ವಿಡಿಯೋ: ನಟ ನವಾಜ್ ಸಿದ್ದಿಕಿ ಡಿಎನ್ಎ ಟೆಸ್ಟ್ ಆಯ್ತಂತೆ!
ಹಿಂದಿ ಚಿತ್ರರಂಗದ ಪ್ರಬುದ್ಧ ನಟ ನವಾಜುದ್ದೀನ್ ಸಿದ್ದಿಕಿ ಅವರು ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು ಹಲವರ ಕಣ್ತೆರೆಸಿದ್ದಾರೆ. ಡಿಎನ್ಎ ಟೆಸ್ಟ್ ಮಾಡಿಸಿಕೊಂಡೆ, ನಾನು ಯಾರು ಎಂಬುದು ತಿಳಿಯಿತು ಎಂದಿದ್ದಾರೆ
ಮುಂಬೈ, ಏಪ್ರಿಲ್ 24 : ಹಿಂದಿ ಚಿತ್ರರಂಗದ ಪ್ರಬುದ್ಧ ನಟ ನವಾಜುದ್ದೀನ್ ಸಿದ್ದಿಕಿ ಅವರು ಸೋಮವಾರದಂದು ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು ಹಲವರ ಕಣ್ತೆರೆಸಿದ್ದಾರೆ.
ಸೋನು ನಿಗಮ್ ಅವರ ಅಜಾನ್ ವಿವಾದ ಕೂಗು ಕೇಳುತ್ತಿರುವ ಸಂದರ್ಭದಲ್ಲೇ ಸಿದ್ದಿಕಿ ಅವರ ವಿಡಿಯೋ ವಿಶೇಷ ಎನಿಸಿಕೊಂಡಿದೆ. ಸಿಕ್ಸ್ಟೀನ್ ಪಾಯಿಂಟ್ ಸಿಕ್ಸ್ ಸಿಕ್ಸ್ ಹೆಸರಿನ ಈ ವಿಡಿಯೋದಲ್ಲಿ ಪ್ಲಕಾರ್ಡ್ ಹಿಡಿದುಕೊಂಡು ನವಾಜುದ್ದೀನ್ ಸಿದ್ದಿಕಿ ಆವರು ತಮ್ಮನ್ನು ತಾವು ಪರಿಚಯಿಸಿಕೊಳ್ಳುತ್ತಾ ಹೋಗುತ್ತಾರೆ.

ಇತ್ತೀಚೆಗೆ ನನ್ನ ಡಿಎನ್ಎ ಪರೀಕ್ಷೆ ನಡೆಸಲಾಯಿತು, ನಾನು ಯಾರು ಎಂಬುದು ತಿಳಿಯಿತು ಎಂಬ ಮುನ್ನುಡಿಯೊಂದಿಗೆ ಆರಂಭವಾಗಿ, ಹಿಂದೂ(ಶೇ 16.66)ವಾಗಿದ್ದೇನೆ ಎಂದು ಹಣೆಗೆ ತಿಲಕ ಇಟ್ಟ ಹಿಂದೂ ವೇಷದಲ್ಲಿ ಕಾಣಿಸಿಕೊಳ್ಳುತ್ತಾರೆ.
Sixteen Point Six Six...https://t.co/MKS9gBY6R1
— Nawazuddin Siddiqui (@Nawazuddin_S) April 24, 2017
ಇದೇ ರೀತಿ, ಮುಸ್ಲಿಮ್ ಕ್ರಿಶ್ಚಿಯನ್, ಬೌದ್ಧ ಎಲ್ಲವೂ ಆಗಿದ್ದೇನೆ. ಆದರೆ, ನನ್ನ ಆತ್ಮವನ್ನು ನಾನು ಶೋಧಿಸಿದಾಗ ನಾನು ಶೇ 100ರಷ್ಟು 'ಕಲಾವಿದ' ಎಂಬುದು ತಿಳಿದು ಬಂದಿದೆ ಎಂದು ತೋರಿಸಿದ್ದಾರೆ.
ಈ ಮೂಲಕ ಸಿದ್ದಿಕಿ ಅವರು ಕಲಾವಿದರಿಗೆ ಯಾವುದೇ ಜಾತಿ, ಮತ, ಪಂಥಗಳ ಬೇಲಿ ಇಲ್ಲ ಎಂಬುದನ್ನು ಸಿದ್ದಿಕಿ ಸಾರಿದ್ದಾರೆ.












Click it and Unblock the Notifications