ಮುಂಬೈ ವಿಮಾನದಿಂದ ಆಯತಪ್ಪಿ ಬಿದ್ದ ಗಗನಸಖಿ

ಮುಂಬೈ, ಅಕ್ಟೋಬರ್ 15: ಏರ್ ಇಂಡಿಯಾ ವಿಮಾನದಿಂದ ಗಗನಸಖಿಯೊಬ್ಬರು ಅಚಾನಕ್ಕಾಗಿ ಬಿದ್ದು, ಗಾಯಗೊಂಡ ಘಟನೆ ಮುಂಬೈಯ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಮುಂಬೈಯಿಂದ ದೆಹಲಿಗೆ ತೆರಳುತ್ತಿದ್ದ AI 864 ವಿಮಾನ ನಿಲ್ದಾಣದಲ್ಲಿ ವಿಮಾನದ ಬಾಗಿಲು ಮುಚ್ಚುತ್ತಿದ್ದ ಗಗನಸಖಿ, ಆಯತಪ್ಪಿ ಕೆಳಗೆ ಬಿದ್ದಿದ್ದು ಅವರ ಕಾಲಿಗೆ ಗಂಭೀರ ಗಾಯವಾಗಿದೆ ಎಂದು ಮೂಲಗಳು ತಿಳಿಸಿವೆ. ಅವರನ್ನು ಮುಂಬೈಯ ನಾನಾವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

53 ವರ್ಷ ವಯಸ್ಸಿನ ಹರ್ಷಾ ಲೋಬೋ ಎಂಬ ಗಗನಸಖಿ ವಿಮಾನದ ಬಾಗಿಲು ಮುಚ್ಚುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಬೇಳಿಗ್ಗೆ 7 ಗಂಟೆಗೆ ಹೊರಡಬೇಕಿದ್ದ ಈ ವಿಮಾನ, ಘಟನೆಯ ನಂತರ ಒಂದೂವರೆ ಗಂಟೆ ತಡವಾಗಿ ಹೊರಟಿತು.

An Air India air hostess fell off a Mumbai-Delhi flight

ಮೈಸೂರು ದಸರಾ - ವಿಶೇಷ ಪುರವಣಿ

ಇತ್ತೀಚೆಗಷ್ಟೇ 136 ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ವಿಮಾನ ವಿಮಾನನಿಲ್ದಾಣದ ಗೋಡೆಗೆ ಬಡಿದ ಘಟನೆ ತಮಿಳುನಾಡಿನ ತಿರುಚಿಯಲ್ಲಿ ನಡೆದಿತ್ತು. ಅದೃಷ್ಟವಶಾತ್ ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದರು.

ಇದಕ್ಕೂ ಮುನ್ನ, ಕೆಲ ದಿನಗಳ ಹಿಂದೆ ಮುಂಬೈಯಿಂದ ಜೈಪುರಕ್ಕೆ ತೆರಳುತ್ತಿದ್ದ ಜೆಟ್ ಏರ್ವೇಸ್ ವಿಮಾನದಲ್ಲಿ ಸಿಬ್ಬಂದಿಯು ಕ್ಯಾಬಿನ್ ಪ್ರೆಶರ್ ನಿರ್ವಹಣೆಯ ಸ್ವಿಚ್ ಒತ್ತುವುದಕ್ಕೆ ಮರೆತಿದ್ದರಿಂದ 166ಕ್ಕೂ ಹೆಚ್ಚು ಪ್ರಯಾಣಿಕರು ಉಸಿರಾಟದ ಸಮಸ್ಯೆಯಿಂದ ಬಳಲಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+