ಹಿಂದಿ ಚಿತ್ರರಂಗದ ಪ್ರತಿಭಾವಂತ ನಟ ಇರ್ಫಾನ್ ಖಾನ್ ಇನ್ನಿಲ್ಲ
ಮುಂಬೈ, ಏಪ್ರಿಲ್ 29: ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಪ್ರತಿಭಾವಂತ ನಟ ಇರ್ಫಾನ್ ಖಾನ್ ಇನ್ನಿಲ್ಲ ಎಂಬ ಸುದ್ದಿ ಹೊರಬಿದ್ದಿದೆ. ಕೆಲವು ದಿನಗಳ ಹಿಂದೆಯಷ್ಟೆ 54 ವರ್ಷದ ಇರ್ಫಾನ್ ಖಾನ್ ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಾಗಿದ್ದರು.
ಕೊಲೊನ್ ಸೋಂಕಿನಿಂದ (colon infection) ಬಳಲುತ್ತಿದ್ದ ಇರ್ಫಾನ್ ಖಾನ್ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಬುಧವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಅಂದ್ಹಾಗೆ, 2018ರಿಂದ ನಟ ಇರ್ಫಾನ್ ಖಾನ್ ನ್ಯೂರೋಎಂಡೋಕ್ರೈನ್ ಗೆಡ್ಡೆಯಿಂದ ಬಳಲುತ್ತಿದ್ದರು. ಬಳಿಕ ವಿದೇಶಕ್ಕೆ ಹೆಚ್ಚಿನ ಚಿಕಿತ್ಸೆ ಪಡೆಯಲು ಹೋಗಿದ್ದ ಇರ್ಫಾನ್ ಖಾನ್, ಅಲ್ಲಿಂದ ಚಿಕಿತ್ಸೆ ಮುಗಿಸಿ ವಾಪಸ್ ಬಂದಿದ್ದರು.
ಕೆಲವು ದಿನಗಳ ಹಿಂದೆಯಷ್ಟೇ ಇರ್ಫಾನ್ ಖಾನ್ ಅವರ ತಾಯಿ ಮೃತಪಟ್ಟಿದ್ದರು. ತಾಯಿಯ ಅಂತ್ಯ ಸಂಸ್ಕಾರದಲ್ಲೂ ಇರ್ಫಾನ್ ಖಾನ್ ಭಾಗವಹಿಸಿರಲಿಲ್ಲ. ಅಮ್ಮನನ್ನು ಕಳೆದುಕೊಂಡ ನೋವಿನಲ್ಲಿದ್ದ ಇರ್ಫಾನ್ ಖಾನ್ ಕೂಡ ಈಗ ತಾಯಿಯನ್ನು ಹಿಂಬಾಲಿಸಿದ್ದಾರೆ.
ಬಾಲಿವುಡ್ ನಟ ಇರ್ಫಾನ್ ಖಾನ್‌ಗೆ ತೀವ್ರ ಅನಾರೋಗ್ಯ: ಆಸ್ಪತ್ರೆಗೆ ದಾಖಲು
ಇರ್ಫಾನ್ ಖಾನ್ ಅವರ ಕೊನೆಯ ಸಿನಿಮಾ ಆಂಗ್ರೆಜಿ ಮೀಡಿಯಂ. ಲಾಕ್‌ಡೌನ್ ಘೋಷಣೆಯಾಗುವುದಕ್ಕು ಮುಂಚೆ ಈ ಸಿನಿಮಾ ತೆರೆಕಂಡಿತ್ತು.












Click it and Unblock the Notifications