜಾರಿಯಲ್ಲಿದೆ. ಏಕಾಏಕಿ ಮನೆ ಖಾಲಿ ಮಾಡಲು ಸಾಧ್ಯವಿಲ್ಲ. ನಮಗೆ ಸೂಕ್ತ ನೆಲೆ ಸಿಗಬೇಕಿದೆ ಎಂದು ಫ್ಲಾಟ್ ನಿವಾಸಿಗಳು ಪ್ರತಿಕ್ರಿಯಿಸಿದ್ದಾರೆ.

ಕ್ಯಾಂಪಾ ಕೋಲಾ

ಕ್ಯಾಂಪಾ ಕೋಲಾ

ಕ್ಯಾಂಪಾ ಕೋಲಾ ನಿವಾಸಿಗಳಿಗೆ ತಾತ್ಕಾಲಿಕ ರಿಲೀಫ್

ಕ್ಯಾಂಪಾ ಕೋಲಾ

ಕ್ಯಾಂಪಾ ಕೋಲಾ

ಕ್ಯಾಂಪಾ ಕೋಲಾ ನಿವಾಸಿಗಳಿಗೆ ತಾತ್ಕಾಲಿಕ ರಿಲೀಫ್

ಕ್ಯಾಂಪಾ ಕೋಲಾ

ಕ್ಯಾಂಪಾ ಕೋಲಾ

ಕ್ಯಾಂಪಾ ಕೋಲಾ ನಿವಾಸಿಗಳಿಗೆ ತಾತ್ಕಾಲಿಕ ರಿಲೀಫ್

ಕ್ಯಾಂಪಾ ಕೋಲಾ

ಕ್ಯಾಂಪಾ ಕೋಲಾ

ಕ್ಯಾಂಪಾ ಕೋಲಾ ನಿವಾಸಿಗಳಿಗೆ ತಾತ್ಕಾಲಿಕ ರಿಲೀಫ್

ಕ್ಯಾಂಪಾ ಕೋಲಾ

ಕ್ಯಾಂಪಾ ಕೋಲಾ

ಕ್ಯಾಂಪಾ ಕೋಲಾ ನಿವಾಸಿಗಳಿಗೆ ತಾತ್ಕಾಲಿಕ ರಿಲೀಫ್

ಕ್ಯಾಂಪಾ ಕೋಲಾ

ಕ್ಯಾಂಪಾ ಕೋಲಾ

ಕ್ಯಾಂಪಾ ಕೋಲಾ ನಿವಾಸಿಗಳಿಗೆ ತಾತ್ಕಾಲಿಕ ರಿಲೀಫ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+