ಕಂಪ್ಯೂಟರ್ ಮಯ ಮುಂಬೈ ಏಷಿಯಟಿಕ್ ಸೊಸೈಟಿ ಗ್ರಂಥಾಲಯ

ಮುಂಬೈ, ಆಗಸ್ಟ್, 10 : ನಗರದ ಬಹು ಪ್ರಾಚೀನ ಏಷಿಯಟಿಕ್ ಸೊಸೈಟಿ ಗ್ರಂಥಾಲಯವನ್ನು ಕಂಪ್ಯೂಟರೀಕರಣಗೊಳಿಸುವ ನಿರ್ಧಾರಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದೆ.

ಗ್ರಂಥಾಲಯವು ಸುಮಾರು 211 ವರ್ಷಗಳ ಇತಿಹಾಸ ಹೊಂದಿದ್ದು, ಇದರಲ್ಲಿರುವ 1ಲಕ್ಷ ಪುಸ್ತಕಗಳು ಹಾಗೂ 2,500 ಹಸ್ತಪ್ರತಿಗಳನ್ನು ಕಂಪ್ಯೂಟರೀಕರಣಗೊಳಿಸಿ ಸಿಡಿ ಮತ್ತು ಮೈಕ್ರೋ ಫಿಲ್ಮ್ಸ್ ನಲ್ಲಿ ಸಂಗ್ರಹಿಸಲು ನಿರ್ಧರಿಸಿದೆ.[ಎಲ್ಲಾ ವಕೀಲರ ಸಂಘಗಳಿಗೂ ಇ- ಗ್ರಂಥಾಲಯ]

Books,manuscripts set to be digitised in Mumbai Asiatic library

ಗ್ರಂಥಾಲಯದಲ್ಲಿ ಸುಮಾರು 2,55, 463 ಪುಸ್ತಕ, ಸಂಪುಟಗಳು ಇದ್ದು, ಇವುಗಳನ್ನು ಅವುಗಳ ಮೌಲ್ಯ ಹಾಗೂ ಮುದ್ರಣದ ಆಧಾರದ ಮೆಲೆ ಅಚ್ಚುಕಟ್ಟಾಗಿ ಜೋಡಿಸಲಾಗಿದೆ. ಕಂಪ್ಯೂಟರೀಕರಣ ಯೋಜನೆಗಾಗಿ ಸರ್ಕಾರ ಈಗಾಗಲೇ 5 ಕೋಟಿ ಬಿಡುಗಡೆ ಮಾಡಿದ್ದು ಇದನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಲಿದ್ದೇವೆ ಎಂದು ಗ್ತಂಥಾಲಯದ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಡಿಜಿಟಲೀಕರಣ ಪ್ರಕ್ರಿಯೆಯಲ್ಲಿ ಸುಮಾರು 14 ಲಕ್ಷ ಪುಟಗಳು ಸ್ಕ್ಯಾನಿಂಗ್ ಮಾಡಲಿದ್ದು, ಜಗತ್ತಿನ ಹಲವಾರು ಭಾಷೆಗಳ ಪ್ರಾಚೀನ ಪುಸ್ತಕಗಳು ನಾಶವಾಗದಂತೆ ರಕ್ಷಿಸುವುದರೊಂದಿಗೆ ಮುಂದಿನ ಪೀಳಿಗೆಗೂ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಈ ಪ್ರಯತ್ನಕ್ಕೆ ಮುಂದಾಗಿದ್ದೇವೆ ಎಂದು ಏಷಿಯಟಿಕ್ ಸಂಘದ ಮುಖ್ಯಸ್ಥರಾದ ಎಸ್.ಜಿ. ಕಾಳೆ ಹೇಳಿದ್ದಾರೆ.

ಏಷಿಯಟಿಕ್ ಸೊಸೈಟಿ ಗ್ರಂಥಾಲಯ:
ಬಾಂಬೆಯಲ್ಲಿನ ಏಷಿಯಟಿಕ್ ಸೊಸೈಟಿ ಗ್ರಂಥಾಲಯ ನಿರ್ಮಿಸಿದವರು ಇಂಗ್ಲೆಂಡಿನ ಸರ್ ಜೇಮ್ಸ್ ಮ್ಯಾಕಿಂತೋಶ್. ಇದು ಆರಂಭಗೊಂಡಿದ್ದು ನವೆಂಬರ್ 26, 1804 ರಲ್ಲಿ. ಉತ್ತಮ ಜ್ಞಾನವನ್ನು ನೀಡುವುದರೊಂದಿಗೆ ಭಾರತದೊಂದಿಗೆ ಸಂಪರ್ಕ ಸಾಧಿಸುವುದು ಇವರ ಪ್ರಮುಖ ಉದ್ದೇಶವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+