ಕಪ್ಪುಹಣ ಕೇಸ್: ನಟ ನವಾಜುದ್ದೀನ್ ಗೆ ಸಮನ್ಸ್
ಮುಂಬೈ, ಅಕ್ಟೋಬರ್ 05: ಬಾಲಿವುಡ್ ನಲ್ಲಿ ಕಪ್ಪು ಹಣ ಬಳಕೆ ಕುರಿತಂತೆ ತನಿಖೆ ನಡೆಸಿರುವ ಜಾರಿ ನಿರ್ದೇಶನಾಲಾಯವು ಬುಧವಾರದಂದು ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿಗೆ ಸಮನ್ಸ್ ಜಾರಿ ಮಾಡಿದೆ.
ಸುಮಾರು 1.15 ಕೋಟಿ ರು ಆದಾಯಕ್ಕೆ ಸರಿಯಾದ ದಾಖಲೆಗಳನ್ನು ಸಿದ್ದಿಕಿ ತೋರಿಸಿಲ್ಲ ಎಂದು ಆರೋಪಿಸಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.

ವೆಬ್ ವರ್ಕರ್ಸ್ ಲಿಮಿಟೆಡ್ ಹೆಸರಿನ ಸಾಮಾಜಿಕ ಜಾಲ ತಾಣದಿಂದ ವೆಬ್‌ಸೈಟ್‌ಗಳಿಗೆ ಪ್ರಚಾರ ನೀಡಲು ನವಾಜುದ್ದೀನ್ ಸಿದ್ಧಿಕಿ ಅವರು 1.15 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಆದರೆ, ಈ ಆದಾಯವನ್ನು ಅವರು ಘೋಷಿಸಿಲ್ಲ ಎಂಬ ಆರೋಪಿಸಲಾಗಿದೆ.
ಈ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ನವಾಜುದ್ದೀನ್ ಸಿದ್ಧಿಕಿ ಅವರು ಅಕ್ಟೋಬರ್ 4ರಂದು ವಿಚಾರಣೆಗೆ ಹಾಜರಾಗಬೇಕಾಗಿತ್ತು. ಆದರೆ, ಹಾಜರಾಗದ ಕಾರಣ, ಮತ್ತೊಮ್ಮೆ ಹೊಸದಾಗಿ ಸಮನ್ಸ್ ಜಾರಿ ಮಾಡಲಾಗಿದೆ.
ಆದರೆ, ನವಾಜುದ್ದೀನ್ ಸಿದ್ಧಿಕಿ ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ನವಾಜುದ್ದೀನ್ ಸಿದ್ಧಿಕಿಗೆ ಸಮನ್ಸ್ ಜಾರಿ ಮಾಡಿದ್ದಾರೆ.












Click it and Unblock the Notifications