ಮುಂಬೈ: ರೇಪ್ ಕೇಸಲ್ಲಿ ಬಾಲಿವುಡ್ ನಟ ಅಂದರ್

ಮುಂಬೈ, ಏ.26: ಹಿಂದಿ ಚಿತ್ರರಂಗ ಮತ್ತೊಮ್ಮೆ ಶಾಕ್ ಗೆ ಒಳಗಾಗಿದೆ. ಬಾಲಿವುಡ್ ನಟ ಇಂದರ್ ಕುಮಾರ್ ಅವರನ್ನು ಅತ್ಯಾಚಾರ ಪ್ರಕರಣವೊಂದರಲ್ಲಿ ಇಲ್ಲಿನ ವರ್ಸೋವಾ ಪೊಲೀಸರು ಬಂಧಿಸಿದ್ದಾರೆ. 23 ವರ್ಷ ವಯಸ್ಸಿನ ರೂಪದರ್ಶಿಯನ್ನು ಎರಡು ಬಾರಿ ಅತ್ಯಾಚಾರ ಮಾಡಿದ ಅರೋಪವನ್ನು ಇಂದರ್ ಕುಮಾರ್ ಸರಫ್ ಮೇಲೆ ಹೊರೆಸಲಾಗಿದೆ.

ಸಿನಿಮಾದಲ್ಲಿ ಪಾತ್ರ ಬೇಕಾದರೆ ಹಾಸಿಗೆ ಹಂಚಿಕೋ ಎಂದು ರೂಪದರ್ಶಿಯನ್ನು ಪುಸಲಾಯಿಸಿದ್ದ ಇಂದರ್ ಆಕೆ ಮೇಲೆ ಎರಡು ಬಾರಿ ತನ್ನ ಮನೆಯಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಕಳೆದ ಎರಡು ಮೂರು ದಿನಗಳಲ್ಲಿ ಈ ಲೈಂಗಿಕ ಕಿರುಕುಳ ನದೆದಿದ್ದು, ಬಾಲಿವುಡ್ ಸಿನಿಮಾಗಳಲ್ಲಿ ಪ್ರಮುಖ ಪಾತ್ರ ಕೊಡಿಸುವ ಆಮಿಷ ಒಡ್ಡಿದ್ದ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮಿಲಿಂದ್ ಭಾರಂಬೆ ಹೇಳಿದ್ದಾರೆ.

ಲೈಂಗಿಕ ಕಿರುಕುಳದ ವಾಸನೆ ಮೂಗಿಗೆ ಬಡಿಯುತ್ತಿದ್ದಂತೆ ಇಂದರ್ ಹಿಡಿತದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ರೂಪದರ್ಶಿ ತಲೆಗೆ ಬಿಯರ್ ಬಾಟಲಿಯಿಂದ ಭಾರಿ ಪೆಟ್ಟು ಬಿದ್ದಿದೆ. ಆಕೆಯನ್ನು ಅಂಧೇರಿಯ ಮನೆಯಲ್ಲಿ ಕೂಡಿ ಹಾಕಿದ್ದ ಇಂದರ್ ಲೈಂಗಿಕ ಕಿರುಕುಳ ನೀಡಿದ್ದಾನೆ. ರೂಪದರ್ಶಿಯನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಲಾಗಿದೆ. ವರದಿ ಬಂದ ಮೇಲೆ ಮುಂದಿನ ಕ್ರಮ ಜರುಗಿಸಲಾಗುವುದು. ಇಂದರ್ ನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಆಯುಕ್ತ ಮಿಲಿಂದ್ ತಿಳಿಸಿದರು.

Actor Inder Kumar

ರೂಪದರ್ಶಿ ದೂರು ನೀಡಲು ಬಂದಾಗ ಆಕೆ ಮೈಮೇಲೆ ಸಿಗರೇಟಿನಿಂದ ಸುಟ್ಟಿರುವ ಗಾಯದ ಗುರುತುಗಳು ಕಂಡು ಬಂದಿತ್ತು ಎಂದು ವಾರ್ಸೋವಾ ಠಾಣೆಯ ಹಿರಿಯ ಇನ್ಸ್ ಪೆಕ್ಟರ್ ಹರಿಶ್ಚಂದ್ರ ಪಾರ್ಮಾಲೆ ಹೇಳಿದ್ದಾರೆ. ನಟ ಇಂದರ್ ಮೇಲೆ ಐಪಿಸಿ ಸೆಕ್ಷನ್ 376, 326 ಹಾಗೂ 506 ಅನ್ವಯ ದೂರು ದಾಖಲಿಸಿಕೊಳ್ಳಲಾಗಿದೆ.

ಮಾಸೂಮ್, ಕಿಲಾಡಿಯೋಂಕಾ ಕಿಲಾಡಿ, ಕಹಿ ಪ್ಯಾರ್ ನ ಹೋ ಜಾಯೆ, ಗಜ ಗಾಮಿನಿ ಅಲ್ಲದೆ ಸಲ್ಮಾನ್ ಖಾನ್ ಅವರ ವಾಂಟೆಂಡ್ ಚಿತ್ರದಲ್ಲಿ ನಟಿಸಿದ್ದ ಇಂದರ್ ಅವರಿಗೆ ಮದುವೆ ಆಗಿದ್ದು, ಪತ್ನಿ ಪಲ್ಲವಿ ಜತೆ ವೈಮನಸ್ಯ ಮುಂದುವರೆದಿದೆ. ಇಬ್ಬರು ಪ್ರತ್ಯೇಕ ಫ್ಲಾಟಿನಲ್ಲಿ ವಾಸಿಸುತ್ತಿತ್ತು, ಶುಕ್ರವಾರ ಸಂಜೆ ಕೂಡಾ ಜೋರಾಗಿ ಕಿತ್ತಾಡಿದ್ದಾರೆ. ಇಬ್ಬರು ವಿವಾಹ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂಬ ಸುದ್ದಿಯೂ ಇದೆ. ನನ್ನ ಪತಿ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಪಲ್ಲವಿ ಅವರು ವಾರ್ಸೋವಾ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಠಾಣೆಗೆ ಬಂದ ಇಂದರ್ ಇದು ಕೌಟುಂಬಿಕ ಸಮಸ್ಯೆ ಮನೆಯಲ್ಲೇ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿ ಪತ್ನಿಯನ್ನು ಕರೆದುಕೊಂಡು ವಾಪಸ್ ಮನೆಗೆ ಬಂದಿದ್ದರು.

ನಂತರ ರೂಪದರ್ಶಿ ಇಂದರ್ ಮನೆ ಪ್ರವೇಶಿಸಿದ್ದು, ಆಕೆಯನ್ನು ಮನೆಯಲ್ಲೇ ಇರಿಸಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ವಿಚಾರಣೆ ವೇಳೆ ಈ ಬಗ್ಗೆ ಪ್ರತಿಕ್ರಿಯಿಸಿದ ಇಂದರ್ 'ನಾನು ಕೌಟುಂಬಿಕ ಕಲಹದಿಂದ ಬೇಸತ್ತಿದ್ದೆ. ಹೀಗಾಗಿ ರೂಪದರ್ಶಿಯನ್ನು ಕರೆಸಿಕೊಂಡು ಕೆಲ ಕಾಲ ಇರಿಸಿಕೊಂಡಿದ್ದೆ. ಇಬ್ಬರ ನಡುವೆ ನಡೆದಿದ್ದು ಸಹಮತ ಸೆಕ್ಸ್. ನಾನೇನು ಆಕೆಗೆ ಮೋಸ ಮಾಡಿ ಲೈಂಗಿಕ ಸುಖ ಅನುಭವಿಸಿಲ್ಲ' ಎಂದಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+