ಆಕ್ಷೇಪಾರ್ಹ ವಿಡಿಯೋ: 'ಬಿಗ್‌ಬಾಸ್' ಖ್ಯಾತಿಯ ನಟ ಬಂಧನ

ಮುಂಬೈ, ಜುಲೈ 18: ಧರ್ಮದ ಹಿನ್ನೆಲೆಯಲ್ಲಿ ವಿಭಿನ್ನ ಸಮುದಾಯಗಳ ನಡುವೆ ವೈರತ್ವಕ್ಕೆ ಪ್ರಚೋದನೆ ನೀಡಿದ ಮತ್ತು ಸಾರ್ವಜನಿಕರ ನಡುವೆ ದೊಡ್ಡ ಮಟ್ಟದಲ್ಲಿ ದ್ವೇಷ ಸೃಷ್ಟಿಸುವ 'ಆಕ್ಷೇಪಾರ್ಹ' ವಿಡಿಯೋಗಳನ್ನು ತಯಾರಿಸಿ ಮತ್ತು ಅಪ್‌ಲೋಡ್ ಮಾಡಿದ ಆರೋಪದಲ್ಲಿ ಮುಂಬೈನ ಸೈಬರ್ ಅಪರಾಧ ಪೊಲೀಸರು ನಟ ಅಜಾಜ್ ಖಾನ್ ಅವರನ್ನು ಬಂಧಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕೆಲವು ವಿಡಿಯೋಗಳೊಂದಿಗೆ 'ಬಿಗ್ ಬಾಸ್' ರಿಯಾಲಿಟಿ ಷೋದ ಸ್ಪರ್ಧಿಯಾಗಿದ್ದ ಅಜಾಜ್ ಖಾನ್ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿತ್ತು.

ಭಾರತೀಯ ನೀತಿ ಸಂಹಿತೆ ಸೆಕ್ಷನ್ 153 ಎ (ಧರ್ಮ, ಜನಾಂಗ ಇತರೆ ಆಧಾರದಲ್ಲಿ ವಿಭಿನ್ನ ಗುಂಪುಗಳ ನಡುವೆ ವೈರತ್ವ ಬಿತ್ತುವುದು), ಸೆಕ್ಷನ್ 34 (ಸಾಮಾನ್ಯ ಉದ್ದೇಶದೊಂದಿಗೆ ಹಲವು ವ್ಯಕ್ತಿಗಳು ಕೃತ್ಯ ನಡೆಸುವುದು) ಮತ್ತು ಐಟಿ ಕಾಯ್ದೆಯ ಸೆಕ್ಷನ್ 67ರ ಅಡಿ (ವಿದ್ಯುನ್ಮಾನ ಮಾದರಿಯಲ್ಲಿ ಆಕ್ಷೇಪಾರ್ಹ ಸಂಗತಿಗಳನ್ನು ಪ್ರಕಟಿಸುವುದು ಅಥವಾ ಹಂಚಿಕೊಳ್ಳುವುದು) ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

BiggBoss fame Bollywood actor Ajaz Khan arrested pbjectional video

ಅಜಾಜ್ ಖಾನ್ ಈ ರೀತಿ ಸುದ್ದಿಯಾಗುತ್ತಿರುವುದು ಇದು ಮೊದಲ ಸಲವೇನಲ್ಲ. ಕಳೆದ ವರ್ಷ ನಿಷೇಧಿತ ಮಾದಕ ವಸ್ತು ಸೇವನೆ ಮಾಡಿದ ಆರೋಪದಲ್ಲಿ ಅವರನ್ನು ಬಂಧಿಸಲಾಗಿತ್ತು. 39 ವರ್ಷದ ಅಜಾಜ್ ಖಾನ್, 'ಸಿಂಗಂ ರಿಟರ್ನ್ಸ್', 'ರಕ್ತ ಚರಿತ್ರ', 'ಬುಡ್ಡ ಹೋಗಯಾ ತೇರಾ ಬಾಪ್' ಸೇರಿದಂತೆ ವಿವಿಧ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಮುಂಬೈನ ಸೈಬರ್ ಅಪರಾಧ ಪೊಲೀಸ್ ಠಾಣೆ ಮುಂದಿನ ತನಿಖೆ ನಡೆಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+