ವೃದ್ಧರೊಬ್ಬರು ಡೇಟಿಂಗ್ ವೆಬ್‌ಸೈಟ್‌ಗೆ ಹೋಗಿ ಕಳೆದುಕೊಂಡಿದ್ದೆಷ್ಟು?
ಮುಂಬೈ, ಏ.2: ವೃದ್ಧರೊಬ್ಬರು ಕುತೂಹಲಕ್ಕೆ ಡೇಟಿಂಗ್ ವೆಬ್‌ಸೈಟ್ ಕ್ಲಿಕ್ ಮಾಡಿ ಪೇಚಿಗೆ ಸಿಲುಕಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಆಗಿದ್ದಿಷ್ಟು: 65 ವರ್ಷದ ವೃದ್ಧರೊಬ್ಬರು ಡೇಟಿಂಗ್ ಸೈಟ್ ಗೆ ಹೋಗಿ ಕ್ಲಿಕ್ ಮಾಡಿದ್ದಾರೆ.www.locanto.net ಎಂಬ ಉಚಿತ ಕ್ಲಾಸಿಫೈಡ್ಸ್ ಸೈಟ್‌ನಲ್ಲಿ ಮುದುಕ 2018ರಲ್ಲಿ ವೆಬ್‌ಸೈಟ್ ಚೆಕ್ ಮಾಡುತ್ತಿರುವ ವೇಳೆ ಮನರಂಜನೆ ಎಂದು ಕ್ಲಿಕ್ ಮಾಡಿದ್ದಾರೆ ಅಷ್ಟಕ್ಕೆ 46 ಲಕ್ಷ ಕಳೆದುಕೊಂಡಿದ್ದಾರೆ.

ವೆಬ್‌ಸೈಟ್‌ನಲ್ಲಿ ಮೊದಲು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಬಳಿಕ ಮೀರಾ ಎಂಬ ಮಹಿಳೆ ಕರೆ ಮಾಡಿ ಮೂರು ಫೋಟೊಗಳನ್ನು ಕಳಹಿಸಿ ಇದರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿ ಅವರು ನಿಮ್ಮೊಂದಿಗೆ ಒಂದು ವರ್ಷ ಡೇಟಿಂಗ್ ಮಾಡುತ್ತಾರೆ. ಅದಕ್ಕೆ 25 ಸಾವಿರ ರೂ ನೀಡಬೇಕು ಎಂದು ಹೇಳಿ ಅಷ್ಟಷ್ಟಾಗಿ ಒಟ್ಟು 46 ಲಕ್ಷ ರೂ ದೋಚಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಹಣವನ್ನು ವಾಪಸ್ ನೀಡುವುದಾಗಿಯೂ ತಿಳಿಸಿದ್ದರು. ಹಣ ನೀಡದಿರುವಾಗ ದೂರು ನೀಡಿದ್ದಾರೆ.












Click it and Unblock the Notifications