ಉತ್ತರ ಮುಂಬೈನಲ್ಲಿ ಲಘು ಭೂಕಂಪ: 2.5 ತೀವ್ರತೆ ದಾಖಲು
ಮುಂಬೈ, ಜೂನ್ 17: ಉತ್ತರ ಮುಂಬೈನಲ್ಲಿ ಲಘು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 2.5 ತೀವ್ರತೆ ದಾಖಲಾಗಿದೆ.
Recommended Video
History of India China border dispute | Oneindia Kannada
ಈಗಾಗಲೇ ಕೊರೊನಾ ವೈರಸ್ ದಾಳಿಯಿಂದ ಕಂಗೆಟ್ಟಿರುವ ಮುಂಬೈನಲ್ಲಿ , ಇಂದು ಭೂಕಂಪದ ಅನುಭವವಾಗಿದೆ.
ಉತ್ತರ ಮುಂಬೈನ 103 ಕಿ.ಮೀ ದೂರದಲ್ಲಿ ಬೆಳಗ್ಗೆ 11.51ಕ್ಕೆ ಭೂಕಂಪ ಸಂಭವಿಸಿದೆ. ಸಾವುನೋವು ಸಂಭವಿಸಿರುವ ಕುರಿತು ಯಾವುದೇ ವರದಿಯಾಗಿಲ್ಲ.ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಭೂಕಂಪದ ಅನುಭವವಾದ ತಕ್ಷಣವೇ ಎಲ್ಲರೂ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

ಜೂನ್ 14, 15 ರಂದು ರಂದು ಗುಜರಾತ್‌ನ ರಾಜ್‌ಕೋಟ್ ಬಳಿ ಭೂಕಂಪ ಸಂಭವಿಸಿತ್ತು.
ಭಾನುವಾರ ಸಂಭವಿಸಿದ ಭೂಕಂದ ತೀವ್ರತೆ 5.5ರಷ್ಟು ದಾಖಲಾಗಿದೆ.
ರಾಷ್ಟ್ರೀಯ ಭೂಕಂಪನ ಕೇಂದ್ರದ ಪ್ರಕಾರ ರಾತ್ರಿ 8.13ಕ್ಕೆ ರಾಜಕೋಟ್‌ನಿಂದ ವಾಯುವ್ಯದ ಉತ್ತರ ದಿಕ್ಕಿನ 122 ಕಿಮೀ ಅಂತರದಲ್ಲಿ ಕಂಪನ ಕೇಂದ್ರ ಬಿಂದು ದಾಖಲಾಗಿದೆ. ಕಚ್ ಜಿಲ್ಲೆಯ ಬಚಾವು ಪ್ರದೇಶದ ಬಳಿ ಭೂಕಂಪನ ಸಂಭವಿಸಿತ್ತು. ಜೂನ್ 15 ರಂದು 4.4 ತೀವ್ರತೆಯ ಭೂಕಂಪ ಸಂಭವಿಸಿತ್ತು.












Click it and Unblock the Notifications