ಪತ್ನಿ ಜತೆ ಕಲಹ:ಭಾಭಾ ಪರಮಾಣು ಸಂಶೋಧನಾ ಕೇಂದ್ರದ ವಿಜ್ಞಾನಿ ಆತ್ಮಹತ್ಯೆ

ಮುಂಬೈ,ಜನವರಿ 30: ಭಾಭಾ ಪರಮಾಣು ಸಂಶೋಧನಾ ಕೇಂದ್ರದ 37 ವರ್ಷದ ವಿಜ್ಞಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಕ್ಕಳಿಗೆ ಊಟ ನೀಡುವ ವಿಚಾರದಲ್ಲಿ ಪತ್ನಿಯೊಂದಿಗೆ ಕಲಹ ಏರ್ಪಟ್ಟ ಬಳಿಕ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುರುವಾರ ಬೆಳಿಗ್ಗೆ ತ್ರಿಪಾಠಿ ಮಕ್ಕಳಿಗೆ ಊಟ ನೀಡುವ ಬಗ್ಗೆ ಅನುಶಕ್ತಿನಗರದಲ್ಲಿನ ತಮ್ಮ ನಿವಾಸದಲ್ಲಿ ಪತ್ನಿಯೊಂದಿಗೆ ವಾಗ್ವಾದ ನಡೆಸಿದ್ದರು. ಆ ನಂತರ ಅವರು ಮಲಗುವ ಕೋಣೆಗೆ ಹೋಗಿ ಟವೆಲ್ ಬಳಸಿ ಸೀಲಿಂಗ್ ಫ್ಯಾನ್ ಗೆ ನೇಣು ಹಾಕಿಕೊಂಡರು" ಎಂದು ಟ್ರೊಂಬೆ ಪೊಲೀಸ್ ಠಾಣೆ ಹಿರಿಯ ಇನ್ಸ್‌ಪೆಕ್ಟರ್ ಸಿದ್ಧೇಶ್ವರ್ ಗೋವ್ ಹೇಳಿದ್ದಾರೆ.

Mumbai: BARC Scientific Officer Kills Self After Tiff With Wife

ಘಟನೆ ಗುರುವಾರ ನಡೆದಿದ್ದು, ಮೃತ ವ್ಯಕ್ತಿಯನ್ನು ಅನುಜ್ ತ್ರಿಪಾಠಿ ಎಂದು ಗುರುತಿಸಲಾಗಿದೆ.ಈ ಸಂಬಂಧ ಟ್ರೊಂಬೆ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವಿನ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ಗಮನಕ್ಕೆ ಬಂದ ಬಳಿಕ ತ್ರಿಪಾಠಿ ಅವರ ಪತ್ನಿ ಹಾಗೂ ಅವರ ಅಕ್ಕಪಕ್ಕದ ಮನೆಯವರು ತ್ರಿಪಾಠಿಯವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ವೈದ್ಯರು ಅವರು ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+