ಕರಾಳ ಸ್ಫೋಟದ 9 ವರ್ಷದ ಬಳಿಕ ಮುಂಬೈಗೆ ಆಗಮಿಸಲಿರುವ 'ಮೋಶೆ'
ಮುಂಬೈ, ಜನವರಿ 16: ನವೆಂಬರ್ 26, 2008 ರಂದು ನಡೆದ ಮುಂಬೈ ದಾಳಿಯಲ್ಲಿ ತನ್ನ ಪಾಲಕರನ್ನು ಕಳೆದುಕೊಂಡ ಮೋಶೆ ಹಾಲ್ಟ್ಜ್ ಬರ್ಗ್ ಒಂಭತ್ತು ವರ್ಷದ ಬಳಿಕ ಮೊದಲ ಬಾರಿಗೆ ಮುಂಬೈಗೆ ಆಗಮಿಸುತ್ತಿದ್ದಾರೆ.
ಮುಂಬೈಯ ನಾರಿಮನ್ ಹೌಸ್ ಗೆ ಇಂದು(ಜ.16) ಆಗಮಿಸಲಿರುವ ಬೇಬಿ ಮೋಶೆ, ಭಾರತದ ಪ್ರವಾಸದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮುಂಬೈ ದಾಳಿಯಲ್ಲಿ ಅಸುನೀಗಿದವರಿಗಾಗಿ ನಿರ್ಮಿಸುತ್ತಿರುವ ಸ್ಮಾರಕವನ್ನು ಉದ್ಘಾಟಿಸಲಿದ್ದಾರೆ.
2008 ರಂದು ನಡೆದ ಮುಂಬೈ ದಾಳಿಯಲ್ಲಿ ಮೋಶೆ ಅವರ ತಂದೆ-ತಾಯಿ ಇಬ್ಬರೂ ಭಯೋತ್ಪಾದಕರ ಗುಂಡೇಟಿಗೆ ಬಲಿಯಾಗಿದ್ದರು. ಆಗ ಮೋಶೆಗೆ ಎರಡು ವರ್ಷ! ಏನೂ ಅರಿಯದ ವಯಸ್ಸಿನಲ್ಲಿ ತಂದೆ-ತಾಯಿಗಳನ್ನು ಕಳೆದುಕೊಂಡ ಮೋಶೆ, ಭಯೋತ್ಪಾದನೆಯ ಕರಾಳ ಮುಖದ ಅಮಾಯಕ ಬಲಿಪಶುವಾಗಿ ಬದುಕಿದ್ದಾರೆ.

ದಾಳಿಯ ನಂತರ ಅನಾಥರಾದ ಮೋಶೆಯನ್ನು ಇಸ್ರೇಲಿನ ಅಫುಲಾ ನಗರದಲ್ಲಿದ್ದ ಅವರ ಅಜ್ಜಿ-ಅಜ್ಜಂದಿರುವ ಅಲ್ಲಿಗೇ ಕರೆತೊಯ್ದು, ಪೋಷಿಸುತ್ತಿದ್ದಾರೆ.
ಲಷ್ಕರ್ ಇ ತೊಯ್ಬಾ ಭಯೋತ್ಪಾದಕ ಸಂಘಟನೆ ನಡೆಸಿದ್ದ ಈ ದಾಳಿಯಲ್ಲಿ 164 ಜನ ಮೃತರಾಗಿದ್ದರು, 300 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.












Click it and Unblock the Notifications