ವೈರಲ್ ವಿಡಿಯೋ: ನೀರೆಂದು ಸ್ಯಾನಿಟೈಸರ್ ಕುಡಿದ ಬಿಎಂಸಿ ಅಧಿಕಾರಿ

ಮುಂಬೈ,ಫೆಬ್ರವರಿ 03: ನೀರೆಂದು ಬಿಎಂಸಿ ಅಧಿಕಾರಿಯೊಬ್ಬರು ಸ್ಯಾನಿಟೈಸರ್ ಕುಡಿದಿರುವ ಘಟನೆ ನಡೆದಿದೆ.

ಮಹಾರಾಷ್ಟ್ರದಲ್ಲಿ ಮಕ್ಕಳಿಗೆ ಪೋಲಿಯೋ ಹನಿ ಎಂದು ಸ್ಯಾನಿಟೈಸರ್ ಹಾಕಿದ್ದ ಘಟನೆ ಮಾಡುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ.

ಬೃಹನ್ ಮುಂಬೈ ಮುನಿಸಿಪಲ್ ಕಾರ್ಪೋರೇಷನ್ ಅಧಿಕಾರಿಯೊಬ್ಬರು ಆತುರದಲ್ಲಿ ನೀರಿನ ಬದಲಿಗೆ ಸ್ಯಾನಿಟೈಸರ್ ಕುಡಿದಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್‌ನ (ಬಿಎಂಸಿ) ಸಹಾಯಕ ಮುನ್ಸಿಪಲ್ ಕಮಿಷನರ್ ರಮೇಶ್ ಪವಾರ್ ಅವರು ಜನರಲ್ ಬಾಡಿ ಮೀಟಿಂಗ್ ಹಾಲ್‌ನಲ್ಲಿ ತಮ್ಮ ಮೇಜಿನ ಮೇಲೆ ಇಟ್ಟುಕೊಂಡಿದ್ದ ಬಾಟಲಿಯಿಂದ ಸ್ಯಾನಿಟೈಸರ್ ಕುಡಿದಿದ್ದರು.

ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಹಳ್ಳಿಯೊಂದರಲ್ಲಿ 12 ಮಕ್ಕಳಿಗೆ ಪೋಲಿಯೊ ಹನಿಗಳ ಬದಲಿಗೆ ಹ್ಯಾಂಡ್ ಸ್ಯಾನಿಟೈಸರ್ ಹನಿಗಳನ್ನು ನೀಡಿದ ಮೂರು ದಿನಗಳ ನಂತರ ಈ ಘಟನೆ ನಡೆದಿದೆ.

BMC Official Drinks Sanitiser Instead Of Water By Mistake

ಶಿಕ್ಷಣ ಬಜೆಟ್ ಮಂಡಿಸುವಾಗ ಬೃಹನ್ಮುಂಬೈ ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ನೀರಿನ ಬದಲು ಸ್ಯಾನಿಟೈಸರ್ ಅನ್ನು ತಪ್ಪಾಗಿ ಸೇವಿಸಿದ್ದಾರೆ. ಕೂಡಲೇ ತಮ್ಮ ತಪ್ಪಿನ ಅರಿವಾಗಿ ಅಧಿಕಾರಿ ಸ್ಯಾನಿಟೈಸರ್ ಅನ್ನು ಉಗುಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+