'ಕಳಪೆ ವೆಂಟಿಲೇಟರ್‌' ಪೂರೈಸಿದ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಮುಂಬೈ, ಮೇ 25: ಪಿಎಂ ಕೇರ್ಸ್ ಫಂಡ್ ಮೂಲಕ ಮರಾಠವಾಡ ಪ್ರದೇಶಕ್ಕೆ ಒದಗಿಸಲಾದ 150 ವೆಂಟಿಲೇಟರ್‌ಗಳಲ್ಲಿ ಕನಿಷ್ಠ 113 ದೋಷಯುಕ್ತವಾದ ಪ್ರಕರಣವನ್ನು ಬಾಂಬೆ ಹೈಕೋರ್ಟ್‌ ಗಂಭೀರವಾಗಿ ಪರಿಗಣಿಸಿದ್ದು ಈ ಬಗ್ಗೆ ಪರಿಹಾರ ಕ್ರಮ ಏನು ಎಂದು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ. ಹಾಗೆಯೇ ಕೇಂದ್ರ ಸರ್ಕಾರ ಕೆಳಮಟ್ಟದ ವೆಂಟಿಲೇಟರ್‌ ಪೂರೈಸಿದ್ದಾರೆಂದು ಅರಿತುಕೊಳ್ಳಲಿ ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ರವೀಂದ್ರ ಗೂಗೆ ಸೇರಿದಂತೆ ಇಬ್ಬರನ್ನು ಒಳಗೊಂಡ ವಿಭಾಗೀಯ ಪೀಠವು ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ಕೋವಿಡ್ -19 ನಿರ್ವಹಣೆ ಕುರಿತು ತನ್ನ ಸುಮೋ ಮೋಟು ಕ್ರಿಮಿನಲ್ ಪಿಐಎಲ್ ಅನ್ನು ವಿಚಾರಣೆ ನಡೆಸಿದೆ.

ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಜಿಎಂಸಿಎಚ್) ಪಿಎಂ ಕೇರ್ಸ್‌ನಿಂದ ಬಂದ ವೆಂಟಿಲೇಟರ್‌ಗಳಲ್ಲಿ ಸಮಸ್ಯೆಯಿದೆ ಎಂಬ ಈ ಪ್ರಕರಣದ ವಿಚಾರಣೆ ಕೈಗೆತ್ತಿಗೊಂಡ ಬಾಂಬೆ ಹೈಕೋರ್ಟ್, ವೆಂಟಿಲೇಟರ್‌ಗಳನ್ನು ಹಿಂತಿರುಗಿಸಬಹುದೇ ಎಂದು ಸರ್ಕಾರ ಪರ ವಕೀಲರನ್ನು ಕೇಳಿದೆ.

Bombay High court slams Central Government over defective ventilators

ಇನ್ನು 113 ವೆಂಟಿಲೇಟರ್‌ಗಳು ದೋಷಯುಕ್ತವಾಗಿದ್ದು ಇದರಿಂದಾಗಿ ರೋಗಿಗಳಿಗೆ ಸಮಸ್ಯೆ ಉಂಟಾದ ಬಳಿಕ ತಿಳಿದು ಬಂದ ನಂತರ ಆಸ್ಪತ್ರೆಯು ಉಳಿದ 37 ವೆಂಟಿಲೇಟರ್‌ಗಳನ್ನು ಉಪಯೋಗಿಸಿಲ್ಲ ಎಂದು ವರದಿಯಾಗಿದೆ.

"ಇದು ತುಂಬಾ ಗಂಭೀರವಾದ ವಿಷಯವಾಗಿದೆ, ನೀವು ಅದನ್ನು ಏಕೆ ವಾಪಸ್ ಕಳುಹಿಸಬಾರದು? ಕೇಂದ್ರ ಸಚಿವಾಲಯವು ಅದನ್ನು ನಿಮಗೆ ನೀಡಿದ್ದನ್ನು ನಾವು ಪ್ರಶಂಸಿಸುತ್ತೇವೆ, ಆದರೆ ಇದು ರೋಗಿಗೆ ಆರೋಗ್ಯಕ್ಕೆ ಅಪಾಯಕಾರಿಯಾಗಿದ್ದರೆ, ನೀವು ಅದನ್ನು ಬಳಸಲಾಗುವುದಿಲ್ಲ. ಈ ವೆಂಟಿಲೇಟರ್‌ಗಳನ್ನು ನೀವು ಸರ್ಕಾರಕ್ಕೆ ಬರೆದು ವಾಪಸ್ ಕಳುಹಿಸುವುದು ಉತ್ತಮ" ಎಂದು ಬಾಂಬೆ ಹೈಕೋರ್ಟ್ ತಿಳಿಸಿದೆ.

"ಸರ್ಕಾರವು ಇದರಿಂದಾಗಿ ತಾವು ಕೆಳಗುಣಮಟ್ಟದ ವೆಂಟಿಲೇಟರ್‌ಗಳನ್ನು ಪೂರೈಸಿದ್ದಾರೆಂದು ಅರಿಯಲಿ. ಇದರ ಬದಲಾಗಿ ಉತ್ತಮ ಗುಣಮಟ್ಟದ ವೆಂಟಿಲೇಟರ್‌ಗಳನ್ನು ಕೇಂದ್ರ ಸರ್ಕಾರ ನೀಡಬೇಕು. ಪಿಎಂ ಕೇರ್‌ ನಿಧಿಯನ್ನು ವೆಂಟಿಲೇಟರ್‌ಗಳನ್ನು ಒದಗಿಸಲು ಬಳಸಬೇಕಾದರೆ, ಅದು ವೈದ್ಯಕೀಯ ಬಳಕೆಗೆ ಅರ್ಹವಾದ ವೆಂಟಿಲೇಟರ್‌ಗಳಾಗಿರಬೇಕು. ಒಂದು ವೇಳೆ ಪಿಎಂ ಕೇರ್‌ ನಿಧಿಯಿಂದ ನೀಡಲಾದ ಆ ವೆಂಟಿಲೇಟರ್‌ ವೈದ್ಯಕೀಯ ಬಳಕೆಗೆ ಅರ್ಹವಲದಿದ್ದರೆ, ಅದು ಕೇವಲ ಒಂದು ಪೆಟ್ಟಿಗೆಯಂತೆ" ಎಂದು ಟೀಕಿಸಿದೆ.

Bombay High court slams Central Government over defective ventilators

ಈ ವೆಂಟಿಲೇಟರ್‌ಗಳನ್ನು ತಯಾರಿಸಿದ ಜ್ಯೋತಿ ಸಿಎನ್‌ಸಿ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳುವ ನಿರ್ಧಾರದ ಬಗ್ಗೆ ತಿಳಿಸುವಂತೆ ನ್ಯಾಯಾಲಯವು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಿಳಿಸಿದೆ. "ಕಂಪನಿ ಈ ಪ್ರಕರಣದಿಂದ ಪಾರಾಗಬಾರದು ಎಂದು ಕೂಡಾ ಹೈಕೋರ್ಟ್ ಹೇಳಿದೆ.

ಹಾಗೆಯೇ ಈ ಪ್ರಕರಣದ ಮುಂದುವರಿದ ವಿಚಾರಣೆಯನ್ನು ಮೇ 28 ರಂದು ನಡೆಸುವುದಾಗಿ ಹೇಳಿದ ಕೋರ್ಟ್, ಅಷ್ಟರಲ್ಲಿ ಈ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ ಸಿದ್ಧವಾಗಲಿದೆ, ಪರಿಹಾರ ಕ್ರಮ ಕೈಗೊಳ್ಳಿದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+