• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಶಕದ ಬಳಿಕ ಮತ್ತೊಮ್ಮೆ ರಾಜಕೀಯಕ್ಕೆ ಸಂಜಯ್ ದತ್ ಎಂಟ್ರಿ

|

ಮುಂಬೈ, ಆಗಸ್ಟ್ 26: ಸರಿ ಸುಮಾರು 10 ವರ್ಷಗಳ ಬಳಿಕ ನಟ ಸಂಜಯ್ ದತ್ ರಾಜಕೀಯ ಮರು ಪ್ರವೇಶ ಮಾಡುತ್ತಿದ್ದಾರೆ. ಈ ಹಿಂದೆ ಸಮಾಜವಾದಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಸಂಜಯ್ ದತ್ ಮೊದಲ ಯತ್ನದಲ್ಲಿ ಸಫಲರಾಗಿರಲಿಲ್ಲ.

"ಈಗ ರಾಜಕೀಯ ರಂಗಕ್ಕೆ ರೀ ಎಂಟ್ರಿ ಕೊಡುತ್ತಿದ್ದು, ಮಹಾರಾಷ್ಟ್ರದಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿರುವ ರಾಷ್ಟ್ರೀಯ ಸಮಾಜ ಪಕ್ಷ (ಆರ್‌ಎಸ್‌ಪಿ)ಕ್ಕೆ ಸೆಪ್ಟೆಂಬರ್ 25ರಂದು ಅಧಿಕೃತವಾಗಿ ಸೇರಲಿದ್ದಾರೆ" ಎಂದು ಪಕ್ಷದ ಸ್ಥಾಪಕ ಮಹದೇವ್ ಜಂಕರ್ ಹೇಳಿದ್ದಾರೆ.

ಕಾಂಗ್ರೆಸ್ಸಿನ ಕಾರ್ಯದರ್ಶಿ ಸ್ಥಾನದಿಂದ ಮಾಜಿ ಸಂಸದೆ ಪ್ರಿಯಾದತ್ ವಜಾ

   ಲೋಕಸಭೆ ಚುನಾವಣೆ ಸಮಯದಲ್ಲಿ ನರೇಂದ್ರ ಮೋದಿಗೆ ಸಿಗುತ್ತಿದೆ ಹೊಸ ಹೊಸ ಬಿರುದುಗಳು | Oneindia Kannada

   ರಾಷ್ಟ್ರೀಯ ಸಮಾಜ ಪಕ್ಷದ ಸಂಸ್ಥಾಪಕ(RSP) ಹಾಗೂ ಮಹಾರಾಷ್ಟ್ರದ ಕ್ಯಾಬಿನೆಟ್ ಸಚಿವ ಮಹದೇವ್ ಜಂಕರ್ ಈ ಬಗ್ಗೆ ಮಾತನಾಡಿ, "ಸಿನಿಮಾ ಮಾಧ್ಯಮದಲ್ಲಿರುವ ರಾಜಕೀಯ ಆಸಕ್ತಿಯುಳ್ಳವರಿಗೆ ನಮ್ಮ ಪಕ್ಷದ ಆಹ್ವಾನ ನೀಡಿದೆ. ಸಂಜಯ್ ದತ್ ಅವರು ಸೆ.25ರಂದು ಆರ್ ಎಸ್ ಪಿ ಸೇರಲಿದ್ದಾರೆ" ಎಂದರು.

   2014ರಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎ ಮಿತ್ರಪಕ್ಷವಾಗಿದ್ದ ಆರ್ ಎಸ್ಪಿ 6 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆರ್ ಎಸ್ ಪಿಯ ರಾಹುಲ್ ಕುಲ್ ಅವರು ದಂಡ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು.

   ಧಂಗರ್ ಸಮುದಾಯ ನಂಬಿಕೊಂಡಿರುವ ಆರ್ ಎಸ್ ಪಿ

   ಧಂಗರ್ ಸಮುದಾಯ ನಂಬಿಕೊಂಡಿರುವ ಆರ್ ಎಸ್ ಪಿ

   2009ರ ಲೋಕಸಭೆ ಚುನಾವಣೆಯಲ್ಲಿ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಸ್ಪರ್ಧಿಸಿದ್ದ ಜಂಕರ್ ಅವರು ಸೋಲು ಕಂಡಿದ್ದರು. ಈಗ ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೀಟುಗಳನ್ನು ನೀಡಬೇಕು ಎಂದು ಆರ್ ಎಸ್ ಪಿ ಬೇಡಿಕೆಯಿಟ್ಟಿದೆ. ಧಂಗರ್ ಕುರುಬ ಜನಾಂಗದ ಮತಗಳನ್ನು ನಂಬಿಕೊಂಡಿರುವ ಆರ್ ಎಸ್ ಪಿಗೆ ಸೀಟು ಹಂಚಿಕೆ ವಿಷಯದಲ್ಲಿ ಬಿಜೆಪಿ ಕೂಡಾ ಆಸಕ್ತಿ ಹೊಂದಿದೆ ಎಂಬ ಸುದ್ದಿಯಿದೆ. ಧಂಗರ್ ಸಮುದಾಯವರನ್ನು ಪರಿಶಿಷ್ಟ ಪಂಗಡ ಕೆಟಗರಿಗೆ ಸೇರಿಸುವಂತೆ ಆರ್ ಎಸ್ಪಿ ಆಗ್ರಹಿಸುತ್ತಿದೆ. ಸದ್ಯ ವಿಮುಕ್ತ ಜಾತಿ ಅಲೆಮಾರಿ ಬುಡಕಟ್ಟು (VJNT) ಎಂದು ಈ ಸಮುದಾಯವನ್ನು ಗುರುತಿಸಲಾಗುತ್ತಿದೆ.

   ಸಂಜಯ್ ದತ್ ರಾಜಕೀಯ ಇನ್ನಿಂಗ್ಸ್

   ಸಂಜಯ್ ದತ್ ರಾಜಕೀಯ ಇನ್ನಿಂಗ್ಸ್

   2009ರ ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಲಕ್ನೋದಿಂದ ಸ್ಪರ್ಧಿಸಿದ್ದ ಸಂಜಯ್ ದತ್ ಅವರು ಸ್ಪರ್ಧೆಯಿಂದ ಹಿಂದೆ ಸರಿಯುವಂಥ ಸನ್ನಿವೇಶ ಎದುರಾಗಿತ್ತು. ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಅಪರಾಧಿ ಎನಿಸಿಕೊಂಡಿದ್ದರು. ಆದರೆ, ಸಮಾಜ ವಾದಿ ಪಕ್ಷದ ಪರ ಗುರುತಿಸಿಕೊಂಡಿದ್ದ ಸಂಜಯ್ ದತ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ನಂತರ ಆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಲ್ಲದೆ, ಪಕ್ಷವನ್ನು ತೊರೆದರು.

   ಸಂಜು ಚಿತ್ರತಂಡಕ್ಕೆ ಲೀಗಲ್ ನೋಟಿಸ್ ನೀಡಿದ ಅಬು ಸಲೇಂ

   ಕಾಂಗೆಸ್ ನಿಷ್ಠವಾಗಿರುವ ದತ್ ಕುಟುಂಬ

   ಕಾಂಗೆಸ್ ನಿಷ್ಠವಾಗಿರುವ ದತ್ ಕುಟುಂಬ

   2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸಂಜಯ್ ದತ್ ಅವರು ಚುನಾವಣೆ ಸ್ಪರ್ಧಿಸುವ ಸಾಧ್ಯತೆ ಬಗ್ಗೆ ಸುದ್ದಿ ಹಬ್ಬಿತ್ತು. ಆದರೆ, ಸುದ್ದಿಯನ್ನು ಅಲ್ಲಗೆಳೆದಿದ್ದರು. ಮುಂಬೈ ಪಶ್ಚಿಮ ಕ್ಷೇತ್ರದಿಂದ ಸಂಜಯ್ ದತ್ ತಂದೆ ಸುನೀಲ್ ದತ್ ಅವರು ಐದು ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದರು. ಯುಪಿಎ 1 ಸರ್ಕಾರದಲ್ಲಿ ಕ್ರೀಡಾ ಮತ್ತು ಯುವಜನ ಖಾತೆ ಸಚಿವರಾಗಿದ್ದರು.

   2004ರಿಂದ ಮೇ 2005ರ ತನಕ ಸಚಿವರಾಗಿದ್ದ ದತ್ ಅವರು ನಿಧನರಾಗುವ ತನಕ ಸಂಜಯ್ ದತ್ ಅವರು ರಾಜಕೀಯ ರಂಗ ಸೇರ್ಪಡೆಗೆ ಬೆಂಬಲಿಸಿರಲಿಲ್ಲ. ಸಂಜಯ್ ದತ್ ಸೋದರಿ ಪ್ರಿಯಾ ದತ್ ಕಾಂಗ್ರೆಸ್ ನ ವಿವಿಧ ಹುದ್ದೆಗಳಿದ್ದವರು, ಮುಂಬೈನಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು.

   ಸಂಜು ಚಿತ್ರದ ಬಗ್ಗೆ ಆರೆಸ್ಸೆಸ್ ಆಕ್ಷೇಪ

   ಸಂಜು ಚಿತ್ರದ ಬಗ್ಗೆ ಆರೆಸ್ಸೆಸ್ ಆಕ್ಷೇಪ

   ಸಂಜಯ್ ದತ್ ಗೆ ಒಳ್ಳೆ ಇಮೇಜ್ ತಂದು ಕೊಡುವ ಉದ್ದೇಶದಿಂದ ಅವರ ಬದುಕಿನ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ರಾಜಕುಮಾರ್​ ಹಿರಾನಿ 'ಸಂಜು' ಚಿತ್ರವನ್ನು ಹೊರ ತರಲಾಗಿದೆ ಎಂದು ಆರೆಸ್ಸೆಸ್ ತನ್ನ ಮುಖವಾಣಿ' ಪಾಂಚಜನ್ಯ' ದಲ್ಲಿ ಆಕ್ಷೇಪ ವ್ಯಕ್ತಪಡಿಸಿತ್ತು. ಹಿರಾನಿಗೆ ಪ್ರಶ್ನೆಗಳ ಸುರಿಮಳೆಗೈದು, ಸಂಜಯ್ ದತ್ ಚಿತ್ರವನ್ನು ಮಾಡಿರುವ ಉದ್ದೇಶವೇನು? ಈ ಚಿತ್ರದಿಂದ ಯುವಜನತೆಗೆ ಯಾವ ಸಂದೇಶ ನೀಡುತ್ತಿದ್ದೀರಿ? ಖಳಪಾತ್ರವನ್ನು ಮಾದರಿಯಾಗಿ ಯುವ ಜನತೆ ಸ್ವೀಕರಿಸುವುದಿಲ್ಲವೇ? ಅಪರಾಧ, ದೇಶದ್ರೋಹ ಕೃತ್ಯಗಳ ವೈಭವೀಕರಣ ಎಷ್ಟು ಸರಿ? ಸಂಜಯ್ ಅವರನ್ನು ಸಾಚಾ ಎಂದು ತೋರಿಸಲು ಅವರ ಪರ ಪ್ರಚಾರಕ್ಕಾಗಿ ಈ ಚಿತ್ರವನ್ನು ಬಳಸಿದ್ದು ಸರಿಯೇ ಎಂದು ಕೇಳಲಾಗಿತ್ತು.

   English summary
   Actor Sanjay Dutt(60), is set to join the Rashtriya Samaj Paksh (RSP) on September 25, party founder and Cabinet minister Mahadev Jankar disclosed.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X