ಮದುವೆಗೆ ನಿರಾಕರಿಸಿದ ನಟಿಗೆ ಚಾಕುವಿನಿಂದ ಇರಿದ ಫೇಸ್‌ಬುಕ್ ಸ್ನೇಹಿತ

ಮುಂಬೈ, ಅಕ್ಟೋಬರ್ 27: ಫೇಸ್‌ಬುಕ್‌ನಲ್ಲಿ ಸ್ನೇಹಿತನಾದ ವ್ಯಕ್ತಿಯನ್ನು ಮದುವೆಯಾಗಲು ನಿರಾಕರಿಸಿದ ನಟಿ ಮಾಳ್ವಿ ಮಲ್ಹೋತ್ರಾ ಅವರನ್ನು ಸೋಮವಾರ ಚಾಕುವಿನಿಂದ ಇರಿದ ಘಟನೆ ನಡೆದಿದೆ. ಮುಂಬೈನ ವರ್ಸೋವಾದ ಫಿಶರೀಸ್ ಯುನಿವರ್ಸಿಟಿ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ಕುಮಾರ್ ಮಹಿಪಾಲ್ ಸಿಂಗ್ ಎಂಬ ವ್ಯಕ್ತಿ ಮಾಧವಿ ಅವರನ್ನು ಚಾಕುವಿನಿಂದ ಇರಿದು ತನ್ನ ಆಡಿ ಕಾರ್‌ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆತನನ್ನು ಇನ್ನೂ ಬಂಧಿಸಲು ಸಾಧ್ಯವಾಗಿಲ್ಲ. 2019ರಿಂದ ಫೇಸ್‌ಬುಕ್‌ನಲ್ಲಿ ಮಾಧವಿ ಅವರಿಗೆ ಸ್ನೇಹಿತನಾಗಿದ್ದ ಆತ, ಸಿನಿಮಾ ನಿರ್ಮಾಣಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದ ಎನ್ನಲಾಗಿದೆ.

ಅವರಿಬ್ಬರೂ ಕೆಲವು ಬಾರಿ ಭೇಟಿಯಾಗಿದ್ದರು. ಕುಮಾರ್ ಮಹಿಪಾಲ್ ಸಿಂಗ್ ತನ್ನೊಂದಿಗೆ ಸಂಬಂಧ ಇರಿಸಿಕೊಳ್ಳಲು ಹಾಗೂ ಮದುವೆಯಾಗುವುದನ್ನು ಬಯಸಿದ್ದ. ಅದಕ್ಕೆ ಮಾಳ್ವಿ ನಿರಾಕರಿಸಿದ್ದರು. ಆತನೊಂದಿಗೆ ಮಾತನಾಡುವುದನ್ನು ಸಹ ನಿಲ್ಲಿಸಿದ್ದರು. ಇದರಿಂದ ಕೋಪಗೊಂಡಿದ್ದ ಆತ ಈ ದಾಳಿ ನಡೆಸಿದ್ದಾನೆ. ಈ ಬಗ್ಗೆ ಮಾಳ್ವಿ ದೂರು ಸಲ್ಲಿಸಿದ್ದಾರೆ.

 Actress Malvi Malhotra Stabbed By Facebook Friend After She Refuses To Marry

ಅಕ್ಟೋಬರ್ 25ರಂದು ದುಬೈನಿಂದ ಚಿತ್ರೀಕರಣವೊಂದನ್ನು ಮುಗಿಸಿ ವಾಪಸಾಗಿದ್ದೆ. ಸೋಮವಾರ ರಾತ್ರಿ ಕಾಫಿ ಶಾಪ್ ಒಂದರಿಂದ ಮರಳುತ್ತಿದ್ದಾಗ ಕುಮಾರ್ ಎದುರಾಗಿದ್ದ. ತನ್ನ ಆಡಿ ಕಾರ್‌ನಿಂದ ಇಳಿದಿದ್ದ ಆತ, ನಿಮ್ಮೊಂದಿಗೆ ಮಾತನಾಡಬೇಕು ಎಂದ. ಅದಕ್ಕೆ ನಿರಾಕರಿಸಿದಾಗ ಚಾಕು ಹೊರತೆಗೆದು ಹೊಟ್ಟೆ, ಬಲಗೈ ಹಾಗೂ ಎಡಗೈನ ಬೆರಳಿನ ಮೇಲೆ ಇರಿದು ಪರಾರಿಯಾಗಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.

ಮಾಳ್ವಿ ಅವರು ಮುಂಬೈನ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರು ಹೋಟೆಲ್ ಮಿಲನ್ ಸಿನಿಮಾ ಮತ್ತು ಉಡಾನ್ ಧಾರಾವಾಹಿಗಳಲ್ಲಿ ನಟಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+